ಸಾಮಾನ್ಯ ಕಾರ್ಯಕರ್ತರು ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ: ಶಾಸಕ ಕಾಗೆ
ಲೋಕದರ್ಶನ ವರದಿ
ಸಂಬರಗಿ 25: ಕ್ಷೇತ್ರದಲ್ಲಿ ಯಾವುದೇ ಸಾಮಾನ್ಯ ಕಾರ್ಯಕರ್ತರು ತಮ್ಮ ಕೆಲಸಕ್ಕಾಗಿ ನೇರವಾಗಿ ನನ್ನನ್ನು ಸಂಪರ್ಕಿಸಬೇಕು. ಸಾಮಾನ್ಯ ಕಾರ್ಯಕರ್ತರ ಕೆಲಸಕ್ಕೆ ಮಧ್ಯವರ್ತಿಗಳ ಅವಶ್ಯಕವಿಲ್ಲ, ನಾನು ಸುಳ್ಳು ಭರವಸೆ ನೀಡುವವನಲ್ಲ. ನೇರವಾಗಿ ಮಾತನಾಡಿ ಕೆಲಸ ಮಾಡುವುದು ನನ್ನ ಗುರಿ ಎಂದು ಶಾಸಕ ರಾಜು ಕಾಗೆ ಹೇಳಿದರು.
ಶಿವನೂರ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಪಿಕೆಪಿಎಸ್ ಸಂಘದಿಂದ ಸತ್ಕಾರ ಹಾಗೂ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮಪಂಚಾಯತದ ಅಭಿವೃದ್ಧಿಗಾಗಿ ನಮ್ಮಿಂದ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದು, ಸರಕಾರದಿಂದ ಗ್ರಾಮಪಂಚಾಯತಗೆ ಅನುದಾನ ಅಲ್ಪ ಪ್ರಮಾಣದಲ್ಲಿದ್ದು, ಗ್ರಾಮಮಟ್ಟದ ಫಲಾನುಭವಿ ಆಯ್ಕೆಮಾಡುವ ಸಂದರ್ಭದಲ್ಲಿ ಗ್ರಾಮಪಂಚಾಯತದಲ್ಲಿ ಗ್ರಾಮಸ್ಥರು ವಿಶೇಷ ಸಭೆ ನಡೆಸಿ ಕಡುಬಡವ, ನಿರಾಶ್ರಿತ ಕುಟಂಬಗಳನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಗುವುದು. ತಮ್ಮ ಗ್ರಾಮದಲ್ಲಿ ಆಗಬೇಕಾದ ಕೆಲಸಗಳ ಪಟ್ಟಿಮಾಡಿ, ನನಗೆ ಸಲ್ಲಿಸಬೇಕು. ಹಂತ ಹಂತವಾಗಿ ನಾನು ಕೆಲಸ ಪೂರ್ಣಗೊಳಸುತ್ತೇನೆ. ಇದು ಕೇವಲ ಆಶ್ವಾಸನೆ ಅಲದಲ, ಅಭಿವೃದ್ಧಿ ಮಾಡುತ್ತೇನೆ. ಈ ಭಾಗದ ನೆನೆಗುದ್ದಿಗೆ ಬಿದ್ದಿರುವ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು ಇನ್ನೂ 200 ಕೋಟಿ ಅನುದಾನದ ಅವಶ್ಯಕತೆಯಿದೆ. ಹೊಳೆ ದಂಡಿಯಲ್ಲಿ ಯೋಜನೆಯ ಕೆಲಸ ಸರಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಿವನೂರ ಗ್ರಾಮದ ಪಿಕೆಪಿಎಸ್ ಸಂಘದ ಅಧ್ಯಕ್ಷ ರಾವಸಾಬ ಬೆವನೂರ ಮಾತನಾಡಿ ಗ್ರಾಮಕ್ಕೆ ಸ್ಮಶಾನ ಭೂಮಿ ಅವಶ್ಯಕತೆಯಿದೆ. ಜಲಜೀವನ ಯೋಜನೆ ಮುಖಾಂತರ ಗ್ರಾಮದಲ್ಲಿ ನೀರು ಸರಬರಾಜುಮಾಡುತ್ತಿದ್ದಾರೆ. ಆದರೆ ಇನ್ನೂ ಗ್ರಾಮದಲ್ಲಿ ಯಾವುದೇ ಮನೆಗೆ ನೀರು ತಲುಪಿಲ್ಲ. ಗ್ರಾಮದಲ್ಲಿ ವಿವಿಧ ಸಮುದಾಯಭವನ ಹಾಗೂ ಗ್ರಾಮದಲ್ಲಿ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯ ಪ್ರಾರಂಭಮಾಡಬೇಕೆಂದುಶಾಸಕರಿಗೆ ಮನವಿ ಸಲ್ಲಿಸಿದರು.
ಅನಂತಪೂರ ಬ್ಲಾಕದ ಕಾಂಗ್ರೆಸ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಮಾ.ಜಿ.ಜಿ.ಪ. ಸದಸ್ಯ ವಿನಾಯಕ ಬಾಗಡಿ, ಶಿದ್ರಾಯ ತೇಲಿ, ಶಿವಾನಂದ ಗೊಲಬಾವಿ, ಗುರಪ್ಪ ಮಗದುಮ, ರಾಮನಗೌಡ ಪಾಟೀಲ, ಪಂಡಿತ ಕಾಂಬಳೆ, ಬಾಳು ಮಾನೆ, ಸಂಬಾಜಿ ವಾಘ್ಮೋಡೆ, ಬಾಹುಸಾಹೇಬ ವಾಘ್ಮೋಡೆ, ಶ್ರೀಶೈಲ ಪಾಟೀಲ, ಸದಾಶಿವ ಬಿರಾದಾರ, ಪಿಕೆಪಿಎಸ್ ಮುಖ್ಯ ಕಾರ್ಯನಿವಾರ್ಹಕರು. ಪ್ರಶಾಂತ ಆಜೂರ, ಅಶೋಕ ಸೂರ್ಯವಂಶಿ, ಮುರಗೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು