ನಗರದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ವಿಶಿಷ್ಟ ಗೌರವಾರೆ್ಣ
ಲೋಕದರ್ಶನ ವರದಿ
ಧಾರವಾಡ 13 ; ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ, ಜೆಎಸ್ಎಸ್ ಸಂಸ್ಥೆಯ ಅಧ್ಯಕ್ಷರೂ ಆದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 79ನೇ ಜನ್ಮದಿನ ಹಾಗೂ 59ನೇ ಪಟ್ಟಾಭಿಷೇಕ ವಧಂರ್ತಿಯ ಅಂಗವಾಗಿ ಮೃತ್ಯುಂಜಯ ನಗರದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ವಿಶಿಷ್ಟ ಗೌರವಾರೆ್ಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 65 ಸಿಬ್ಬಂದಿಯವರು ಒಗ್ಗೂಡಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಬೃಹತ್ ಭಾವಚಿತ್ರವನ್ನು ಆಕಾಶದತ್ತ ಹಿಡಿದು ನಿಂತು ಗೌರವ ಹಾಗೂ ಕೃತಜ್ಞತೆಯನ್ನು ಸಮರ್ಿಸಿದರು. ಎಲ್ಲರೂ ಒಟ್ಟಾಗಿ ಭಾಗವಹಿಸಿದ ಈ ವಿನೂತನ ಕಾರ್ಯಕ್ರಮವು ಏಕತೆ, ಅಭಿಮಾನ ಹಾಗೂ ಸಂಸ್ಥೆಯ ಮೇಲಿನ ಆತ್ಮೀಯತೆಯ ಸಂಕೇತವಾಗಿ ಗಮನ ಸೆಳೆಯಿತು.
ಪೂಜ್ಯರ ದೂರದೃಷ್ಟಿಯ ನಾಯಕತ್ವ, ಸಮಾಜಸೇವೆ, ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಹಾಗೂ ಮಾರ್ಗದರ್ಶನವನ್ನು ಸ್ಮರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಗೌರವ, ಕೃತಜ್ಞತೆ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುವ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವಿಶಿಷ್ಟ ಗೌರವಾರೆ್ಣಯು ಶಾಲಾ ಕುಟುಂಬದ ಒಗ್ಗಟ್ಟು ಮತ್ತು ಪೂಜ್ಯರ ಮೇಲಿನ ಅಪಾರ ಅಭಿಮಾನವನ್ನು ಪ್ರತಿಬಿಂಬಿಸಿತು.