ಯರಗಟ್ಟಿ

ಸರ್ಕಾರ ಸಂಸ್ಕೃತಿ ಇಲಾಖೆಯಿಂದ ಕಲಾವಿದರ ಪೋಷಣೆ: ಮಾಮನಿ

ಸರ್ಕಾರ ಸಂಸ್ಕೃತಿ ಇಲಾಖೆಯಿಂದ ಕಲಾವಿದರ ಪೋಷಣೆ: ಮಾಮನಿ

ಯರಗಟ್ಟಿ 04: ಸಮಾಜದಲ್ಲಿ ಕಲೆಗೆ ಬೆಲೆ ಕಟ್ಟಲಾಗದು ಅದು ಜಾತಿ ಧರ್ಮ ಮೀರಿದ್ದು,  ಸಾಕಷ್ಟು ಕಲಾವಿದರು ಶಿಕ್ಷಣ ಹೊಂದದಿದ್ದರೂ ತಮ್ಮ ಪ್ರತಿಭೆಗಳ ಮೂಲಕ ಸಾಧನೆ ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಉಪ-ಸಭಾಧ್ಯಕ್ಷ  ಆನಂದ ಮಾಮನಿ ಹೇಳಿದರು. 

ಪಟ್ಟಣದ ಮಹಾತ್ಮಾ ಗಾಂಧಿಜಿ ರಸ್ತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಸ್ವಾಮಿ ವಿವೇಕಾನಂದ ಯುವ ಸಾಹಿತ್ಯ ಸಾಂಸ್ಕೃತಿಕ ಸಂಘ,  ಮರಡಿ ಬಸವೇಶ್ವರ ಜಾತ್ರಾ ಕಮೀಟಿ ಸಂಯುಕ್ತ ಆಶ್ರಯದಲ್ಲಿ ಮೇ.2 ರಂದು ನಡೆದ ಜಾನಪದ ಸುಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸರ್ಕಾರ ಸಂಸ್ಕೃತಿ ಇಲಾಖೆಯಿಂದ ಕಲಾವಿದರ ಪೋಷಣೆಯಾಗುತ್ತಿದ್ದು ಕೇಂದ್ರ ಸರ್ಕಾರ ಬಡ ಕಲಾವಿದರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು. 

ಜಾನಪದ ನೃತ್ಯ ಬಸು ಶಿರೂರ ಗುರುದೇವ ಆತ್ಮಾನಂದ ಜಾನಪದ ಕಲಾ ತಂಡ ಮನಿಹಾಳ, ಲಂಬಾಣಿ ಭಜನಾ ವೆಂಕಟೇಶ್ವರ ಭಜನಾ ಕಲಾ ತಂಡ ಹುಲಿಕೇರಿ ತಾಂಡಾ, ಸಣ್ಣಾಟದ ಪದಗಳು ಸಂಗಪ್ಪ ಚೂರಿ ಮದ್ಲೂರ, ಭರತನಾಟ್ಯ ಸರಸ್ವತಿ ಹಾಗೂ ಆರತಿ ಜೋಕಾನಟ್ಟಿ ಗೋಕಾಕ, ಶಿವನ ನೃತ್ಯ ಐಶ್ವರ್ಯ ಗುಡಿಮನಿ ಹಾಗೂ ಸಂಗಡಿಗರು ಯರಗಟ್ಟಿ, ಜಾನಪದ ಸಂಗೀತ ಬಸವರಾಜ ತಾವಲಗೇರಿ ಸವದತ್ತಿ, ಲಂಬಾನಿ ಭಜನೆ ಬಾಯಾ ಭಜನಾ ಕಲಾ ತಂಡ ಹಲಕಿ ತಾಂಡಾ, ಕೋಲಾಟ ಪರ್ವತಗೌಡ ಪಾಟೀಲ ಗುರುದೇವ ಆತ್ಮಾನಂದ ಜಾನಪದ ಕಲಾ ತಂಡ ಮನಿಹಾಳ, ಭಜನೆ ಯಮನವ್ವ ಹಾಗೂ ಅಕ್ಕಮಾಹಾದೇವಿ ಸಂಗಡಿಗರು ಜೋಕಾನಟ್ಟಿ ಹಾಗೂ ಸಿದ್ದೇಶ್ವರ ನಾಟಕ ಸಂಘ ದ್ಲೂರ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಿತು. 

ಮಾಜಿ ಪ್ರಧಾನ ಅಶೋಕ ಹಾದಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಉದ್ದಿಮೆದಾರ ಸದಾಶಿವ ದೊಡಮನಿ, ಪಿಕೆಪಿಎಸ್ ಅಧ್ಯಕ್ಷ ಅಜೀತಕುಮಾರ ದೇಸಾಯಿ. ಅಂಬೇಡ್ಕರ ಯುವ ಸಮಘ ರಾಜ್ಯಾಧ್ಯಕ್ಷ ಯಲ್ಲಪ್ಪ ಮುರಾರಿ, ವಿಶಾಲಗೌಡ ಪಾಟೀಲ, ಎನ್‌.ಕೆ.ಹುಚರಡ್ಡಿ, ಎ.ಕೆ.ಜಮಾದಾರ, ಬಾಸ್ಕರ ಹಿರೇಮೇತ್ರಿ, ಶಿವಾನಂದ ಕರಿಗೊಣ್ಣವರ, ಯಲ್ಲಪ್ಪ ನಾಯ್ಕರ, ಸಂತೋಷ ಅವಜಪ್ಪಗೋಳ, ಲಕ್ಷ್ಮೀ ಹರಿಜನ, ರುದ್ರ​‍್ಪ ಮಾದರ, ಸದಾನಂದ ಹಣಬರ, ಶಿವುಕುಮಾರ ಜಕಾತಿ, ರಾಜು ಕತ್ತಿಶೆಟ್ಟಿ, ಮೊಹನ ಹಾದಿಮನಿ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಮಲಶೆಟ್ಟಿ ಮುಂತಾದವರಿದ್ದರು. 


ಸುದ್ದಿ ಓದಿ