ನವರಾತ್ರಿ: ಚೈತನ್ಯ ದರ್ಶನ ಕಾರ‌್ಯಕ್ರಮ

ಇಂಡಿ 25: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯಲ್ಲಿ ನವರಾತ್ರಿ ನಿಮಿತ್ಯ ನವಶಕ್ತಿದೇವಿಯರ ಚೈತನ್ಯ ದರ್ಶನ ಕಾರ‌್ಯಕ್ರಮವನ್ನು ಆಚರಿಸಲಾಯಿತು. 

ಬಿ.ಕೆ. ಯಮುನಾ ಅಕ್ಕನವರು ಮಾತನಾಡಿ, ನವದೇವಿಯ ಆಧ್ಯಾತ್ಮ ರಹಸ್ಯದ ಕುರಿತು ಆಶೀರ್ವಚನ ನೀಡಿದರು. 

ಉಮಾ ಪಟ್ಟದಕಲ್, ನಾಗಮ್ಮ ಸಂಗಾ, ದ್ರಾಕ್ಷಾಯಿಣಿ ಮೈದರಗಿ, ವಿದ್ಯಾಶ್ರೀ ಪಾಟೀಲ, ಶ್ಯಾಮಲಾ ಬಗಲಿ, ಭಾರತಿ ಮಾಳಭಾಗಿ, ಜ್ಯೋತಿ ವಂದಾಲ ಸೇರಿದಂತೆ ಇನ್ನಿತರರು ಇದ್ದರು.