ರಾಷ್ಟ್ರೀಯ ಕೃಷಿಕರ ದಿನಾಚರಣೆ
ಇಂಡಿ: ಕೃಷಿಕರ ಪ್ರಗತಿಯ ಮೇಲೆ ರಾಷ್ಟ್ರದ ಭವಿಷ್ಯ ಅವಲಂಬಿಸಿದ್ದು ಕೃಷಿ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ, ಆಧುನಿಕ ತಂತ್ರಜ್ಞಾನ ಮೂಲಕ ಜಾಗತಿಕ ಸ್ಪರ್ಧೆಯ ಮೂಲಕ ಸುಸ್ಥಿರತೆಯನ್ನು ಕಂಡುಕೊಳ್ಳಬೇಕಾಗಿದೆ ಎಂದು ಹಿರಿಯ ವಿಜ್ಞಾನಿ ಮತ್ತು ಕೆವಿಕೆ ಮುಖ್ಯಸ್ಥ ಆರ್.ಬಿ.ನೆಗಳೂರ ಹೇಳಿದರು
ಅವರು ಗುರುವಾರ ಪಟ್ಟಣದ ರೈಲ್ವೆ ಸ್ಟೇಷನ ರಸ್ತೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರೀಯ ಕೃಷಿಕರ ದಿನಾಚರಣೆಯು ಭಾರತ ದೇಶದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮ ದಿನದಂದು ಆಚರಿಸಲಾಗುತ್ತದೆ. ಚೌಧರಿ ಚರಣಸಿಂಗ್ ಅವರು ತಮ್ಮ ಕಾರ್ಯವಧಿಯಲ್ಲಿ ಅನ್ನದಾತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆತಂದುಆಧುನಿಕ ಕೃಷಿ ತಂತ್ರಜ್ಞಾನದ ಅದರ ಬಳಕೆಗೆ ಪ್ರೋತ್ಸಾಹ ನೀಡಿದ್ದರು ಎಂದು ತಿಳಿಸಿದರು.
ಡಾ.ಸವಿತಾ ಬಿ,ಡಾ.ಸಂತೋಷ ಶಿಂಧೆ, ಡಾ. ಅಂಜುಮ ಮಾತನಾಡಿ ಸರಕಾರ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಇತರ ಕೃಷಿ ಪರಿಕರಗಳ ಲಭ್ಯತೆ ನೀಡುತ್ತದೆ. ಸುಧಾರಿತ ವಿಧಾನದ ಬೇಸಾಯದ ಮಾಹಿತಿ ನೀಡುತ್ತದೆ. ಸಂಸ್ಕರಣೆ, ಪ್ಯಾಕಿಂಗ್ಗೆ ಅಗತ್ಯ ನೆರವು ನೀಡುತ್ತದೆ. ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳ ಲಭ್ಯತೆ, ಅದಲ್ಲದೆ ಬ್ಯಾಂಕುಗಳು ರೈತರಿಗೆ ಅರ್ಥಿಕ ನೆರವು ನೀಡುತ್ತವೆ ಎಂದು ತಿಳಿಸಿದರು. ಮತ್ತು ರೈತರ ಪ್ರಗತಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ರೈತರು ಪಾಲ್ಗೊಂಡಿದ್ದರು.