ಅನ್ನದಾನೀಶ್ವರ ಶ್ರೀಗಳಿಗೆ ಸನ್ಮಾನ
ಮುಂಡರಗಿ 08: ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾ ಸ್ವಾಮೀಜಿಗಳಿಗೆ ಕರ್ನಾಟಕ ಸರ್ಕಾರವು 2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದಕ್ಕಾಗಿ, ಚಿಕ್ಕಹಂದಿಗೋಳ ಶಾಖಾ ಮಠದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಖಾಮಠದ ಸೇವಕರಾದ ಶ್ರೀ ಅಂದಾನಸ್ವಾಮಿ ವಿರಕ್ತಮಠ, ಶ್ರೀ ಬಸಲಿಂಗನಗೌಡ ಗೌಡರ, ಶ್ರೀ ಶರಣಯ್ಯ ವಿರಕ್ತಮಠ ಹಾಗೂ ಶ್ರೀ ಶಂಕರಯ್ಯ ವಿರಕ್ತಮಠ ಇವರು ಉಪಸ್ತಿತರಿದ್ದರು.