ಬೈಲಹೊಂಗಲ

ಸಚಿವ ಎಚ್.ಕೆ.ಪಾಟೀಲರಿಗೆ ಆರಾದ್ರಿಮಠ ಸನ್ಮಾನ

ಸಚಿವ ಎಚ್.ಕೆ.ಪಾಟೀಲರಿಗೆ ಆರಾದ್ರಿಮಠ ಸನ್ಮಾನ

ಲೋಕದರ್ಶನ ವರದಿ

ಬೈಲಹೊಂಗಲ 17: ಈ  ಭಾಗದ ಶಕ್ತಿದೇವತೆ ನೆಲೆಸಿರುವ ಪುಣ್ಯಮಯ ಕ್ಷೇತ್ರವಾಗಿರುವ ಸವದತ್ತಿಯ ಯಲ್ಲಮ್ಮನ ದೇವಸ್ಥಾನವನ್ನು ಪ್ರಾಧಿಕಾರದ ಆಡಳಿತಕ್ಕೆ ಸೇರ್ಪಡೆ ಮಾಡಿರುವ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಅವರು ಶಾಸಕ ಮಹಾಂತೇಶ ಕೌಜಲಗಿ ಅವರ ನಿವಾಸದಲ್ಲಿ ಶನಿವಾರ ಸನ್ಮಾನಿಸಿದರು.

      ಸನ್ಮಾನ ಸ್ವೀಕರಿಸಿದ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ವರ್ಷದದ್ದೂಕ್ಕೂ ಉತ್ತರ ಕರ್ನಾಟಕ, ಮಹಾರಾಷ್ರ್ಟ, ಗೋವಾ ರಾಜ್ಯಗಳಿಂದ  ಲಕ್ಷಾಂತರ ಭಕ್ತರು ಆಗಮಿಸುವ ಯಲ್ಲಮ್ಮನ ಗುಡ್ಡದಲ್ಲಿ ಮೂಲಸೌಲಭ್ಯ ಮರೀಚಿಕೆಯಾಗಿದ್ದವು. ಭಕ್ತರ ಅನೂಕೂಲ, ಗುಡ್ಡವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸುವದಕ್ಕಾಗಿ ಈ ಕ್ಷೇತ್ರವನ್ನು ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಂಡು ಬರುವ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡುವುದು ಗುರಿಯಾಗಿದೆ ಎಂದರು.

 ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಮಾತನಾಡಿ, ಯಲ್ಲಮ್ಮನ ದೇವಸ್ಥಾನವನ್ನು ಪ್ರಾಧಿಕಾರದ ವ್ಯಾಪ್ತಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಚಿವ ಎಚ್.ಕೆ.ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸಿದರು.

  ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಮಹಾಂತೇಶ ಕೌಜಲಗಿ, ಈಶ್ವರ ಉಳ್ಳಾಗಡ್ಡಿ, ಶಿವಲಿಂಗ ಪರಂಡಿ, ಅರ್ಬಾಜ ಮುಲ್ಲಾ ಅನೇಕರು ಇದ್ದರು.

ಸುದ್ದಿ ಓದಿ