ಧಾರವಾಡ - ಹುಬ್ಬಳ್ಳಿ

ನಿರುದ್ಯೋಗ, ನೇಮಕಾತಿ ಅಕ್ರಮಗಳ ವಿರುದ್ಧ ಯುವಜನ ಸಮ್ಮೇಳನದ ಪೋಸ್ಟರ್ ಬಿಡುಗಡೆ

ನಿರುದ್ಯೋಗ, ನೇಮಕಾತಿ ಅಕ್ರಮಗಳ ವಿರುದ್ಧ  ಯುವಜನ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಲೋಕದರ್ಶನ ವರದಿ 

            ಧಾರವಾಡ 17 : ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅಕ್ರಮ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಹಾಗೂ ಅಶ್ಲೀಲತೆ, ಆನ್ಲೈನ್‌ಗೇಮ್, ಬೆಟ್ಟಿಂಗ್, ಮದ್ಯ ಹಿ ಮಾದಕ ವಸ್ತುಗಳ ಹಾವಳಿಯನ್ನು ವಿರೋಧಿಸಿ ರಾಜಸ್ಥಾನದ ಜೈಪುರದಲ್ಲಿ ಇದೇ ನವೆಂಬರ್ 27,28,29 ರಂದು ನಡೆಯಲಿರುವ ಎಐಡಿವೈಒ 4ನೇ ಅಖಿಲ ಭಾರತ ಯುವಜನ ಸಮ್ಮೇಳನದ ಫೊಸ್ಟರ್‌ಅನ್ನು ಎಐಡಿವೈಒ ಜಿಲ್ಲಾಧ್ಯಕ್ಷರಾದ ಭವಾನಿ ಶಂಕರ್‌ಎಸ್‌ಗೌಡ ಸಂಘಟನೆಯ ಜಿಲ್ಲಾಕಚೇರಿಯಲ್ಲಿ ಬಿಡುಗಡೆ ಮಾಡಿದರು. 

           ಈ ಸಂದರ್ಭದಲ್ಲಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಅಪರೂಪಕ್ಕೆ ನಡೆಯುತ್ತಿರುವ ನೇಮಕಾತಿಗಳಲ್ಲಿಯೂ ಸಹ ಪರೀಕ್ಷಾಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ರದ್ದಾಗುವುದು, ಭ್ರಷ್ಟಾಚಾರ ಮುಂತಾದಗಂಭೀರ ಸಮಸ್ಯೆಗಳಿಂದ ಯುವಜನರು ತತ್ತರಿಸಿದ್ದಾರೆ.

             ಇನ್ನೊಂದೆಡೆ ಅಶ್ಲೀಲತೆ, ಮದ್ಯ-ಮಾದಕ ವಸ್ತುಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಆನ್ಲೈನ್‌ಗೇಮ್ ಮತ್ತು ಬೆಟ್ಟಿಂಗ್ ಹಾವಳಿಯಿಂದ ಯುವಜನರ ಆತ್ಮಹತ್ಯೆಯ ಘಟನೆಗಳು ಹೆಚ್ಚುತ್ತಿವೆ. ಇದರ ವಿರುದ್ಧ ಸಂಘಟಿತರಾಗಿ ಹೊರಾಡಲುಯುವಜನರು ಮುಂದೆ ಬರಬೇಕುಎಂದರು. 

           ಈ ಸಮ್ಮೇಳನವನ್ನು ಖ್ಯಾತ ಆರ್ಥಿಕತಜ್ಞರು ಮತ್ತು ಜೆ.ಎನ್‌.ಯು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಅರುಣಕುಮಾರ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಎಸ್‌.ಯುಸಿಐ(ಸಿ) ಪಕ್ಷದಕೇಂದ್ರ ಸಮಿತಿ ಸದಸ್ಯರಾದ ಅರುಣಸಿಂಗ್, ಭಾಷಣಕಾರರಾಗಿಎಐಡಿವೈಒ ಪ್ರಧಾನ ಕಾರ್ಯದರ್ಶಿಗಳಾದ ಅಮರಜಿತ್ ಕುಮಾರ್ ಮಾತನಾಡಲಿದ್ದು, ಬಹಿರಂಗಅಧಿವೇಶನದಅಧ್ಯಕ್ಷತೆಯನ್ನು ಅಖಿಲ ಭಾರತಅಧ್ಯಕ್ಷರಾದ ನಿರಂಜನ ನಸ್ಕರ್‌ಅವರು ವಹಿಸಲಿದ್ದಾರೆ.

             ಸಮಾರೋಪ ಭಾಷಣವನ್ನು ಎಸ್‌.ಯುಸಿಐ-ಕಮ್ಯುನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾ. ಪ್ರವಾಷ್‌ಘೋಷ್‌ಅವರು ನೆರವೇರಿಸುವರು. ಯುವಜನ ಸಮ್ಮೇಳನದ ಪೂರ್ವತಯಾರಿಯಾಗಿ ಜಿಲ್ಲಾದ್ಯಂತ ಯುವ ಜನರ ಮದ್ಯೆ ವ್ಯಾಪಕ ಪ್ರಚಾರ ನಡೆಸಿದ್ದು, ಗುಂಪು ಚರ್ಚೆ, ಸದಸ್ಯತ್ವಅಭಿಯಾನ, ಘಟಕರಚನೆ ಮಾಡಲಾಗುತ್ತಿದೆ ಎಂದು ವಿವರಿಸಿದರು. 


ಸುದ್ದಿ ಓದಿ