ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸಲು ಮನವಿ
ಬೈಲಹೊಂಗಲ 10: ಸಕಾಲಕ್ಕೆ ಮಳೆ ಬಾರದ ಕಾರಣ ಬೈಲಹೊಂಗಲ ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷನೆ ಮಾಡಬೇಕೆಂದು ಸೋಮವಾರ ಬೈಲಹೊಂಗಲ ತಾಲೂಕು ರೈತ ಮುಖಂಡರು ಮನವಿ ಸಲ್ಲಿಸಿದರು.
ಸಧ್ಯದ ಪರಿಸ್ಥಿತಿಯಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು ಇದರಿಂದ ರೈತರು ಮುಂಗಾರು ಬೆಳೆ ತೆಗೆಯಲು ವಿಫಲರಾಗಿದ್ದು ಮಳೆ ಬೆಳೆ ಇಲ್ಲದೇ ಬೈಲಹೊಂಗಲ ತಾಲೂಕಿನ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಅಲ್ಲದೆ ಇನ್ನೂ ಮಳೆಯಾಗದಿದ್ದರೆೆ ಜಾನುವಾರುಗಳಿಗೆ ಮೇವು ಇಲ್ಲದೇ ಜಾನುವಾರುಗಳು ಪ್ರಾಣಬಿಡುವ ಪರಿಸ್ಥಿತಿ ಎದುರಾಗಬಹುದು.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಬೈಲಹೊಂಗಲ-ಕಿತ್ತೂರ ತಾಲೂಕಿನಲ್ಲಿ 73,185 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಬೇಕಾಗಿತ್ತು ಇಲ್ಲಿಯವರೆಗೆ ಕೇವಲ 45,856 ಹೆಕ್ಟೇರ್ ಭೂಮಿ ಬಿತ್ತನೆಯಾಗಿದೆ. ಅಂದರೆ ಶೇಕಡಾ 55.8 ರಷ್ಟು ಬಿತ್ತನೆಯಾಗಿರುವದು ಸ್ಪಷ್ಟವಾಗಿದೆ. 'ವನ ಬೇಸಾಯ 59,115 ಹೆಕ್ಟೇರ, ಮಳೆಯಾಶ್ರಿತ ಬಿತ್ತನೆಯಾಗಬೇಕಾಗಿತ್ತು ಈ ಪೈಕಿ 20,054 ಹಳ್ಳಿರ ಬಿತ್ತನೆಯಾಗಿದೆ. ಅನೇಕ ರೈತರು ಬಿತ್ತನೆ ಮಾಡಿದರೂ ಕೂಡ ಸಕಾಲಕ್ಕೆ ಮಳೆ ಯಾಗಿದ್ದರಿಂದ ಇಳುವರಿ ಕುಂಟಿತವಾಗುತ್ತದೆ.
ತಾಲೂಕಿನಲ್ಲಿ ಸೋಯಾಬಿನ್, ಗೋವಿನಜೋಳ ಪ್ರಮುಖ ಬೆಳೆಯಾಗಿದ್ದು ಸ್ವಲ್ಪ ಭಾಗದಲ್ಲಿ ಭತ್ತ, ಹತ್ತಿ, ಹೆಸರು ಬೆಳೆಗಳನ್ನು ಇಲ್ಲಿಯ ರೈತರು ಬೆಳೆಯುತ್ತಾರೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ದಿನಾಂಕ: 7-7-2023 ರ ವರೆಗೆ 338 ಮಿ.ಮಿ. ಮಳೆಯಾಗಬೇಕಾಗಿತ್ತು. ಆದರೆ, ಸಕಾಲಕ್ಕೆ ಮಳೆ ಬಾರದೇ ಕೇವಲ 170.4 ಮಿ.ಮಿ, ಮಳೆ ಮಾಹಿತಿ ದೊರಕಿದೆ. ಅಂದರೆ ಇಲ್ಲಿಯವರೆಗೆ ಶೇಕಡಾ 48.4 ರಷ್ಟು ಮಳೆಯ ಕೊರತೆಯಾಗಿದ್ದು ಇದರಿಂದ ರೈತರ ಬೆಳೆ ಬಾರದೇ ಸಂದಿಗ್ಧ ಪರೀಸ್ಥಿತಿಯಲ್ಲಿದ್ದಾರೆ. ಕಾರಣ, ಬೈಲಹೊಂಗಲ-ಕಿತ್ತೂರ ತಾಲೂಕನ್ನು ಬರಪೀಡಿತವೆಂದು ಸರ್ಕಾರ ಘೋಶಿಸಬೇಕು. ಪ್ರತಿ ಎಕರೆಗೆ 30,000/- ಪರಿಹಾರ ಧನವನ್ನು ಘೋಷಿಸಬೇಕು ಮತ್ತು ಜಾನುವಾರುಗಳಿಗೆ ಮೇವನ್ನೊದಗಿಸಿ ಜಾನುವಾರುಗಳ ಪೋಷಣೆ ಕೇಂದ್ರಗಳನ್ನು ತೆರೆಯಬೇಕೆಂದು ಬೈಲಹೊಂಗಲ ತಾಲೂಕು ರೈತಬಾಂಧವರು ಉಪವಿಭಾಗಾಧಿಕಾರಿ ಕಛೇರಿಯ ಸಿಬ್ಬಂದಿ ಎಸ್.ಎಮ್ ಗೌಡರ ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಬದಲ್ಲಿ ರೈತ ಮುಖಂಡರು, ಊರಿನ ಗಣ್ಯರು, ಹಿರಿಯರು ಮತ್ತು ರೈತ ಹೋರಾಟಗಾರರು ಭಾಗಿಯಾಗಿದ್ದರು.