ಮಂದಗತಿಯಲ್ಲಿ ಸಾಗುತ್ತಿರುವ ರಾಣಿ ಚೆನ್ನಮ್ಮನ ಸಮಾಧಿ ಸ್ಥಳ ಕಾಮಗಾರಿ: ಜನಾಕ್ರೋಶ
ಮಂಜುನಾಥ ಜ್ಯೋತಿ

ಬೈಲಹೊಂಗಲ 05: ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೆ ಬಲಿದಾನ ಗೈದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವದಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರ ಅಭಿವೃದ್ಧಿ ಮಾಡುವದಕೋಸ್ಕರ ನಾಗರಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಅಭಿವೃದ್ಧಿಗಾಗಿ ಬಿಡುಗಡೆ ಮಾಡುತ್ತಿದ್ದರೆ, ಇತ್ತ ಗುತ್ತಿಗೆದಾರರ ದಿವ್ಯ ನಿರ್ಲಕ್ಷ್ಯದಿಂದ ಕಳೆದ ಒಂದು ದಶಕಗಳಿಂದ ಕಾಮಗಾರಿಗಳು ಆಮೆಗತಿಯತ್ತ ಸಾಗುತ್ತಿರುವದಕ್ಕೆ ಸದಾ ಕಾಲ ಜನಾಕ್ರೋಶ ಉಂಟಾಗುತ್ತಿದೆ.
ಚನ್ನಮ್ಮ ಸಮಾಧಿಯ ದ್ವಿಮುಖ ರಸ್ತೆಯು ಸಿಸಿ ರಸ್ತೆಯಾಗಿ ನಿಮರ್ಾಣವಾಗಿದ್ದು ಆದರೆ ರಸ್ತೆ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ನಾಗರಿಕರು ಕಳಪೆ ಕಾಮಗಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿ ಅನೇಕ ಸಂಘಟಣೆಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಅಪರ್ಿಸಿದ್ದರೂ ಸಹ ಅಧಿಕಾರಿಗಳು ಕ್ಯಾರೇ ಎಂದಿಲ್ಲ.
ಸಾರ್ವಜನಿಕರ ದೂರಿಗೆ ಆವತ್ತು ಕವಡೆ ಕಾಸಿನ ಕಿಮ್ಮತ್ತು ಸಹ ಸಿಗಲಿಲ್ಲ. ಈಗ ದ್ವಿಮುಖ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟು ತಗ್ಗು- ದಿನ್ನೆಗಳಾಗಿದ್ದು ಈ ಕುರಿತು ಹಲವಾರು ಬಾರಿ ಮಾಧ್ಯಮಗಳಲ್ಲಿ ಪ್ರಕಟಗೊಂಡರು ಕೂಡಾ ಗುತ್ತಿಗೆದಾರರ ವಿರುದ್ಧ ಮೇಲಾಧಿಕಾರಿಗಳು ಯಾವದೇ ಕ್ರಮ ಜರುಗಿಸುತ್ತಿಲ್ಲವೆಂದು ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದ್ವಿಮುಖ ರಸ್ತೆ ಡಿವೈಡರ ಸ್ಥಳದಲ್ಲಿ ಕಸ ಕಡ್ಡಿ, ತ್ಯಾಜ್ಯ ವಸ್ತುಗಳ ಸಂಗ್ರಹಕ್ಕೆ ಹೇಳಿ ಮಾಡಿಸಿದ ತಾಣವಾದಂತಾಗಿದೆ. ಅಲ್ಲದೇ ರಸ್ತೆಯ ಅಕ್ಕ ಪಕ್ಕದಲ್ಲಿ ವಿದ್ಯುತ ದೀಪಾಲಂಕಾರ ಕಂಬಗಳು ಮುರಿದು ಬಿದ್ದಿವೆ. ಕೆಲವು ಬೆಳಕು ಚೆಲ್ಲದೆ ನಿಷ್ಕ್ರಿಯವಾಗಿದೆ. ಅಲ್ಲದೇ ಈ ದ್ವಿಮುಖ ರಸ್ತೆಯ ಪಕ್ಕದ ಭಾಂವಿಯಲ್ಲಿ ತ್ಯಾಜ್ಯ ಕಲ್ಮಶ ವಸ್ತುಗಳ ಸಂಗ್ರಹದ ತಾಣವಾಗಿದ್ದು ನಾಗರಿಕರು ಮಲ ಮೂತ್ರ ವಿಸರ್ಜಣೆ ಮಾಡುತ್ತಿರುವದರಿಂದ ಗಬ್ಬೆದ್ದು ನಾರುವಂತಾಗಿದೆ. ಈ ಅವ್ಯವಸ್ಥೆಯಿಂದ ಐತಿಹಾಸಿಕವಾಗಬೇಕಾದ ತಾಣ ಕಳಾಹೀನವಾಗಿದೆ.
ಪಟ್ಟಣಕ್ಕೆ ನೂತನವಾಗಿ ಬಂದಂತ ಅಧಿಕಾರಿಗಳು ತಮ್ಮ ಅಧಿಕಾರ ಸ್ವೀಕರಿಸಿ ವೀರರಾಣಿ ಚನ್ನಮ್ಮ ಸಮಾಧಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂತರ್ಿಗೆ ಗೌರವ ಸಮಪರ್ಿಸಿ ಆರಂಭದಲ್ಲಿ ಜನತೆಗೆ ಅಭಿವೃದ್ದಿಯ ಕನಸ್ಸು ಬಿತ್ತುತ್ತಾರೆಯೇ ವಿನಹ: ಈ ಕನಸ್ಸು ಕೆಲವೇ ದಿನಗಳಲ್ಲಿ ಮಾಯವಾಗುತ್ತಿರುವದರಿಂದ ಜನತೆಯ ಬಾಯಲ್ಲಿ ಅದೇ ರಾಗ ಅದೇ ಹಾಡು ಎಂಬ ಮಾತುಗಳು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿವೆ.
ಇಲ್ಲಿ ಅನೇಕ ಸ್ವಾಂತಂತ್ರ್ಯ ಹೋರಾಟಗಾರರು, ರಾಜಕೀಯ ಗಣ್ಯರು, ಸಾಹಿತಿಗಳು ಸೇರಿದಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಬೇಟಿ ನೀಡಿ ಸಮಾಧಿಯ ಅವ್ಯವಸ್ಥೆ ಕಂಡು ಪ್ರಧಾನ ಮಂತ್ರಿಗೆ ಪತ್ರ ಬರೆದು ರಾಷ್ಟ್ರೀಯ ಸ್ಮಾರಕ ಮಾಡಲು ಒತ್ತಾಯಪಡಿಸುವದಾಗಿ ಜನತೆಯಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಹೋಗಿದ್ದ ಅವರ ಕನಸ್ಸು ಇಲ್ಲಿಯವರೆಗೆ ನನಸಾಗಿಲ್ಲ.
ಟ್ರಾಪಿಕ್ ಸಮಸ್ಯೆ- ಪಟ್ಟಣದ ಎಸ್.ಆರ್.ಸರ್ಕಲದಿಂದ ಜವಳಿಕೂಟ, ಅಂಬೇಡ್ಕರ ಉದ್ಯಾನವನದವರೆಗಿನ ರಸ್ತೆ ತೀವೃ ಇಕ್ಕಟ್ಟಾದ ರಸ್ತೆಯಲ್ಲಿ ದಿನನಿತ್ಯ ಬಾರಿ ವಾಹನ, ದ್ವಿಚಕ್ರ ವಾಹನ, ಪಾದಚಾರಿಗಳು ಸಂಚರಿಸುತ್ತಿದ್ದು ಇದರಿಂದ ನಿತ್ಯ ಟ್ರಾಪಿಕ್ ಸಮಸ್ಯೆ ಎದುರಾಗುತ್ತಿದ್ದು ವಾಹನ ಮಾಲಿಕರು ಚನ್ನಮ್ಮ ಸಮಾಧಿಯ ದ್ವಿಮುಖ ರಸ್ತೆಯನ್ನೇ ಅವಲಂಬಿಸಿದ್ದು ಈ ಸಮಸ್ಯೆ ಎದುರಾಗುತ್ತಿರುವದರಿಂದ ವ್ಯಾಪಾರ ವಹಿವಾಟು ಕೂಡಾ ಅಷ್ಟಕ್ಕಷ್ಟೇ ನಡೆಯುತ್ತಿವೆ ಎಂದು ವ್ಯಾಪಾರಸ್ಥರು ಗೋಳು ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖ ಬಝಾರ ರಸ್ತೆಯನ್ನು ಕೂಡಲೇ ಪುರಸಭೆ, ಸರಕಾರ, ಜನಪ್ರತಿನಿಧಿಗಳು ರಸ್ತೆ ಅಗಲೀಕರಣಗೊಳಿಸಿ ನಾಗರಿಕರ ಸಮಸ್ಯೆಗಳನ್ನು ಕೊನೆಗಾಣಿಸಬೇಕಾಗಿದೆ.
ದೇಶ ಆಜಾದಿಕಾ ಅಮೃತ ಮಹೋತ್ಸವದ ಗಳಿಗೆಯಲ್ಲಿದ್ದರೂ ಸಹ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಪ್ರವಾಸಿ ತಾಣವಾಗಿ ಮಾಪರ್ಾಡಾಗಬೇಕಾಗಿತ್ತು. ಆದರೆ ಜನಪ್ರತಿನಿಧಿಗಳ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅಭಿವೃದ್ದಿ ಕಾರ್ಯಗಳು ಆಮೆಗತಿಯತ್ತ ಸಾಗುತ್ತಿರುವದಕ್ಕೆ ಜನತೆ ನಿತ್ಯ ಶಾಪ ಹಾಕುವಂತಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಂಡು ಪ್ರವಾಸಿ ತಾಣವಾಗಲು ಪ್ರಯತ್ನಿಸಬೇಕು. ---
ಗುಂಡಪ್ಪ ಸನದಿ,
ಸಾಮಾಜಿಕ ಕಾರ್ಯಕರ್ತ
ಸರಕಾರ ಈಗಾಗಲೇ ಕೋಟ್ಯಂತರ ಹಣ ಬಿಡುಗಡೆಗೊಳಿಸಿ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಲು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗುವದು. -----
ಮಹಾಂತೇಶ ಕೌಜಲಗಿ,
ಶಾಸಕರು, ಬೈಲಹೊಂಗಲ
ಚನ್ನಮ್ಮ ಸಮಾಧಿಯ ದ್ವಿಮುಖ ರಸ್ತೆ, ವಿದ್ಯುತ ಕಂಬಗಳ ಡಿವೈಡರದಲ್ಲಿರುವ ಕಸ ಕಡ್ಡಿ, ತ್ಯಾಜ್ಯ ವಸ್ತುಗಳನ್ನು ಶೀಘ್ರದಲ್ಲಿಯೇ ಸ್ವಚ್ಚಗೊಳಿಸಿ ಸೌಂದಯರ್ಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವದು.
ವಿರೇಶ ಹಸಬಿ,
ಮುಖ್ಯಾಧಿಕಾರಿಗಳು,
ಬೈಲಹೊಂಗಲ