ರಾಣೆಬೆನ್ನೂರ

ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ: ಡಾ.ಮಲ್ಲಿಕಾರ್ಜುನ

ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ: ಡಾ.ಮಲ್ಲಿಕಾರ್ಜುನ

ರಾಣಿಬೆನ್ನೂರ 25 ಪಾಲಕರು ಪ್ರತಿದಿನ ಮಕ್ಕಳ ಚಟುವಟಿಕೆಗಳನ್ನು ಗಮನ ಹರಿಸುವ ಮೂಲಕ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಡಾ.ಮಲ್ಲಿಕಾರ್ಜುನ ಎಚ್ಬಿ. ಹೇಳಿದರು. 

   ತಾಲೂಕಿನ ಅಸುಂಡಿ ಗ್ರಾಮದ ಡಾ.ಕಡಕೋಳ ಪೋದಾರ್ ಲರ್ನ್  ಸ್ಕೂಲಿನಲ್ಲಿ ಏರ್ಪಡಿಸಲಾಗಿದ್ದ ದಂತ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಚಾಕೋಲೇಟ್, ಐಸ್ಕ್ರಿಂನಂತಹ ಪದಾರ್ಥಗಳ ಸೇವನೆ ಹೆಚ್ಚಾಗುತ್ತಿದ್ದು ಇದು ಅವರ ದಂತ ಪಂಕ್ತಿಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರ ಪದಾರ್ಥಗಳನ್ನು ನೀಡಬೇಕು ಎಂದರು.

    ದಂತ ವೈದ್ಯರುಗಳಾದ ಡಾ.ಬಿಎಸ್. ಪಾಟೀಲ ಮತ್ತು ಡಾ. ಅಮರನಾಥ ಉಪಾಸಿ, ಡಾ, ಪ್ರಕಾಶ ಲೋಕಂಡೆ, ಡಾ.ಮಹಾಂತೇಶ ಶಿರಗಾಂವಿ, ಡಾ.ಪ್ರವೀಣ ಉದುಗನಿ, ಡಾ. ಪ್ರಮೋದ ಉದುಗನಿ, ಡಾ.ಪ್ರಸನ್ನಕುಮಾರ ಕಡಕೋಳ ಮಕ್ಕಳ ದಂತ ತಪಾಸಣೆಯನ್ನು ನಡೆಸಿ ದಂತ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಮಕ್ಕಳಿಗೆ ಸಲಹೆಗಳನ್ನು ನೀಡಿದರು.

   ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ  ಪ್ರಶಾಂತ ಕಡಕೋಳ, ಕವಿತಾ ಕಡಕೋಳ, ರಾಜೇಶ್ವರಿ ಹನಗೋಡಿಮಠ, ಪ್ರಿನ್ಸಿಪಾಲ ರೂಪೇಶ ಘಾಟಗೆ, ಆಧ್ಯಾ, ಮಮತಾ ಘಾಟಗೆ, ಅಶ್ವಿನಿ ಅಗಡಿ, ರುಕ್ಸಾನ, ಗೀತಾ, ಸುಮಾ, ಹರ್ಷಿತಾ, ನಿಖಾತ್, ರಘುನಂದನ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


ಸುದ್ದಿ ಓದಿ