ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ; ಸರ್ಕಾರಕ್ಕೆ ಮನವಿ
ಲಕ್ಷ್ಮೇಶ್ವರ 08 : ಪಟ್ಟಣದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಬರಗಾಲದ ಹಿನ್ನೆಲೆ ಬೆಳೆ ಪರಿಹಾರ ಬೆಳೆ ವಿಮೆ ಬಿಡುಗಡೆ, ಸಾಲಮನ್ನಾ ಮೇವು-ನೀರಿನ ವಿಳಂಬ, ಕೃಷಿ ಸಾಲದ ಹೊರೆ ಹಾಗೂ ಜಾನುವಾರುಗಳಿಗೆ ಮೇವು-ನೀರಿನ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು ಇಂಥಾ ಸಮಯದಲ್ಲಿ ಸರ್ಕಾರ , ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ.
ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದ ಶಿಗ್ಲಿ ಕ್ರಾಸ್ ನಿಂದ ತಹಶೀಲ್ದಾರ್ ಕಚೇರಿ ಅವರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು ಮೆರವಣಿಗೆಯಲ್ಲಿ ರೈತರು ಎತ್ತು ಚಕ್ಕಡಿಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿತಹಶೀಲ್ದಾರ್ ಧನಂಜಯ ಎಂ. ಮಾಲಗಿತ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಸಮಗ್ರ ರೈತ ಹೋರಾಟ ಸಂಘಟನೆಯ ಅಧ್ಯಕ್ಷ ಮಂಜುನಾಥ ಮಾಗಡಿ ನಾಗಣ್ಣ ಚಿಂಚಲಿ ಕೃಷಿಕ ಸಮಾಜ ನವದೆಹಲಿ ರಾಜ್ಯಾಧ್ಯಕ್ಷ ಮಾಣಿಕ್ಯ ಚಲ್ಲೂರಿ ಅವರ ಭೀಕರ ಬರಗಾಲದಿಂದ ಅನ್ನದಾತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ ಕೂಡಲೇ ರೈತರಿಗೆ ಸರ್ಕಾರ ಸ್ಪಂದಿಸಬೇಕು ಪ್ರಸಕ್ತ ಸಾಲಿನ ಬೆಳೆ ಪರಿಹಾರ ವಿತರಿಸಬೇಕು.
2025-26ನೇ ಸಾಲಿನ ಕೆಂಪು ಮೆಣಸಿನಕಾಯಿ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು. 2026-27ನೇ ಸಾಲಿನ ಮುಂಗಾರು ಬೆಳೆ ವಿಮೆ ಪಾವತಿಸಿದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು.ಬರದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಬೆಳೆ ಸಾಲ ವಸೂಲಾತಿ ಸ್ಥಗಿತಗೊಳಿಸಬೇಕು. ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ಜಾನುವಾರುಗಳಿಗೆ ಮೇವು ಖರೀದಿಸಿ ರೈತರಿಗೆ ವಿತರಿಸಬೇಕು ಕುಡಿಯುವ ನೀರು ಹಾಗೂ ಗೋಶಾಲೆ ವ್ಯವಸ್ಥೆ ಕಲ್ಪಿಸಬೇಕು. ಹಿಂಗಾರು ಬಿತ್ತನೆಗೆ ನೆರವು ನೀಡಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ರೈತರ ಪಂಪ್ಸೆಟ್ಗಳಿಗೆ ಮರುಸಂಪರ್ಕ ಕಲ್ಪಿಸಬೇಕು ಬೇಗನೆ ಕಲ್ಪಿಸಬೇಕು ಇಲ್ಲದಿದ್ದರೆ ಶಿಗ್ಲಿ ಕ್ರಾಸ್ ನಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚನ್ನಪ್ಪ ಷಣ್ಮುಖಿ ಟಾಕಪ್ಪ ಸಾತಪೂತಿಬಸವರಾಜ್ ಹಿರೇಮನಿ ಹೊನ್ನಪ್ಪ ವಡ್ಡರ ಬಸವರಾಜ ಜಾಲಗಾರ ಚಂದ್ರು ಮಾಗಡಿ ಪವನ ಬಂಕಾಪುರ ಶಿವು ತಾರಿಕೊಪ್ಪ ಶಿವಾನಂದ ಬನ್ನಿಮಟ್ಟಿ ಶಿವಾನಂದ ಯರ್ಲಗಟ್ಟಿ ಸೇರಿದಂತೆ ಇನ್ನೂ ಅನೇಕ ರೈತ ಮುಖಂಡರು ಹಲವಾರು ಗ್ರಾಮಗಳಿಂದ ಆಗಮಿಸಿದ್ದ ರೈತರು ಇದ್ದರು.