ಇಂಡಿ

ಅ.3ರಿಂದ ನಾಡದೇವಿಯ ನವರಾತ್ರಿ ಉತ್ಸವ ಆರಂಭ: ದೇವಾನಂದ ಚವ್ಹಾಣ

ಅ.3ರಿಂದ ನಾಡದೇವಿಯ ನವರಾತ್ರಿ ಉತ್ಸವ ಆರಂಭ: ದೇವಾನಂದ ಚವ್ಹಾಣ

ಇಂಡಿ 30: ತಾಲೂಕಿನ ತಾಂಬಾ ಗ್ರಾಮದಲ್ಲಿ ದಿ. 3ರಿಂದ 11ರವರೆಗೆ ನಾಡದೇವಿಯ ನವರಾತ್ರಿ ಉತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ನಾಡದೇವಿ ನವರಾತ್ರಿ ಉತ್ಸವ ಅಧ್ಯಕ್ಷರು ಹಾಗೂ ನಾಗಾಠಾಣ ಮಾಜಿ ಶಾಸಕ ದೇವಾನಂದ ಚವ್ಹಾಣ ಹೇಳಿದರು.ತಾಂಬಾ ಗ್ರಾಮದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಅಂಬಾಭವಾನಿ ಎಜ್ಯುಕೇಶನ್ ಟ್ರಸ್ಟ್‌, ಜಗದಂಬಾ ವಿದ್ಯಾವರ್ಧಕ ಸಂಘ ಹಾಗೂ ತಾಂಬಾ ಗ್ರಾಮಸ್ಥರ ಸಹಯೋಗದೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.  

ದಿ. 3ರಂದು ಗುರುವಾರ ಬೆಳಿಗ್ಗೆ 10ಗಂಟೆಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟನೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ವಹಿಸುವರು. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಕುಂಭ ಮೇಳಕ್ಕೆ ಚಾಲನೆ ನೀಡಲ್ಲಿದ್ದಾರೆ. ಭವ್ಯ ಮೆರವಣಿಗೆಗೆ ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಅವರು ಚಾಲನೆ ನೀಡಲಿದ್ದಾರೆ. ಸಾನ್ನಿಧ್ಯವನ್ನು ಅಭಿನವ ಮುರುಗೇಂದ್ರ ಮಾಹಾಸ್ವಾಮಿ ಶಿರಶ್ಯಾಡ, ಸೋಮಲಿಂಗ ಮಾಹಾಸ್ವಾಮಿಗಳು ಕೆಸರಟ್ಟಿ, ಜಗನುಮಾಹಾರಾಜರು ವಹಿಸಲಿದ್ದು ರಾಜಕೀಯ ಅನೇಕ ಗಣ್ಯರು, ಗ್ರಾಮಸ್ಥರು ಉಪಸ್ಥಿತಿ ಇರಲಿದ್ದಾರೆ.ನವರಾತ್ರಿ ಉತ್ಸವದ ನಿಮಿತ್ತವಾಗಿ 1501 ಕುಂಭಮೇಳ, ಆನೆ, ಕುದುರೆಗಳು, ಸೃಷ್ಠಿ ಆರ್ಟ್ಸನ ಯಕ್ಷಗಾನ, ಟ್ರ್ಯಕ್ಟರ್ ಜಗ್ಗುವ ಸ್ಪರ್ಧೆ, ಎತ್ತಿನ ಬಂಡಿ, ಭಾರ ಜಗ್ಗುವ ಸ್ಪರ್ಧೆ, ರಾಜ್ಯ ಮಟ್ಟದ ಮಹಿಳೆಯರ ಹಾಗೂ ಪುರುಷರ ಮುಕ್ತ ಖೋ ಖೋ ಹಾಗೂ ಕಬಡ್ಡಿ ಪಂದ್ಯಾವಳಿ ಉಚಿತ ಕಣ್ಣು ತಪಾಸಣೆ ಮತ್ತು ರಕ್ತದಾನ, ನಾಟಕ ಪ್ರದರ್ಶನ, ಲೇಝಿಮ್ ಕುಣಿತ, ನಾಶಿಕ ಢೋಲ, ಬಂಜಾರ ನೃತ್ಯ, ಡಿ.ಜೆ ಸೌಂಡ್ ಸಿಸ್ಟಮ್, ಕೀಲು ಕುದುರೆ ಕುಣಿತ, ಬ್ರಾಸ್ ಬ್ಯಾಂಡ್, ನವಿಲು ಕುಣಿತ, ಮಹಿಳಾ ಡೊಳ್ಳು ಕುಣಿತ, ಮದ್ದುಸುಡುವ ಕಾರ್ಯಕ್ರಮ ಸೇರಿದಂತೆ 9 ದಿನಗಳ ಕಾಲ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು. 

ಉತ್ತರ ಕರ್ನಾಟಕದಲ್ಲಿಯೇ ಮೈಸೂರು ಮಾದರಿಯಲ್ಲಿ ನಾಡದೇವಿಯ ನವರಾತ್ರಿ ಉತ್ಸವ ನಡೆಯುವುದು ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಮಾತ್ರ ಎಂದರು ತಪ್ಪಾಗಲಾರದು. ಈ ಸುದ್ದಿ ಗೋಷ್ಠಿಯಲ್ಲಿ ಜಗದಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ ಬಿ ಅಂಗಡಿ, ಕಾರ್ಯದರ್ಶಿ ರವಿಕುಮಾರ್ ಚವ್ಹಾಣ, ತಾಂಬಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಜೆ ಎಸ್ ಹತ್ತಳ್ಳಿ, ರಾಚಪ್ಪ ಗಳೇದ, ಅಪ್ಪು ಕಲ್ಲೂರ, ಜಿ ವಾಯ್ ಗೋರನಾಳ, ರಾಜು ಗಂಗನಳ್ಳಿ, ಪ್ರಕಾಶ್ ಮುಂಜಿ, ಕಾಮೇಶ ಉಕ್ಕಲಿ, ಶಂಕರ ಏಳಕೊಟಿ, ವಿ ಆರ್ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ