ಬೈಲಹೊಂಗಲ

ಜೈನ ಸಮಾಜ ಬಾಂಧವರ ಬೃಹತ್ ಪ್ರತಿಭಟನಾ ಮೆರವಣಿಗೆ

ಜೈನ ಸಮಾಜ ಬಾಂಧವರ ಬೃಹತ್ ಪ್ರತಿಭಟನಾ ಮೆರವಣಿಗೆ

ಬೈಲಹೊಂಗಲ: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಜೈನಮುನಿ ಆಚಾರ್ಯಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ಜೈನ ಸಮಾಜ ಬಾಂಧವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ಇಂಚಲ ಕ್ರಾಸ್ ರೈತ ಭವನದನಲ್ಲಿ ಸೇರಿದ ಸಮಾಜ ಬಾಂಧವರು ಬಸ್ ನಿಲ್ದಾಣ, ರಾಯಣ್ಣ ವೃತ್ತ ಮಾರ್ಗವಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿದರು. ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದರು. ಮುನಿಗಳ ನಿಧನಕ್ಕೆ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. 

ಮುನಿಶ್ರೀಗಳನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವುದು ಅತ್ಯಂತ  ಖಂಡನೀಯ, ಜಗತ್ತಿನಲ್ಲಿ ಬದುಕು ಮತ್ತು ಬದುಕಲು ಬಿಡು ಎಂಬ ಪವಿತ್ರವಾದ ಶಾಂತಿಪ್ರೀಯ ಅಹಿಂಸಾ ಜೈನ ತತ್ವದ ಸರ್ವಸ್ವವನ್ನು ಪರಿತ್ಯಾಗ ಮಾಡಿ, ಸಮಾನತೆಯ ಧರ್ಮಭೋಧನೆಯನ್ನು ಮಾಡುತ್ತಾ ಆಶ್ರಮಗಳನ್ನು ನಿರ್ಮಿಸಿ ಧಾರ್ಮಿಕ ತಳಹದಿಯ ಮೇಲೆ ಶಿಕ್ಷಣವನ್ನು ಎಲ್ಲ ವರ್ಗದ ಮಕ್ಕಳಿಗೆ ನೀಡುತ್ತಾ ತಮ್ಮ ಆತ್ಮಕಲ್ಯಾಣವನ್ನು ಮಾಡಿಕೊಳ್ಳುತ್ತಾ ಸಮಾಜ ಸುಧಾರಣೆಗಾಗಿ ಕಠೋರ ಆಚರಣೆಗಳ ಜೊತೆಗೆ  ಸಮಾಜದಲ್ಲಿ ಪೂಜ್ಯ ಸ್ಥಾನದಲ್ಲಿರುವ ಜೈನ ಮುನಿಗಳಿಗೆ ಪಾವನ ಚಾತುರ್ಮಾಸ ಆಚರಣೆಯ ಅವಧಿಯಲ್ಲಿ ಆಗಿರುವ ಈ ಅಹಿತಕರ ಘಟನೆಗೆ ಸರಕಾರ ಮತ್ತು ಸರಕಾರಿ ಅಧಿಕಾರಿಗಳು , ಕಾನೂನಾತ್ಮಕವಾಗಿ ಅತ್ಯಂತ ಸೂಕ್ತ ಶಿಕ್ಷೆಯನ್ನು ನೀಡಬೇಕು ಮತ್ತು ಮುಂದಿನ ದಿನಗಳಲ್ಲಿ ಜೈನ ಸಮಾಜದ ಸಾಧು ಸಂತರಿಗೆ, ಜೈನ ಧರ್ಮದ ಕ್ಷೇತ್ರಗಳು ಹಾಗೂ ಮಂದಿರಗಳಲ್ಲಿ ಇಂತಹ ಹಿಂಸಾತ್ಮಕ ಘಟನೆಗಳು ಮರುಕಳಿಸದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸಕಲ ಜೈನ ಸಮಾಜಕ್ಕೆ ಸೂಕ್ತ ನ್ಯಾಯ ಒದಗಿಸಿ, ಹತ್ಯೆ ಮಾಡಿದ ಹಂತಕರಿಗೆ ಯಾವುದೇ ರೀತಿಯ ಕರುಣೆ ತೋರದೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಿ ಸಕಲ ಜೈನ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಬೈಲಹೊಂಗಲ ತಾಲೂಕಿನ ಸಮಸ್ತ ಜೈನ ಸಮಾಜದ ಪರವಾಗಿ ಶ್ರೀ ಮಹಾವೀರ ಯುವಕ ಸಂಘ ಮತ್ತು ಶ್ರೀ ಮಹಾವೀರ ಜೈನ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಬೈಲಹೊಂಗಲ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಕೆಲವೇ ಘಂಟೆಗಳಲ್ಲಿ ಆರೋಪಿಗಳನ್ನು ಬಂದಿಸಿರುವ ಪೋಲಿಸ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.

ಜೈನ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ಅನುಪ್ಪ ಇಂಚಲ, ಉಪಾಧ್ಯಕ್ಷ ಡಾ.ಸುರೇಂದ್ರ ಕಲಘಟಗಿ, ಉದಯ ಬೆಳಗಾವಿ, ಧನರಾಜ ಭಂಡಾರಿ, ಶಾಲಾಚಂದ ಗೋಗಡ, ಬಸವರಾಜ ದೋತರದ, ಸಂತೋಷ ಭಾಂವಿ, ಅನಿಲ ಮ್ಯಾಕಲಮರ್ಡ್ , ಸುದರ್ಶನ ಉಪಾಧ್ಯೆ, ಜಿನಪ್ಪ ಮಲ್ಲಾಡಿ, ದೇವಾಲಾಪೂರ ಗ್ರಾಮದ ಶ್ರಾವಕ, ಶ್ರಾವಕಿಯರು, ಮ್ಯಾಕಲಮರ್ಡ್ , ಬುಡರಕಟ್ಟಿ, ಹಣಬರಟ್ಟಿ, ಇಂಚಲ, ಬಡ್ಲಿ, ಹಣ್ಣಿಕೇರಿ, ಅಮಟೂರ, ಪಟ್ಟಿಹಾಳ ಕೆ.ಬಿ., ಅಸುಂಡಿ, ಕಲಬಾಂವಿ, ತಿಗಡಿ, ಸಂಪಗಾಂವ, ಶ್ರೀಮಹಾವೀರ ಜೈನ ಅಲ್ಪ ಸಂಖ್ಯಾತರ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಸಮಾಜ ಬಾಂಧವರು ಇದ್ದರು.


ಸುದ್ದಿ ಓದಿ