ಗದಗ

ಸಿ.ಸಿ. ರಸ್ತೆ ಕಾಮಗಾರಿಗೆ ಲಲಿತಾ ಅಸೂಟಿ ಅವರಿಂದ ಚಾಲನೆ

ಸಿ.ಸಿ. ರಸ್ತೆ ಕಾಮಗಾರಿಗೆ ಲಲಿತಾ ಅಸೂಟಿ ಅವರಿಂದ ಚಾಲನೆ

ಲೋಕದರ್ಶನ ವರದಿ 


        ಗದಗ 7: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 27ನೇ ವಾರ್ಡಿನ ವ್ಯಾಪ್ತಿಯಲ್ಲಿನ ಪ್ರತಿಷ್ಠಿತ ಬಡಾವಣೆಯಾದ ಕೆ ಎಚ್,  ಪಾಟೀಲ್ ಹಾಗೂ ವೀರನಾರಾಯಣ ಬಡಾವಣೆಯಲ್ಲಿ ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ಜನಸ್ನೇಹಿ, ಜನಾಭಿವೃದ್ಧಿಯ ಸದಸ್ಯಣಿಯರಾದ ಲಲಿತಾ ಬಿ, ಅಸೂಟಿಯವರು ಜನೋಪಯೋಗಿ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. 

            ಅಭಿವೃದ್ಧಿ ಕಾಮಗಾರಿಯ ಚಾಲನೆಯ ಸುಸಂಧರ್ಭದಲ್ಲಿ ಬಡಾವಣೆಯ ಪ್ರಜ್ಞಾವಂತ ನಾಗರಿಕರು ನಗರಸಭಾ ಸದಸ್ಯಣಿಯರಾದ ಲಲಿತಾ ಅಸೂಟಿಯವರು  ನಮ್ಮ ಬಡಾವಣೆಯ ಬಡಜನಸಾಮಾನ್ಯರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅಷ್ಟೇ ಅಲ್ಲದೇ ಸಾಕಷ್ಟು ಜನಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಸ್ಪಂಧನೆಯನ್ನು ಮೆರೆದಿರುವರು ಆ ಪ್ರಯುಕ್ತ ಸಮಸ್ತ ಕೆ, ಎಚ್,  ಪಾಟೀಲ್ ಹಾಗೂ ವೀರನಾರಾಯಣ ಬಡಾವಣೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. 

             ಈ ಒಂದು ಅವಿಸ್ಮರಣೀಯ ಸುಸಂಧರ್ಭದಲ್ಲಿ ಕೆ, ಎಚ್,ಪಾಟೀಲ್ ಬಡಾವಣೆಯ ಅಧ್ಯಕ್ಷರಾದ ಮಾಲಿಂಗಪ್ಪ ಬರಬರಿ, ಉಪಾಧ್ಯಕ್ಷರಾದ ಕಲ್ಮೇಶ್ವರ ಆಲದಕಟ್ಟಿ,  ಬಡಾವಣೆಯ ಹಿರಿಯರಾದ ಸಿದ್ದರಾಮಯ್ಯ ಕಟಿಗಿಹಳ್ಳಿಮಠ, ಮಂಜುನಾಥ ದೊಡ್ಡಮನಿ, ಹನುಮಂತ ಪವಾರ,  ಶಿವಪ್ಪ ಲಗಳಿ, ಬಸವರಾಜ ಪಾಟೀಲ್,  ವಿರುಪಾಕ್ಷಪ್ಪ ಪೊಲೀಸ್ ಪಾಟೀಲ್,  ದೇವೂ ಭೀಮಸಿ, ಮೊಕಾಶಿ, ಗಂಗಾಧರ ಬಣಕಲ್, ಈಶಪ್ಪ ಅಂಗಡಿ,  ಸುನಿಲ್ ಚಿನ್ನಾಪುರ, ಬಸವರಾಜ ಚಿನ್ನಾಪೂರ, ಭೀಮಣ್ಣ ಮುಧೋಳ,  ಮಂಜುನಾಥ ಕ್ಯಾಡದ,  ಹಳ್ಳಿಕೇರಿ ಬಸಮ್ಮ ಬೊಮ್ಮನವರ,  ಮಲ್ಲನಗೌಡ ಪಾಟೀಲ್, ಹಾಗೂ ಸಮಸ್ತ ಬಡಾವಣೆಯ ಹಿರಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ