ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೊಠಡಿಗೆ ನಿಯೋಜಿತ ಅಧಿಕಾರಿ ಬೀಗ
ಲೋಕದರ್ಶನ ವರದಿ
ಶಾಂತವ್ವ ಮರಿಗೌಡರಗೆ ಅಧಿಕಾರ ಹಸ್ತಾಂತರಕ್ಕೆ ಅಡ್ಡಿ
ಬೈಲಹೊಂಗಲ 14: ಪಟ್ಟಣದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಶಾಂತವ್ವಾ ಮರಿಗೌಡರ ಅವರನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶ ನೀಡಿದೆ.
ಗುರುವಾರ ಅಧಿಕಾರ ಸ್ವೀಕರಿಸಲು ಕಚೇರಿಗೆ ಬಂದಾಗ ನಿಯೋಜನಾಧಿಕಾರಿ ಮಂಜುನಾಥ ಕರಿಸಿರಿ ರಜಿಸ್ಟರ್ ಬುಕ್ ಹೊರಗಿಡದೆ ತಮ್ಮ ಕೊಠಡಿಯಲ್ಲಿಟ್ಟು ಬೀಗ ಹಾಕಿಕೊಂಡು ಹೋಗಿದ್ದಾರೆ. ರಜಿಸ್ಟರ್ ಬುಕ್ ಕಡ್ಡಾಯವಾಗಿ ಕಾರ್ಯಾಲಯದಲ್ಲಿರಬೇಕು. ಅದನ್ನು ತಮ್ಮ ಸ್ವಂತ ಆಸ್ತಿಯಂತೆ ತಿಳಿದು ಸಕರ್ಾರದ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ. ಇದನ್ನು ಗಮನಿಸಿದರೆ ಕನರ್ಾಟಕ ಆಡಳಿತ ನ್ಯಾಯ ಮಂಡಳಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಒಬ್ಬ ಮಹಿಳಾ ಅಧಿಕಾರಿಗೆ ಚನ್ನಮ್ಮನ ನಾಡಿನಲ್ಲಿ ಇಂತಹ ದುಸ್ಥಿತಿ ಬಂದಿರುವುದು ಯಾವ ನ್ಯಾಯ? ಎಂದು ಶಾಂತವ್ವಾ ಮರಿಗೌಡರ ಪ್ರಶ್ನಿಸಿದರು.
ಕರಿಸಿರಿ ಅವರನ್ನು ವಿಚಾರಿಸಿದರೆ ನಾನು ಬೆಂಗಳೂರಲ್ಲಿದ್ದೇನೆ. ಸಹಿ ಬೇಕಾದರೆ ನಾಳೆ ಬಂದು ಮಾಡಿ ಎನ್ನುತ್ತಿದ್ದಾರೆ. ಈ ಕುರಿತು ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೆ ನನ್ನ ಗಮನಕ್ಕೆ ತರಬೇಕೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇನ್ನೊಬ್ಬ ದ್ವಿತೀಯ ದರ್ಜೆ ಸಹಾಯಕಿ ಕಮಲವ್ವಾ ಹಿರೇಮಠ ಅವರನ್ನು ವಿಚಾರಿಸಿದಾಗ ರಜಿಸ್ಟರ್ ಬುಕ್ ಕರಿಸಿರಿ ಅವರು ತಮ್ಮ ಕೊಠಡಿಯಲ್ಲಿ ಬೀಗ ಹಾಕಿಕೊಂಡು ಹೋಗಿದ್ದರಿಂದ ರಜಿಸ್ಟರ್ ಬುಕಿನಲ್ಲಿ ಸಹಿ ಮಾಡಿಲ್ಲ. ಕಂಪ್ಯೂಟರನಲ್ಲಿ ಹೆಬ್ಬಟ್ಟು ಮಾತ್ರ ನೀಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಕುರಿತು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಯೋಜಿತ ಅಧಿಕಾರಿ ಮಂಜುನಾಥ ಕರಿಸಿರಿ ಅವರನ್ನು ಸಂಪರ್ಕಿಸಿದಾಗ ಕುಟುಂಬ ಸದಸ್ಯರೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಅದರಿಂದ ಕಚೇರಿಯಲ್ಲಿ ಇಲ್ಲ. ರಜಿಸ್ಟಾರ ಬುಕ್ ಕಚೇರಿಯಲ್ಲಿಯೇ ಇದೆ. ನಾಳೆಯೇ ಬಂದು ಅಧಿಕಾರ ಹಸ್ತಾಂತರಿಸುವೆ. ಇದೇನು ದೊಡ್ಡ ವಿಷಯವಲ್ಲ ಎಂದರು