ನಾರಿಮಣಿಗಳ ಭವ್ಯ ರ್ಯಾಲಿ: ಶ್ರೀಮಂತ ಪಾಟೀಲರಿಗೆ ಬೆಂಬಲ
ಅಥಣಿ 05: ಕಾಗವಾಡ ಮತಕ್ಷೇತ್ರದ ಶಿರಗುಪ್ಪಿ ಗ್ರಾಮದ ಸಾವಿರಾರು ಸಂಖ್ಯೆಯಲ್ಲಿದ್ದ ನಾರಿಮಣಿಗಳು ಭವ್ಯ ರ್ಯಾಲಿಯ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮಂತ ಬಾಳಾಸಾಬ ಪಾಟೀಲ ಅವರಿಗೆ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದರು.
ಶಿರಗುಪ್ಪಿ ಗ್ರಾಮದಲ್ಲಿ ಶ್ರೀಮಂತ ಪಾಟೀಲ ಅವರ ಧರ್ಮಪತ್ನಿ ಉಜ್ವಲಾ ಪಾಟೀಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವತ್ಥಪೂರ, ಧುರಿಣೆ ಉಜ್ವಲಾ ಶೆಟ್ಟಿ ಹಾಗೂ ಶಿರಗುಪ್ಪಿ ಗ್ರಾಪಂ ಅಧ್ಯಕ್ಷೆ ಅರ್ಪಣಾ ಪಾಟೀಲ ಇವರ ನೇತೃತ್ವದಲ್ಲಿ ಭವ್ಯ ಪ್ರಚಾರ ರ್ಯಾಲಿಯನ್ನು ಏರ್ಪಡಿಸಲಾಗಿತ್ತು. ಅನೇಕ ಮಹಿಳಾ ಮಂಡಳದ ಸದಸ್ಯೆಯರು, ಸಂಘ ಸಂಸ್ಥೆಗಳ ಮಹಿಳಾ ಪದಾಧಿಕಾರಿಗಳು, ಬಿಜೆಪಿ ಪಕ್ಷದ ಮಹಿಳಾ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ನ ಭೂತೋ ನ ಭವಿಷ್ಯತಿ ಎನ್ನುವಂತೆ ಮಹಿಳೆಯರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮಂತ ಪಾಟೀಲರ ಕೈಬಲ ಪಡಿಸಿದಂತಾಗಿದೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮಹಿಳಾ ರ್ಯಾಲಿಯೂ ದಾರಿಯುದ್ದಕ್ಕೂ ಬಿಜೆಪಿ ಪಕ್ಷಕ್ಕೆ, ಪ್ರಧಾನಿ ನರೇಂದ್ರ ಮೋದಿಜಿಯವರಿಗೆ, ಅನೇಕ ಬಿಜೆಪಿ ನಾಯಕರ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮಂತ ಪಾಟೀಲರಿಗೆ ಜೈಘೋಷಣೆ ಹಾಕುತ್ತಾ ಗ್ರಾಮ ಸಂಪೂರ್ಣ ಬಿಜೆಪಿಮಯವಾಗಿತ್ತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರ್ಯಾಲಿಯೂ ನಂತರ ಸಭೆಯಾಗಿ ಮಾರ್ಪಟ್ಟಿತು. ಚುನಾವಣಾ ಪ್ರಚಾರ ಸಭೆಯಲ್ಲಿ ಶ್ರೀಮಂತ ಪಾಟೀಲ ಅವರ ಧರ್ಮಪತ್ನಿ ಉಜ್ವಲಾ ಪಾಟೀಲ ಮಾತನಾಡಿ ಬಿಜೆಪಿ ಸರ್ಕಾರ ಮಹಿಳಾ ಸಬಲಿಕರಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವನ್ನು ಇಲ್ಲಿ ಸೇರಿದ ಮಹಿಳೆಯರೆಲ್ಲರೂ ಪಡೆದುಕೊಂಡಿದ್ದಾರೆ. ಕರ್ನಾಟಕದ ಹಾಗೂ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀಮಂತ ಪಾಟೀಲ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆಯ್ಕೆಗೊಳಿಸುವಂತೆ ಮನವಿ ಮಾಡಿಕೊಂಡರು.
ಇದೇ ಸಮಯದಲ್ಲಿ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವತ್ಥಪೂರ, ಉಜ್ವಲಾ ಶೆಟ್ಟಿ, ಗೀತಾಂಜಲಿ ಚೌಗಲೆ, ರೂಪಾಲಿ ಕಚರೆ, ಮೊದಲಾದ ಮಹಿಳಾ ನಾಯಕಿಯರು ಬಿಜೆಪಿ ಪಕ್ಷ ಹಾಗೂ ಅಭ್ಯಥರ್ಿ ಕುರಿತು ವಿವರವಾಗಿ ಮಾತನಾಡಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಹಿಳೆಯರಿಗೆ ಕರೆ ನೀಡಿದರು. ಉಜ್ವಲಾ ಪಾಟೀಲ, ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವತ್ಥಪೂರ, ಉಜ್ವಲಾ ಶೆಟ್ಟಿ, ಗೀತಾಂಜಲಿ ಚೌಗಲೆ, ಶಿರಗುಪ್ಪಿ ಗ್ರಾಪಂ ಅಧ್ಯಕ್ಷೆ ಅರ್ಪಣಾ ಪಾಟೀಲ, ಉಪಾಧ್ಯಕ್ಷೆ ಶೃತಿ ಕಾಂಬಳೆ, ಅರ್ಪಣಾ ಮೊನೆ, ಮಿನಾಕ್ಷಿ ಕುಂಬಾರ, ರೂಪಾಲಿ ಕಚರೆ, ಮುಖಂಡರುಗಳಾದ ಶಿವಾನಂದ ಪಾಟೀಲ, ಅಭಯಕುಮಾರ ಅಕಿವಾಟೆ, ಬೊಮ್ಮಣ್ಣಾ ಚೌಗಲೆ, ರಾಮಗೌಡ ಪಾಟೀಲ, ಸದಾಶಿವ ಪೂಜಾರಿ, ಸುಭಾಷ ಮೊನೆ, ಶುಭಂ ಕಾಟಕರ, ಪ್ರಕಾಶ ಢಂಗ, ಮಂಜುನಾಥ ಕೋಳಿ, ಅಕ್ಷಯ ಪಾಟೀಲ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳಾ ಮಂಡಳಗಳ ಸದಸ್ಯೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು