ಧಾರವಾಡ - ಹುಬ್ಬಳ್ಳಿ

ಕನ್ನಡ ನಾಡು-ನುಡಿಗೆ ಧಾರವಾಡದ ಕೊಡುಗೆ ಅಪಾರ: ಎಫ್‌.ಎಚ್‌. ಜಕ್ಕಪ್ಪನವರ

ಕನ್ನಡ ನಾಡು-ನುಡಿಗೆ ಧಾರವಾಡದ ಕೊಡುಗೆ ಅಪಾರ: ಎಫ್‌.ಎಚ್‌. ಜಕ್ಕಪ್ಪನವರ



           ಧಾರವಾಡ 18 : ಕರ್ನಾಟಕ ಏಕೀಕರಣಕ್ಕಿಂತ ಮುಂಚೆ ಕನ್ನಡ ನಾಡು ನುಡಿಗೆ ಸಮಗ್ರವಾಗಿ ಧಾರವಾಡದ ಕೊಡುಗೆ ಅಪಾರವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಶೋಧನೆ ಮಾಡಿ ಇಂದಿನ ಪೀಳಿಗೆಗೆ ಮಹನೀಯರ ಐತಿಹಾಸಿಕ ಸೇವೆ ಹಾಗೂ ಕೊಡುಗೆಗಳನ್ನು ತಿಳಿಸುವಲ್ಲಿ ವಿಶೇಷ ಕಾಳಜಿ ವಹಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಫ್‌. ಹೆಚ್‌. ಜಕ್ಕಪ್ಪನವರ ಹೇಳಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು 71 ನೇ ಕರ್ನಾಟಕರಾಜ್ಯೋತ್ಸವ ನಿಮಿತ್ತ, ನಾಡಹಬ್ಬ-2026 ರ ಪ್ರಯುಕ್ತ ಇಡೀ ತಿಂಗಳು ಆಯೋಜಿಸಿರುವ ವೈವಿಧ್ಯಮಯ ಕಾರ್ಯಕ್ರಮಗಳ ಹದಿನೈದನೇ ದಿನಕ್ಕೆ ಚಾಲನೆ ನೀಡಿ ಮಾತನಾಡಿದರು. 

ಇಂದಿನ ಬದಲಾದ ಶೈಕ್ಷಣಿಕ ವಾತಾವರಣದಲ್ಲಿ ಇಂಗ್ಲೀಷ ಮಾಧ್ಯಮಕ್ಕೆ ಜೋತು ಬಿದ್ದಿದ್ದೇವೆ. ಆದರೆ ಆಯ್‌.ಎ.ಎಸ್‌. ಕೆ.ಎ.ಎಸ್ ಮುಂತಾದ ಸ್ಪರ್ಧಾತ್ನಕ ಪರೀಕ್ಷೆ ಎದುರಿಸುವವರಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಇದು ಕನ್ನಡದ ಅಂತಃ ಶಕ್ತಿಯಧ್ಯೋತಕ ವಾಗಿದೆ.ಕನ್ನಡ ಸರಕಾರಿ ಮಾಧ್ಯಮ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ನಿರ್ಲಕ್ಷ ಮಾಡದೆ ಸಂದರ್ಭಾನುಸಾರ ಅವರ ಶೈಕ್ಷಣಿಕ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಸರಕಾರ, ಸಂಘ ಸಂಸ್ಥೆಗಳು, ಚಿಂತಕರು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.  

ನಾಟಕಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ವಿಶ್ವೇಶ್ವರಿ ಬ. ಹಿರೇಮಠ ಅವರನ್ನು ಪುರಸ್ಕಾರ ಫಲಕ ನೀಡಿ ಸಾಧಕರ ಸನ್ಮಾನ ಮಾಡಿ ಗೌರವಿಸಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇದುಎಲ್ಲ ಸನ್ಮಾನಕ್ಕಿಂತ ನನಗೆ ಹೆಚ್ಚಿನ ಸಂತೋಷ ನೀಡಿದೆ.ಇದು ನನ್ನತವರು ಮನೆಯ ಉಡುಗರೆ ಇದ್ದಂತೆ.ಇದರಿಂದ ನನ್ನ ಜವಾಬ್ದಾರಿ ಹಾಗೂ ಪ್ರೋತ್ಸಾಹ ಹೆಚ್ಚಿದೆಎಂದುತಮ್ಮ ಪತಿಜಾನಪದ ಗಾಯಕ ಬಸಲಿಂಗಯ್ಯ ಹಿರೇಮಠರೊಂದಿಗೆ ಸೇರಿ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ತಮ್ಮ ರಂಗಪಯಣದ ಅನುಭವ ಹಂಚಿಕೊಂಡರು. 

ಆರಂಭದಲ್ಲಿ ಧಾರವಾಡದ ಸಾಮವೇದ ಸಂಗೀತ ವಿದ್ಯಾಲಯದ ಮಂಜುನಾಥ ಭಜಂತ್ರಿ ಹಾಗೂ ವಿದ್ಯಾರ್ಥಿಗಳಿಂದ  ಸುಗಮ ಸಂಗೀತ, ಕುರ್ತಕೋಟಿಯಡಾ. ಬಿ.ಆರ್‌.ಅಂಬೇಡಕರ ಸಾಂಸ್ಕೃತಿಕ ಕಲಾ ತಂಡದಿಂದಹಾಡು ನೃತ್ಯ ಕಾರ್ಯಕ್ರಮಗಳು ಜರುಗಿದವು. 

ಸತೀಶತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ಭಿನ್ನವತ್ತಳೆ ಫಲಕ ವಾಚಿಸಿ, ಗುರು ಹಿರೇಮಠ ವಂದಿಸಿದರು. 

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ.ಶೈಲಜಾ ಅಮರಶೆಟ್ಟಿ, ವೀರಣ್ಣಒಡ್ಡೀನ, ಡಾ.ಧನವಂತ ಹಾಜವಗೋಳ ಹಾಗೂ ಎಂ.ಎಂ. ಚಿಕ್ಕಮಠ, ಗುರುಕಲ್ಮಠ, ಡಾ.ಅಶೋಕ ಕೋರಿ, ಚಂದ್ರಶೇಖರ ಅಮಿನಗಡ, ಪ್ರಭಾ ನೀರಲಗಿ, ಆಶಾ ಸೈಯದ, ಕಿರಣ ಸಿದ್ದಾಪೂರ, ಸಿ.ಎಂ.ಚನ್ನಬಸಪ್ಪ, ಶ್ರೀಧರ ಗಸ್ತಿ, ಮಲ್ಲಿಕರ್ಜುನ ಹಡಪದ ಹಾಗೂ  ಬುದ್ಧರಕ್ಕಿತ ವಸತಿ ಶಾಲೆಯ ವಿದ್ಯಾರ್ಥಿಗಳು, ಸೇರಿದಂತೆ ಅನೇಕರು ಭಾಗವಹಿಸಿದ್ದರು. 


ಸುದ್ದಿ ಓದಿ