ಬೈಲಹೊಂಗಲ

ಉಪತಹಶೀಲ್ದಾರ ಬಸವರಾಜ ಹುಬ್ಬಳ್ಳಿ ಅವರ ವರ್ಗಾವಣೆ ರದ್ದುಪಡಿಸಲು ಮನವಿ

ಉಪತಹಶೀಲ್ದಾರ ಬಸವರಾಜ ಹುಬ್ಬಳ್ಳಿ ಅವರ ವರ್ಗಾವಣೆ ರದ್ದುಪಡಿಸಲು ಮನವಿ

ಬೈಲಹೊಂಗಲ 13: ತಾಲೂಕಿನ  ನೇಸರಗಿ ನಾಡಕಚೇರಿಯಲ್ಲಿ ಕಳೆದ ಹಲವು ವರ್ಷದಿಂದ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದ ಉಪತಹಶೀಲ್ದಾರ ಬಸವರಾಜ ಹುಬ್ಬಳ್ಳಿ, ಇವರನ್ನು ಈಗ ತಹಶೀಲದಾರ ಕಾರ್ಯಾಲಯ ಬೈಲಹೊಂಗಲಕ್ಕೆ  ವರ್ಗಾವಣೆ ಮಾಡಲಾಗಿದ್ದನ್ನು ರದ್ದುಪಡಿಸಿ, ಮರಳಿ ನೇಸರಗಿ ಗ್ರಾಮಕ್ಕೆ ವರ್ಗಾಯಿಸಬೇಕೆಂದು ಸಾರ್ವಜನಿಕರು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. 

ಬಸವರಾಜ ಹುಬ್ಬಳ್ಳಿ  ಇವರು  ನೇಸರಗಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರಿಗೆ ಬೇಕಾದ ಅವಶ್ಯಕ ದಾಖಲಾತಿಗಳನ್ನು ಒದಗಿಸುತ್ತಾ ಉತ್ತಮ ಸೇವೆ ಮಾಡುತ್ತಿದ್ದಾರೆ. ಇವರಿಂದ ಇಲ್ಲಿಯ ಒರಗೆ ಯಾವುದೇ ರೀತಿ ತೊಂದರೆಗಳು ಸಾರ್ವಜನಿಕರಿಗೆ ಆಗಿರುವುದಿಲ್ಲ ಹಾಗೂ ಇವರು ತಮ್ಮ ಕರ್ತವ್ಯವನ್ನು ಕಾರ್ಯಲಯದ ನಿಯಮದಂತೆ ಪ್ರತಿ ದಿನ 10 ಗಂಟೆ ಯಿಂದ ಸಂಜೆ 5-30 ಗಂಟೆ ಹೊತ್ತಿನವರೆಗೆ ನಿಭಾಯಿಸುತ್ತಾ ಬಂದಿರುತ್ತಾರೆ.   ನಾಡಕಚೇರಿ ನೇಸರಗಿಗೆ ಕೆಟ್ಟ ಹೆಸರು ಬರದಂತೆ ಕಾರ್ಯ ನಿರ್ವಹಿಸುವುವರನ್ನು ಯಾವುದೇ ರೀತಿ ಕಾರಣ ಇಲ್ಲದೆ ವರ್ಗಾವಣೆ ಮಾಡಿರುವುದು ನ್ಯಾಯವಾಗಿರುವುದಿಲ್ಲ ಕಾರಣ ನೇಸರಗಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಬೇಡಿಕೆ ಅವರನ್ನು ತಹಶೀಲದಾರ ಕಾರ್ಯಲಯ ಬೈಲಹೊಂಗಲದಿಂದ ಮರಳಿ ನಾಡಕಚೇರಿ ನೇಸರಗಿಗೆ ಡಿಟಿ ಅಂತಾ ವರ್ಗಾವಣೆ ಮಾಡಿ ಆದೇಶ ಮಾಡಬೇಕು. ಅಂತಾ ಮನವಿ ಮೂಲಕ ಒತ್ತಾಯಿಸಿದರು. 

 ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಕೊಳ್ಳುವ ಎಚ್ಚರಿಕೆ ನೀಡಿದರು. ಮಂಜುನಾಥ ಉಳವಿ, ಪ್ರಕಾಶ ಹಂಚಿನಮನಿ, ನಿಜಲಿಂಗಪ್ಪ ಮರೆದ, ಭೀಮನಗೌಡ ಕಲ್ಲೂರ, ಅಪ್ಪಯ್ಯ ಬೀರನವರ, ಬಸವಣ್ಣಿಪ್ಪ ಹಸದಿ ಮುಂತಾದವರು ಇದ್ದರು. 


ಸುದ್ದಿ ಓದಿ