ಬೈಲಹೊಂಗಲ

ಸಂಚಾರ ನಿಯಮ ಪಾಲನೆ ಪ್ರತಿಯೊಬ್ಬರ ಕರ್ತವ್ಯ: ಪಂಚಾಕ್ಷರಿ ಸಾಲಿಮಠ

ಸಂಚಾರ ನಿಯಮ ಪಾಲನೆ ಪ್ರತಿಯೊಬ್ಬರ ಕರ್ತವ್ಯ: ಪಂಚಾಕ್ಷರಿ ಸಾಲಿಮಠ

ಬೈಲಹೊಂಗಲ 17 : ಹೆಲ್ಮೇಟ್ ಧರಿಸಿ ಜೀವ ಉಳಿಸಿ ಮತ್ತು ರಸ್ತೆ ಸಂಚಾರ ಕಾನೂನು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪಿಎಸ್‌ಐಗಳಾದ ಎಫ್‌.ವಾಯ್‌.ಮಲ್ಲೂರು, ಗುರುರಾಜ ಕಲಬುರ್ಗಿ ಹೇಳಿದರು.   

ಪಟ್ಟಣದ ಪೊಲೀಸ್ ಠಾಣೆಯ ಆಶ್ರಯದಲ್ಲಿ ಶೂರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿ ತಿಳುವಳಿಕೆ ನೀಡಿ ಅವರು ಮಾತನಾಡಿದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾನೂನು ಉಲ್ಲಂಘನೆ ಆಗದಂತೆ ಪ್ರತಿಯೊಬ್ಬ ವಾಹನ ಚಾಲಕರು ಎಚ್ಚರವಹಿಸಬೇಕು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡದಂತೆ, ಕುಡಿದು ವಾಹನ ಚಾಲನೆ ಮಾಡದಂತೆ ತಿಳುವಳಿಕೆ ಹೇಳಿದರು. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಬಾರದು. ಸಂಚಾರಿ ಚಿಹ್ನೆಗಳು, ಸಂಕೇತಗಳು, ನಿಯಮ ತಿಳಿದು ಇವುಗಳನ್ನು ತಪ್ಪದೇ ಪಾಲಿಸಬೇಕೆಂದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ವಾಹನ ಸವಾರರು ಉಪಸ್ಥಿತರಿದ್ದರು.  

ಸಂಚಾರ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಾಹನ ಚಲಾಯಿಸುವ ಮುನ್ನ ಕಾನೂನು ಪಾಲನೆ ಮುಖ್ಯ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಯುವ ಜನತೆ ರಸ್ತೆ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ವಾಹನ ಚಾಲನೆ ಮಾಡಬೇಕು. ಹೆಲ್ಮೇಟ್, ಲೈಸನ್ಸ್‌, ಇನ್ಸೂರೇನ್ಸ್‌ ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸುತ್ತೇವೆ.  

ಪಂಚಾಕ್ಷರಿ ಸಾಲಿಮಠ ಸಿಪಿಐ, ಬೈಲಹೊಂಗಲ   


ಸುದ್ದಿ ಓದಿ