ನೇಗಿನಹಾಳ ಪಿಕೆಪಿಎಸ್ಗೆ ಪ್ರಪ್ರಥಮ ಬಾರಿಗೆ ಜಿದ್ದಾಜಿದ್ದಿನ ಚುನಾವಣೆ; ನಾನಾಸಾಹೇಬ ಪಾಟೀಲ ಬಹುಮತದಿಂದ ಆಯ್ಕೆ
ಲೋಕದರ್ಶನ ವರದಿ
ಬೈಲಹೊಂಗಲ 09: ನೂರಾರು ವರ್ಷಗಳ ಇತಿಹಾಸ ಹೊಂದಿದ ನೇಗಿನಹಾಳ ಪಿಕೆಪಿಎಸ್ ್ರ್ರಥಮ ಬಾರಿಗೆ ರಾಜಕೀಯ ಜಿದ್ದಾ-ಜಿದ್ದಿಗೆ ಬಿದ್ದು ಚುನಾವಣೆ ನಡೆಯುವ ಹಂತ ತಲುಪಿತು.
ನೇಗಿನಹಾಳ ಗ್ರಾಮದಲ್ಲಿರುವ ಈ ಸೊಸೈಟಿಗೆ ಡಿ.ಬಿ ಇನಾಮದಾರ ಅಭಿವೃದ್ಧಿ ಪೆನಲ್ ಹಾಗೂ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಸಹೋದರ ನಾನಾಸಾಹೇಬ ಪಾಟೀಲ ಅವರ ರೈತ ಅಭಿವೃದ್ಧಿ ಪೆನಲ್ ರಚನೆಯಾಗಿ ಇಬ್ಬರ ನಡುವೆ ಬಹಳಷ್ಟು ಹಣಾಹಣಿ ಚುನಾವಣೆ ನಡೆದಿತ್ತು. ಆದರೆ ಮತದಾರರ ಪಟ್ಟಿಯಲ್ಲಿ ಬಹಳಷ್ಟು ರೈತರ ಹೆಸರು ಕೈಬಿಟ್ಟಿದ್ದರಿಂದ ಮತದಾನದ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲು ಹತ್ತಲಾಗಿತ್ತು. ಆದರಿಂದ ಮತ ಏಣಿಕೆಯ ದಿನಾಂಕ ಹಲವಾರು ಬಾರಿ ಮುಂದೆ ಹೋಗಿ ಕೊನೆಗೆ ಅವರಿಗೂ ಸಹ ಮತದಾನ ಮಾಡಲು ಅವಕಾಶ ಕಲ್ಪಿಸಿ ಮತದಾನ ಹಕ್ಕು ಚಲಾಯಿಸಲು ಕೋರ್ಟ್ ಅನುಮತಿ ನೀಡಿತು. ಮತ ಎಣಕೆ ನಡೆದು ನಾನಾಸಾಹೇಬ ಪಾಟೀಲ ಅವರ ಪೆನಲ್ ಬಹುಮತದೊಂದಿಗೆ ಆಯ್ಕೆಯಾಗಿದೆ.
ಒಟ್ಟಾರೆ ಆಯ್ಕೆಯಾದ ಅಭ್ಯರ್ಥಿಗಳು ಸಾಮಾನ್ಯ ಸಾಲಗಾರರ ಅಭ್ಯರ್ಥಿಗಳಾದ ನಾನಾಸಾಹೇಬ ಪಾಟೀಲ, ಬಸವರಾಜ ದಿವಾಣದ, ಮಡಿವಾಳಪ್ಪ ಕುಲ್ಲೋಳ್ಳಿ, ಶಿವಾನಂದ ಕುಂಕೂರ, ಕಾಶಪ್ಪ ಉಳವಿ, ಬ ವರ್ಗದ ಅಭ್ಯರ್ಥಿ ಈರಣ್ಣಾ ಉಳವಿ, ಸಾಲಗಾರರಲ್ಲದ ಅಭ್ಯರ್ಥಿ ಪ್ರಲ್ಹಾದ್ ಘಂಟಿ, ಅ ವರ್ಗದ ಅಭ್ಯರ್ಥಿ ಶರಣಯ್ಯಾ(ರಾಜು) ಕಾರಿಮನಿ, ಮಹಿಳಾ ಅಭ್ಯರ್ಥಿ ಕಮಲವ್ವ ಚನ್ನಪ್ಪಗೌಡರ, ನಾಗರತ್ನಾ ವಿಠ್ಠಪ್ಪನವರ, ಎಸ್.ಸಿ ಅಭ್ಯರ್ಥಿ ದೊಡ್ಡಪ್ಪ ಮಾಳಗಿ, ಎಸ್ ಅಭ್ಯರ್ಥಿ ಪಕ್ಕೀರ್ಪ ಹೋಳಿ ಆಯ್ಕೆಯಾಗಿದ್ದಾರೆ.
ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಕಿತ್ತೂರು ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಕೃಷ್ಣಾಜಿ ಕುಲಕರ್ಣಿ, ಮುದಕಪ್ಪ ಮರಡಿ, ಮಹಾದೇವ ಮಡಿವಾಳರ, ಶಿವಾನಂದ ದಿವಾಣದ, ಸಲೀಮ ಬಸ್ತವಾಡ, ಮಂಜುನಾಥ ಹಾರೂಗೊಪ್ಪ, ಶ್ರೀಶೈಲ ಹಡಗಿನಹಾಳ, ಮಡಿವಾಳಪ್ಪ ಮೆಳವಂಕಿ, ಬಸವರಾಜ ಅಂಗಡಿ, ಚಿದಾನಂದ ಬೆಳಗಾವಿ ಇದ್ದರು