ಬೈಲಹೊಂಗಲ

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ: ವಿಶೇಷ ಚೇತನರಿಗೆ ಕಾರ್ಯಾಗಾರ

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ: ವಿಶೇಷ ಚೇತನರಿಗೆ ಕಾರ್ಯಾಗಾರ

ಬೈಲಹೊಂಗಲ 14: ತಾಲೂಕ ಪಂಚಾಯತ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿಶೇಷ ಚೇತನರಿಗೆ ಕಾರ್ಯಾಗಾರವನ್ನು ಬುಧವಾರ ಆಯೋಜಿಸಲಾಗಿತ್ತು.  

ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಸುಭಾಷ್ ಸಂಪಗಾವಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 4253 ಅಂಗವಿಕಲರಿದ್ದು ಅದರಲ್ಲಿ 1056 ಜನರು ಉದ್ಯೋಗ ಖಾತ್ರಿ ಜಾಬಕಾರ್ಡನ್ನು ಹೊಂದಿರುವರು. 2021-22 ನೇ ಸಾಲಿನಲ್ಲಿ 294 ಅಂಗವಿಕಲರು ಕೆಲಸ ಮಾಡಿ 8770 ಮಾನವ ದಿನಗಳನ್ನು ಸೃಜಿಸಿದ್ದು, 2022-23 ನೇ ಸಾಲಿಗೆ ವಿಶೇಷ ಚೇತನರು ಹೆಚ್ಚಿನ ಪ್ರಾಮಾಣದಲ್ಲಿ ಕೆಲಸಕ್ಕೆ ಬರುವಲ್ಲಿ ಕೈಜೋಡಿಸಿ ಶ್ರಮಿಸೋಣ ಎಂದರು. 

ತಾ.ಪಂ ಸಹಾಯಕ ನಿರ್ದೆಶಕ  ವಿಜಯ ಪಾಟೀಲ ಸಹಾಯಕ ನಿರ್ದೇಶಕರು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಇದ್ದು ಪೂರ್ಣ ಪ್ರಮಾಣದ ಕೂಲಿ ನೀಡಲಾಗುವುದು. ವೈಯಕ್ತಿಕ ಕಾಮಗಾರಿಗಳು ಬದು ನಿರ್ಮಾಣ, ಕೃಷಿ ಹೊಂಡ, ಬಚ್ಚಲು ಗುಂಡಿ, ಎರೆಹುಳು ತೊಟ್ಟಿ ಹಾಗೂ ತೋಟಗಾರಿಕೆ, ಕೃಷಿ ಇಲಾಖೆಯಲ್ಲಿರುವ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗುವಂತೆ ತಿಳಿಸಿದರು. 

ಜಿ.ಪಂ ಇಐಸಿ ಜಿಲ್ಲಾ ಸಂಯೋಜಕ ಪ್ರಮೋದ ಗೊಡೆಕರ  ಅವರು ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಇರುವ ವಿಶೇಷ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. 

ತಾಲೂಕಿನ 34 ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮೀಣ ಪುನರರ್ವಸತಿ ಕಾರ್ಯಕರ್ತರು, ಗ್ರಾಮ ಕಾಯಕ ಮಿತ್ರರು, ತಾಲೂಕಿನ ಗ್ರಾ. ಪಂ ವಿಶೇಷ ಚೇತನರು ಇದ್ದರು. 

ಎಸ್‌.ವ್ಹಿ.ಹಿರೇಮಠ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ