ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ
ಬೈಲಹೊಂಗಲ 15: ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಮೌಲಾನಾ ಅಬುಲಕಲಾಮ ಆಜಾದ ಹೈಸ್ಕೂಲ ಸ್ಟುಡೇಂಟ್ ಅಲೂಮ್ನಿ ಅಸೋಸಿಯೇಷನ್ ವತಿಯಿಂದ ವಕ್ಫ, ಅಲ್ಪ ಸಂಖ್ಯಾತರ ಇಲಾಖೆ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಆಗಿದೆ. ಇಲ್ಲಿಯವರೆಗೆ ಉರ್ದು ಅಕಾಡೆಮಿ ಅನುಷ್ಠಾನ, ಸದಸ್ಯ ನೇಮಕವಾಗಿಲ್ಲ. ಈ ವರ್ಷದ ಅಂತರರಾಷ್ಟ್ರೀಯ ಉರ್ದು ದಿನಾಚರಣೆ ದಿನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ತಾಲ್ಲೂಕು ಮಟ್ಟದ ಅಂತರಶಾಲಾ, ಅಂತರ ರಾಜ್ಯ ಮಟ್ಟದ ಉರ್ದು ಕವಿ ಸಮ್ಮೇಳನ ಏರಿ್ಡಸಲಾಗಿತ್ತು. ನಿರ್ವಹಣೆಗಾಗಿ ಅನುದಾನ ನೀಡುವಂತೆ ಕೋರಲಾಗಿತ್ತು. ಅಧಿಕಾರಿಗಳು ಇದಕ್ಕೆ ಅನುದಾನ ನೀಡಲು ಬರುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. ಆದರೆ ನವೆಂಬರ್ 29 ರಂದು ಬೆಂಗಳೂರಿನಲ್ಲಿ ನಡೆದ ಉರ್ದು ಕಾರ್ಯಕ್ರಮದಲ್ಲಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ಇದೆ. ಹೀಗಾಗಿ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಅನುದಾನ ನೀಡುವಂತೆ ಒತ್ತಾಯಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿ, ಉರ್ದು ಭಾಷೆಯ ಉಳಿವು, ಬೆಳವಣಿಗಾಗಿ ರಾಜ್ಯ ಉರ್ದು ಅಕಾಡೆಮಿ ಮರು ಸ್ಥಾಪನೆ, ಸದಸ್ಯರ ನೇಮಕಾತಿ ಮಾಡಬೇಕು. ಕಿತ್ತೂರು ಕರ್ನಾಟಕ ಭಾಗದ ಉರ್ದು ಶಾಲೆಗಳ ಉಳಿವು, ಬೆಳವಣಿಗೆಗೆ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಸಾಜಿದ ಬಾಬನ್ನವರ, ರಫೀಕ ದೇಶನೂರ, ಮೆಹಬೂಬಸುಭಾನಿ ಹಿರೇಕುಂಬಿ, ಅಲ್ತಾಫ ನೇಸರಗಿ, ಅಶ್ರಫಅಲಿ ಪಟ್ಟಿಹಾಳ, ಮುಜಾಫರ ಮುಜಾವರ, ಶರೀಫ ಮೊಖಾಶಿ, ಅನೇಕರು ಇದ್ದರು.