ಧಾರವಾಡ - ಹುಬ್ಬಳ್ಳಿ

ಸೋಲೋ ಜಿಮ್ನಾಸ್ಟಿಕ್‌ನಲ್ಲಿ ಐದು ಚಿನ್ನದ ಪದಕ ಗೆದ್ದ ಸೋಮಾಪುರದ ಕುಮಾರಿ ಅನು ಅಶೋಕ ಮುತ್ತಗಿ ಅವರಿಗೆ ಸಾಧಕರ ಸನ್ಮಾನ

ಸೋಲೋ ಜಿಮ್ನಾಸ್ಟಿಕ್‌ನಲ್ಲಿ ಐದು ಚಿನ್ನದ ಪದಕ ಗೆದ್ದ ಸೋಮಾಪುರದ ಕುಮಾರಿ ಅನು ಅಶೋಕ ಮುತ್ತಗಿ ಅವರಿಗೆ ಸಾಧಕರ ಸನ್ಮಾನ
Felicitation of achiever Kumari Anu Ashoka Muttagi from Somapura, who won five gold medals in solo

ಲೋಕದರ್ಶನ ವರದಿ 

              ಧಾರವಾಡ 15 : ಜಿಮ್ನಾಸ್ಟಿಕ್ ಎಲ್ಲ ಕ್ರೀಡೆಗಳ ತಾಯಿ, ಇದರಲ್ಲಿ ವಿವಿಧ ಪ್ರಕಾರಗಳಿವೆ. ಇದೊಂದು ಕಠಿಣ ಕ್ರೀಡೆಯಾಗಿದ್ದು, ಸತತ ಅಭ್ಯಾಸ, ನಿರಂತರ ಪರಿಶ್ರಮ, ನಿಗದಿತ ಕಾಲದವರೆಗೆ ತರಬೇತಿ ಪಡೆದರೆ ಮಾತ್ರ ಇದರಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ರಾಷ್ಟ್ರಮಟ್ಟದ ಕ್ರೀಡಾಪಟು ಸೋಮಾಪುರದ ಕುಮಾರಿ ಅನು ಅಶೋಕ ಮುತ್ತಗಿ ಅಭಿಪ್ರಾಯಪಟ್ಟರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ, ನಾಡಹಬ್ಬ-2026 ರ ಅಂಗವಾಗಿ ಇಡೀ ತಿಂಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನ್ನೆರಡನೇ ದಿನ ಮಕ್ಕಳ ರಾಜ್ಯೋತ್ಸವದಲ್ಲಿ ಕ್ರೀಡಾ ಕ್ಷೇತ್ರದ  ಸಾಧನೆಗೆ ಕ.ವಿ.ವ. ಸಂಘವು ನೀಡಿದ ಸಾಧಕರ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಧಾರವಾಡ, ಬೆಳಗಾವಿ ಭಾಗಗಳಲ್ಲಿ ಸೋಲೊ ಜಿಮ್ನಾಸ್ಟಿಕ್ ತರಬೇತಿ ಕೇಂದ್ರಗಳಿಲ.್ಲ ಹೀಗಾಗಿ ಆರಂಭದಲ್ಲಿ ನಾನು ಯುಟ್ಯೂಟ್, ಇನ್ಟಾಗ್ರಾಮ್‌ಗಳಲ್ಲಿ ದೊರೆತ ವಿಡಿಯೋ ಹಾಗೂ ಇನ್ನಿತರ ಪೂರಕ ಮಾಹಿತಿ ಪಡೆದು ತರಬೇತಿ ಆರಂಭಿಸಿ ನಂತರ ಪುಣೆಗೆ ತೆರಳಿ ಹೆಚ್ಚಿನ ತರಬೇತಿ ಪಡೆದ ಪ್ರತಿಫಲವಾಗಿ ರಾಷ್ಟ್ರೀಯ ಓಲಂಪಿಕ್ ಕ್ರೀಡಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಐದು ಬಂಗಾರದ ಪದಕ ಗಳಿಸಲು ಸಾಧ್ಯವಾಯಿತು. ಇದಕ್ಕೆ ನನ್ನ ತರಬೇತುದಾರರು ನೀಡಿದ ಮಾರ್ಗದರ್ಶನ ಹಾಗೂ ಪಾಲಕರು ನೀಡಿದ ಪ್ರೋತ್ಸಾಹ ಅಪಾರವಾಗಿದೆ ಎಂದು ತಮ್ಮ ಕ್ರೀಡಾ ಪಯಣದ ಅನುಭವ ಹಂಚಿಕೊಂಡು, ನನ್ನ ಈ ಸಾಧನೆಯನ್ನು ಗುರುತಿಸಿ ಕ.ವಿ.ವ. ಸಂಘವು ನನಗೆ ಸಾಧಕರ ಸನ್ಮಾನ ಮಾಡಿ ಗೌರವಿಸಿದ್ದು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹ ದೊರೆತಂತಾಗಿದೆ ಎಂದು ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.  

ಇದೇ ಸಂದರ್ಭದಲ್ಲಿ ಮಕ್ಕಳ ಮನೆ ದತ್ತಿ ಅಂಗವಾಗಿ, ಮಕ್ಕಳ ರಾಜ್ಯೋತ್ಸವ ನಿಮಿತ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬೆಳಿಗ್ಗೆ ಏರಿ​‍್ಡಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿವರ್ಗದಿಂದ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತಿಯ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.   

ಆರಂಭದಲ್ಲಿ ಸುರೇಬಾನದ ವಿನಾಯಕ ಎಂ.ಕೆ. ಹಾಗೂ ವಿಜಯಲಕ್ಷ್ಮಿ ಕಮ್ಮಾರ ಅವರಿಂದ ಸುಗಮ ಸಂಗೀತ, ನವನಗರದ ಆರಾಧನಾ ಮಹಿಳಾ ವೃಂದದಿಂದ ಜಾನಪದ ನೃತ್ಯ ಹಾಗೂ ಧಾರವಾಡದ  ಭರತ ನೃತ್ಯ ಅಕಾಡೆಮಿ ತಂಡದಿಂದ ನೃತ್ಯ ಕಾರ್ಯಕ್ರಮಗಳು ಜರುಗಿದವು.   

ವೇದಿಕೆಯಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ ಇದ್ದರು ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿ. ಶಶಿಧರ ತೋಡಕರ ನಿರೂಪಿಸಿ, ಭಿನ್ನವತ್ತಳೆ ಫಲಕ ವಾಚಿಸಿದರು, ವೀರಣ್ಣ ಒಡ್ಡೀನ ವಂದಿಸಿದರು.   

ಕಾರ್ಯಕ್ರಮದಲ್ಲಿ ಡಾ. ಧನವಂತ ಹಾಜವಗೋಳ ಹಾಗೂ ಬಿ.ಎಚ್‌. ಕೋಟಿಗೌಡರ, ಎಂ.ಎಸ್‌. ನರೇಗಲ್ಲ, ಸದಾಶಿವ ಜನಗೌಡರ, ಶ್ರೀಧರ ಗಸ್ತಿ, ಚಂದ್ರಶೇಖರ ಅಮಿನಗಡ, ಅಶೋಕ ಮುತ್ತಗಿ, ಮಲ್ಲಿಕಾರ್ಜುನ ಹಡಪದ, ಮಲ್ಲೇಶಪ್ಪ ಹೂಗಾರ, ಈರಣ್ಣ ನವಲಗುಂದ, ಎಂ.ಎಸ್‌. ವಸ್ತ್ರದ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು. 


ಸುದ್ದಿ ಓದಿ