ಆರೋಗ್ಯಕರ ಗ್ರಾಮ ಮಾಡುವುದೇ ನಮ್ಮ ಉದ್ದೇಶವಾಗಿದೆ : ಆಸ್ಮಬಾನು
ಇಂಡಿ,13 : ತಾಲ್ಲೂಕಿನ ತಾಂಬಾ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿರುವ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮವನ್ನು ತಾಂಬಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಸ್ಮಬಾನು ಅವರು ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರ ಆರೋಗ್ಯಕ್ಕಾಗಿ ಪಂಚಾಯತ್ ರಾಜ್ ಇಲಾಖೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಗ್ರಾಮದ ಆರೋಗ್ಯ ಮತ್ತು ನೀರು ನೈರ್ಮಲ್ಯ, ಕ್ಷಯ ಮುಕ್ತ ಗ್ರಾಮ ಪಂಚಾಯಿತಿ. ಬಿಪಿ ಶುಗರ್ ಸ್ಕ್ರೀನಿಂಗ್ ಕ್ಯಾಂಪ್.ಆಪೌಷ್ಟಿಕತೆ ಮತ್ತು ರಕ್ತ ಹೀನತೆ ಮುಕ್ತ ಗ್ರಾಮ.ಬಾಲ್ಯ ವಿವಾಹ. ತಡೆಗಟ್ಟುವಿಕೆ ಮುಟ್ಟಿನ ನೈರ್ಮಲ್ಯ ಅರಿವು.ಸೇರಿದಂತೆ ಆರೋಗ್ಯಕರ ಗ್ರಾಮ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮ ಸಂಬಂಧಿತ ಪ್ರಾಥಮಿಕ ಆರೋಗ್ಯ ಸುಕ್ಷಾಧಿಕಾರಿ ಟಿ ಏ ಪಿಂಜಾರ. ಎಸ್ ಆರ್ ಬಿರಾದಾರ,ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಯೋಗಪ್ಪ ಸಿದ್ದಪ್ಪ ಅವಟೆ.ರವೀಂದ್ರ ಕ್ಷತ್ರಿ.ದಾನಪ್ಪ ಏಳುಕೋಟಿ .ಬಿ ಎಚ್ ತೋಟದ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಸರೋಜಿನಿ ಕಂಬಾರ. ನಿರೂಪಿಸಿದರು ಟಿ.ಎಚ್. ಪಿಂಜಾರ.ಮತ್ತು ಸುವರ್ಣ ರಾಂಪುರೆ ಪ್ರಾರ್ಥಿಸಿದರು. ಕಾಶಿಬಾಯಿ ಸೋಮಲಿಂಗ ಸ್ವಾಗತಿಸಿದರು. ಎಸ್ ಆರ್ ಬಿರಾದಾರ್ ವಂದಿಸಿದರು.