ರಾಣೆಬೆನ್ನೂರ

ಡಾ.ಅಸ್ಲಂ ನಂದ್ಯಾಲ.ಗೆ ಪಿಎಚ್ ಡಿ ಪದವಿ

ಡಾ.ಅಸ್ಲಂ ನಂದ್ಯಾಲ.ಗೆ ಪಿಎಚ್ ಡಿ ಪದವಿ

 ರಾಣೆಬೆನ್ನೂರ: ಜು 1 ನಗರದ ನಿವೃತ್ತ ಉಪನ್ಯಾಸಕ  ಹಾಗೂ ಖ್ಯಾತ ವಾಗ್ಮಿಯಾಗಿರುವ  ಪ್ರೊ.ಬಿ.ಬಿ.ನಂದ್ಯಾಲ‌ ಅವರ ಪುತ್ರ ಡಾ. ಅಸ್ಲಂ ಬಿ. ನಂದ್ಯಾಲ್ ಕಂಪ್ಯೂಟರ್ ಫ್ಯಾಕಲ್ಟಿಯಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಮತ್ತುಮಾಹಿತಿ ವಿಜ್ಞಾನಗಳ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.         ಆಫ್‌ಲೈನ್‌ಗಾಗಿ ಡೇಟಾ ಸೇವೆಗಳನ್ನು ಹೆಚ್ಚಿಸುವುದುಮತ್ತು ಮೊಬೈಲ್‌ನಲ್ಲಿ ಸಿಂಕ್ರೊನೈಸೇಶನ್ ಬೆಂಬಲಸೇವೆಯಾಗಿ ಬ್ಯಾಕೆಂಡ್ ದೊಡ್ಡ ಡೇಟಾ ಆಬ್ಜೆಕ್ಟ್‌ಗಳಿಗಾಗಿ ಫ್ರೇಮ್‌ವರ್ಕ್.ಕುರಿತು ಅವರು, ದಾವಣಗೆರೆಯ ಯು. ಬಿ. ಡಿ. ಟಿ ಕಾಲೇಜನ  ಡಾ. ಮೊಹಮ್ಮದ್ ರಫಿ ಎಂ. ಇ, ಪಿ. ಎಚ್ಡಿ, ಇವರ ಮಾರ್ಗದರ್ಶನದಲ್ಲಿ  ಪ್ರಬಂಧ ಮಂಡಿಸಿದ್ದರು. ಈ ಕುರಿತು ಬಿ.ಬಿ. ನಂದ್ಯಾಲ ಮತ್ತು  ಡಾ.ಆಸ್ಲಂರವರು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪಿಎಚ್ ಡಿ ಪಡೆದ ಬಗ್ಗೆ ವಿವರಿಸಿದರಲ್ಲದೇ ಇದರಿಂದ ನಮಗೆ ಹೆಮ್ಮೆ ಹಾಗೂ ಸಂತಸವಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ಪಿ ಹೆಚ್ ಡಿ ಪದವಿ ಗಳಿಸಿ ಕೀರ್ತಿ ತಂದ ಅಸ್ಲo ಬಿ. ನಂದ್ಯಾಲ ಅವರಿಗೆ, ಶಿಕ್ಷಣ ಸಂಸ್ಥೆಯ ಅನೇಕ ಗಣ್ಯರು, ಉಪನ್ಯಾಸಕರು, ಸಂಘ ಸಂಸ್ಥೆಗಳ ಮುಖಂಡರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ

ಸುದ್ದಿ ಓದಿ