ಕಳಪೆ ಮಟ್ಟದ ಊಟ: ಪಜಾಪಂ ವಿದ್ಯಾರ್ಥಿಗಳ ಪ್ರತಿಭಟನೆ
ಲೋಕದರ್ಶನ ವರದಿ
ಬೈಲಹೊಂಗಲ 19: ಮೂಲ ಸೌಕರ್ಯದ ಕೊರತೆ ಹಾಗೂ ಕಳಪೆ ಮಟ್ಟದ ಊಟ ನೀಡಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಎಂ.ಜೆ.ಹೌಸಿಂಗ ಕಾಲೋನಿಯಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣಕ್ಕೋಸ್ಕರ ನೂರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್ನಲ್ಲಿ ಕಳೆದ ಎರಡು ವರ್ಷಗಳಿಂದ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಊಟದ ಜೊತೆ ತಹಸೀಲ್ದಾರ ಕಛೇರಿಗೆ ತೆರಳಿ ಗುಣಮಟ್ಟದ ಆಹಾರ ನೀಡಬೇಕು, ವಸತಿ ನಿಲಯದಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಹಾಸ್ಟೆಲನಲ್ಲಿ 160 ಕ್ಕೂ ಹೆಚ್ಚು ಪಿಯುಸಿ, ಪದವಿ ವಿದ್ಯಾರ್ಥಿಗಳಿದ್ದಾರೆ. ವಸತಿ ನಿಲಯದಲ್ಲಿ ಹುಳು, ಕಲ್ಲು ಮಿಶ್ರಿತ ಆಹಾರ ನಿಡುವದರಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೆರಾಗುತ್ತಿದೆ. ಅನಾರೋಗ್ಯಕ್ಕೆ ಈಡಾದರೂ ಯಾರಿಗೂ ಚಿಕಿತ್ಸೆ ನೀಡುವದಿಲ್ಲ. ಸರ್ಕಾರ ನಿಮ್ಮ ಊಟಕ್ಕೆ ಕೇವಲ ರೂ.50 ಮಾತ್ರ ನೀಡುತ್ತದೆ. ಇದರಲ್ಲಿ ನಾವು ಮೇಲಾಧಿಕಾರಿಗಳಿಗೆ ಕೊಡಬೇಕು ಎನ್ನುತ್ತಾಂತೆ ವಾರ್ಡನ. ಜೊತೆಗೆ ಕಟ್ಟಡ ಎಲ್ಲೆಂದರಲ್ಲಿ ಸೋರುತ್ತಿದೆ, ಕೈ ತೊಳೆಯಲೂ ಕೂಡ ಸರಿಯಾದ ವ್ಯವಸ್ತೆ ಇಲ್ಲ ಎಂದು ಆರೋಪಿಸಿದರು. ಒಟ್ಟಿನಲ್ಲಿ ನಮಗೆ ಮೂಲಭೂತ ಸೌಲಭ್ಯ, ಒಳ್ಳೆಯ ಗುಣಮಟ್ಟದ ಅಹಾರ ನೀಡಬೇಕು , ಇದು ನಾವು ಮಾಡುತ್ತಿರುವ ಹೋರಾಟ ಅಲ್ಲ, ಇದು ನಮ್ಮ ವಿನಯಪೂರ್ವಕ ಬೇಡಿಕೆಯಾಗಿದೆ. ಇದಕ್ಕೆ ಮಾದ್ಯಮದವರು ನಮಗೆ ಮೂಲಭೂತ ಸೌಕರ್ಯ ಪಡೆಯಲು ಸಹಾಯ ಮಾಡಬೇಕು ಎಂದರು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು.