ಇಂಡಿ ತಾಲೂಕಿನ ಎಲ್ಲೆಡೆ ಮೊಹರಂ ಹಬ್ಬ ಆಚರಣೆ
ಇಂಡಿ 17: ತಾಲ್ಲೂಕಿನ ಎಲ್ಲಡೆ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಅದರಂತೆ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ತಡವಲಗಾ ಗ್ರಾಮದಲ್ಲಿ ಈ ಹಬ್ಬದಲ್ಲಿ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಹತ್ತು ದಿನಗಳವರೆಗೆ ಮೊಹರಂ ಆಚರಣೆ ಮಾಡಲಾಗುತ್ತದೆ.ಮೊಹರಂ ಹಬ್ಬ ಬಂತು ಅಂದರೆ ಎಲ್ಲಿ ಸಂತೋಷ, ಸಂಭ್ರಮ ಮನೆ ಮಾಡಿರುತ್ತದೆ.ಅಮವಾಸ್ಯೆ ಆದ ಮೂರನೇ ದಿನದಿಂದ ಗ್ರಾಮದಲ್ಲಿ ಇರುವ ನಾಲ್ಕು ಮಸೀದಿ ಮುಂದೆ ಗುದ್ದಲಿ ಮೂಚ್ಚಿ ಪಂಜಿಗಳನ್ನು ಹಾಗೂ ಗೋಲುಗಳನ್ನು ಕೂಡಿ ಹತ್ತು ದಿನಗಳ ಕಾಲ ಹಿಂದೂ ಮುಸ್ಲಿಂರು ಕೂಡಿ ಪೂಜೆ ಸಲ್ಲಿಸುತ್ತಾರೆ, ಒಂಬತ್ತನೇ ದಿನದಂದು ಗ್ರಾಮದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾದಲಿ ಹಾಗೂ ಸಿಹಿ ಮಿಶ್ರಿತ ನೇಹುದ್ಯ್ ಮಾಡಿಕೊಂಡು, ಹೊಸ ಬಟ್ಟೆ ಧರಿಸಿಕೊಂಡು ಕುಟುಂಬಸ್ಥರೊಂದಿಗೆ ಎಲ್ಲಾ ಮಸೀದಿಗೆ ಬಂದು ನೇವಿದ್ಯವನ್ನು ಹಿಡಿದು ದೇವರಿಗೆ ಶಿರಬಾಗಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.ಮತ್ತೆ ಮರುದಿನ ಗ್ರಾಮದ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲರೂ ಕೂಡಿ ಆ ಡೋಲಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ -ವೈಭವದೊಂದಿಗೆ ಹಾಗೂ ಹೆಜ್ಜೆ ಮೆಳಗಳ ಕುಣಿದೊಂದಿಗೆ , ಕುಣಿದು ಕುಪ್ಪಳಿಸುತ್ತಾರೆ, ಹಾಗೂ ಹೆಣ್ಣು ಮಕ್ಕಳು ,ಮಹಿಳೆಯರು ಸೇರಿ ಲಿಂಬೆ ಹಣ್ಣು, ಬಾಳೆ ಹಣ್ಣು ಹಾಗೂ ಉತ್ತತ್ತಿಯನ್ನು ಎಸೆಯುತ್ತಾರೆ.
ನಂತರ ನಾಲ್ಕು ಡೋಲಿಗಳನ್ನು ಗ್ರಾಮದ ಹೊರವಲಯದಲ್ಲಿ ಇರುವ ಹಳ್ಳದ ದಡಕ್ಕೆ ಒಯ್ಯುತ್ತಾರೆ, ಅಲ್ಲಿ ವರ್ಷದ ಮಳೆ ಬೆಳೆ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆ ಹೇಳಿಕೆ ನಡೆಯುತ್ತವೆ, ಇದು ಆದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು ಹಾಗೂ ಈ ಮೊಹರಂ ಹಬ್ಬವನ್ನು ಹಿಂದೂಗಳೇ ಮುಂದಾಗಿ ಮಾಡುವುದು ಇನ್ನೊಂದು ವಿಶೇಷ,