ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮ
ಬೈಲಹೊಂಗಲ :ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಪುರಸಭೆ ವ್ಯಾಪ್ತಿಯಲ್ಲಿ “ನನ್ನ ಮಣ್ಣು ನನ್ನ ದೇಶ" (ಮೇರಿ ಮಿಟ್ಟಿ ಮೇರಾ ದೇಶ್) ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಪುರಸಭೆ ವ್ಯಾಪ್ತಿಯಲ್ಲಿ ಆಯೋಜಿಸಲಾದ “ನನ್ನ ಮಣ್ಣು ನನ್ನ ದೇಶ" ಅಭಿಯಾನದ ಭಾಗವಾಗಿ ಪಟ್ಟಣದ ದೊಡ್ಡಕೆರೆಯ ಉದ್ಯಾನವನದಲ್ಲಿ ಸಸಿನೆಡುವ ಮೂಲಕ ಭೂಮಿ ತಾಯಿಗೆ ದೇಶಿ ಸಸಿಗಳಿಂದ ಮರುಪೂರಣ ಮಾಡುವ ಮೂಲಕ ವಂದನೆ ಸಲ್ಲಿಸಲಾಯಿತು. ಹಾಗೂ ಕೈಯಲ್ಲಿ ಮಣ್ಣಿನೊಂದಿಗೆ ಪುರಸಭೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಾಮೂಹಿಕವಾಗಿ ಪಂಚಪ್ರಾಣ ಪ್ರತಿಜ್ಞೆಯನ್ನು ತೆಗೆದುಕೊಂಡರು ಹಾಗೂ ಇದೇ ಸಂದರ್ಭದಲ್ಲಿ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮತ್ತು ಕಿತ್ತೂರು ರಾಣಿ ಚನ್ನಮ್ಮಾಜಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ದೇಶಿ ಕ್ರೀಡೆಗಳಾದ ಕಬ್ಬಡ್ಡಿ, ಖೋ-ಖೋ, ಹಗ್ಗ ಜಗ್ಗಾಟ ಹಾಗೂ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಯಿತು. ಶಾಸಕ ಮಹಾಂತೇಶ ಎಸ್. ಕೌಜಲಗಿ , ಉಪವಿಭಾಗಾಧಿಕಾರಿ ಪ್ರಭಾವತಿ ಎಪ್, ಮುಖ್ಯಾಧಿಕಾರಿ ವಿರೇಶ ಹಸಬಿ , ಕಛೇರಿ ವ್ಯವಸ್ಥಾಪಕ ಎಮ್.ಆಯ್.ಕುಟ್ರಿ, ಕಂದಾಯ ಅಧಿಕಾರಿ ಶಿವಕುಮಾರ ಹಳ್ಳೂರ ಹಾಗೂ ಬಿ. ಆಯ್. ಗುಡಿಮನಿ ಪ್ರದಸ, ಎಸ್. ಎನ್.ಪಾಟೀಲ, ಜಿ. ಎಸ್. ಅವಳೆ , ಡಿ. ಎಮ್, ಖಲೀಫ್ , ಭೀಮ ಖಾನಪ್ಪನವರ , ಲಕ್ಷ್ಮೀ ಮಾದರ, ಸಂತೋಷಿ ಷೋಳ, ಸುವರ್ಣಾ ಗುಂಡೂರ ಹಾಗೂ ಎಮ್.ಕೆ.ಸಿ.ಆರ್. & ಎಮ್.ಎಸ್.ಎಸ್.ಆರ್. ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.