ಇಂಡಿ

2ಎ ಮೀಸಲಾತಿ ವಿಳಂಬ ನೀತಿಗೆ ಸರಕಾರದ ವಿರುದ್ಧ ಆಕ್ರೋಶ

2ಎ ಮೀಸಲಾತಿ ವಿಳಂಬ ನೀತಿಗೆ ಸರಕಾರದ ವಿರುದ್ಧ ಆಕ್ರೋಶ


ಇಂಡಿ15:  ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ಪಂಚಮಸಾಲಿ ಸಮಾಜ ಬಾಂಧವರು ಸರಕಾರದ ವಿಳಂಬ ನೀತಿಗೆ ಸರಕಾರದ ವಿರುಧ್ಧ ಆಕ್ರೋಶ ಹೊರಹಾಕಿದ್ದಾರೆ. 

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕಾಂತು ಮಾಶ್ಯಾಳ, ಸಂಗಣ್ಣ ಹೊಸೂರ ಮ್ತಿತರರು ಮಾತನಾಡಿ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿಗಾಗಿ ನಡೆಸಿದ ಪಾದಯಾತ್ರೆ ಇಂದಿಗೆ ಒಂದು ವರ್ಷ ಪೂರೈಸಿದ್ದು, ನಮ್ಮ ಹೋರಾಟ ಮೀಸಲಾತಿ ನೀಡುವವರೆಗೂ ನಿಲ್ಲಲ್ಲ. ಮುಖ್ಯಮಂತ್ರಿಗಳು ಕೂಡಲೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. 

ಕೂಡಲಸಂಗಮದಲ್ಲಿ ಲಕ್ಷಾಂತರ ಜನ ಸೇರಿ ಮೀಸಲಾತಿಗೆ ಒತ್ತಾಯಿಸುವ ಸಂಕಲ್ಪ ಮಾಡಲಗಿತ್ತು. ಆದರೆ ಕೊರೋನಾ ವೇಗ ಹೆಚ್ಚುತ್ತಿರುವ ಕಾರಣ ಸರಕಾರದ ನಿಯಮ ಪಾಲನೆ ಮತ್ತು ಸಮಾಜ ಬಾಂಧವರ ಆರೋಗ್ಯದ ಹಿತದೃಷ್ಠಿಯಿಂದ ಕಾರ್ಯಕ್ರಮವನ್ನು ಶ್ರೀಗಳು ರದ್ದುಪಡಿಸಿದ್ದಾರೆ. ಕೂಡಲೆ ಮೀಸಲಾತಿ ಘೋಷಿಸಿ ನಮ್ಮ ಸಮಾಜದ ಬಡ ಜನಾಂಗಕ್ಕೆ ಅನುವು ಕಲ್ಪಿಸಿಕೊಡಬೇಕು, ಒಂದುವೇಳೆ ಮೀಸಲಾತಿ ನೀಡುವುದು ವಿಳಂಬ ಮಾಡಿದರೆ, ಕೊರೋನಾ ಕಡಿಮೆಯಾಗುತ್ತಿದ್ದಂತೆ ಮತ್ತೆ ಹೋರಾಟ ನಡೆಸಬೇಕಾಗುತ್ತದೆ. ಚುನಾವಣೆ ಸಮೀಪಿಸುತ್ತಿದ್ದು ಕೂಡಲೆ ಮೀಸಲಾತಿ ಘೋಷಿಸಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಸರಕಾರಕ್ಕೆ ನಮ್ಮ ಸಮಾಜ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ನೀಲಕಂಠ ಬಿರಾದಾರ, ಶಿವಕುಮಾರ ಬಿರಾದಾರ, ಸಿದ್ದು ಗಿರಿಸಾಗರ, ರೇವು ಬಿರಾದಾರ, ಮಲ್ಲು ಗುಂಜಟ್ಟಿ, ನಾಗರಾಜ ಖಣದಾಳ, ರವಿ ಮಡಗೊಂಡ, ಈರಣ್ಣ ಖಣದಾಳ, ಶಾಂತಪ್ಪ ಬಿರಾದಾರ, ಶ್ಯಾಮ ವಿಭೂತಿ, ಶಿವಯೋಗಿ ಖಣದಾಳ, ಧರ್ಮು ಖಣದಾಳ, ಮಹೇಶ ನಾರಾಯಣ್, ಮಾದೇವ ಬಿರಾದಾರ, ಶ್ರೀಶೈಲ ಬಿರಾದಾರ, ಮಾಣಿಕ್‌ರಾಯ ಬಿರಾದಾರ ಸೇರಿದಂತೆ ಮತ್ತಿತರರು ಇದ್ದರ 


ಸುದ್ದಿ ಓದಿ