ಯಲ್ಲಮ್ಮನ ದರ್ಶನ ಪಡೆದ ಪುರಸಭೆ ಅಧ್ಯಕ್ಷೆ ಚಿನ್ನವ್ವ
ಉಗರಗೋಳ 28: ಸವದತ್ತಿ ಯಲ್ಲಮ್ಮ ಪುರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾದ ಚಿನ್ನವ್ವ ಹುಚ್ಚನ್ನವರ ಹಾಗೂ ಉಪಾಧ್ಯಕ್ಷೆ ದಾವಲಬಿ ಸನದಿ ಅವರು, ಶ್ರೀಕ್ಷೇತ್ರ ಯಲ್ಲಮ್ಮ ತಾಯಿ ದರ್ಶನಾಶೀರ್ವಾದ ಪಡೆದುಕೊಂಡರು.
ದೇವಸ್ಥಾನ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪಿ ಬಿ ಮಹೇಶ ಅವರು, ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಅವರನ್ನು ಶಾಲೂಹೊದಿಸಿ ಸತ್ಕರಿಸಿದರು.
ಮುಖಂಡರಾದ ಮಲ್ಲು ಜಕಾತಿ, ಬಿ ಎನ್ ಪ್ರಭುನವರ, ಬಸವರಾಜ ಗುರಣ್ಣವರ, ಆಕೀಫ್ ಯಡ್ರಾಂವಿ ಹಾಗೂ ಇತರರಿದ್ದರು.