ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲೋತ್ಸವ ವೇದಿಕೆ
ಲಕ್ಷ್ಮೇಶ್ವರ" 07 ; ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ ಪ್ರೇರೇಪಿಸುವ ಹಾಗೂ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಗಳನ್ನು ನಿರ್ಮಿಸಿಕೊಡುವ ಕಾರ್ಯ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಿಂದ ಸಾಧ್ಯವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಶೀಮಿಕೇರಿ ಅವರು ಲಕ್ಷ್ಮೇಶ್ವರದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಲಕ್ಷ್ಮೇಶ್ವರ ದಕ್ಷಿಣ ಮತ್ತು ಉರ್ದು ಕ್ಲಸ್ಟರ್ ಮಟ್ಟದ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ ದೇಸಿ ಹಾಗೂ ಪಾರಂಪರಿಕ ಕಲೆ, ಸಂಗೀತ-ನೃತ್ಯ ಹಾಗೂ ಇತರ ಸಾಂಸ್ಕೃತಿಕ ಕಲೆಗಳು ಅವನತಿಗೊಳ್ಳಬಹುದಾದ ಸಂಧಿಕಾಲದಲ್ಲಿ ಪ್ರತಿಭಾವಂತ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಶಿಕ್ಷಣ ಇಲಾಖೆಯು ಇಂತಹ ವೇದಿಕೆಗಳನ್ನು ರೂಪಿಸಿದೆ ಎಂದರು.ಬಿ ಆರ್ ಪಿ, ಬಿ ಎಮ್ ಯರಗುಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್ ಕೆ ಹವಾಲ್ದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಕ್ಷ್ಮೇಶ್ವರ ಘಟಕದ ಶಿಕ್ಷಣಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಸಿ ಪಟ್ಟೇದ, ಬಿ ಆರ್ ಪಿ ಬಿ ಎಮ್ ಯರಗುಪ್ಪಿ, ಸಿ ಆರ್ ಲಕ್ಕುಂಡಿಮಠ, ಐ ಎಸ್ ಮಡಿವಾಳರ, ಎಸ್ ಕೆ ಕಣಕೆ, ಎಮ್ ಡಿ ಹುಲಗೇರಿ, ಎಚ್ ಎಮ್ ಗುತ್ತಲ ಎ ಎಮ್ ಅಕ್ಕಿ,ಪ್ರಧಾನ ಗುರುಗಳಾದ ಬಸವರಾಜ ಎಮ್ ಕುಂಬಾರ, ಶಾಹೀದ್ ಲೋಹಾರ್, ಅಂಬಿಕಾ ಎ ಎಸ್ ,ಪ್ರಭುಗೌಡ ಯಕ್ಕಿಕೊಪ್ಪ, ಸತೀಶ್ ಬೊಮಲೆ, ಎನ್ ಎಸ್ ಬಂಕಾಪುರ,ಎಚ್ ಡಿ ನಿಂಗರಡ್ಡಿ, ಎನ್ ಎನ್ ಶಿಗ್ಲಿ, ಪಿ ವಿ ಹಿರೇಮಠ, ಬಿ ಎ ಢಾಲಾಯತ, ಆರ್ ಎ ಮೋಮಿನ, ಎಸ್ ಎಲ್ ಲಕ್ಕುಂಡಿ, ಚನ್ನಬಸಪ್ಪ ಬಿ, ಚೇತನ ಜಡಿಯವರ ಹಾಗೂ ಅವಳಿ ಕ್ಲಸ್ಟರಿನ ಮುದ್ದು ಮಕ್ಕಳು ಹಾಜರಿದ್ದರು. ಸಿ ಆರ್ ಪಿ, ಎನ್ ಎ ಮುಲ್ಲಾ ಸ್ವಾಗತಿಸಿದರು, ಎ ಐ ಮಿಯಾನವರ ನಿರೂಪಿಸಿದರು, ಸಿ ಆರ್ ಪಿ ಶ್ರೀನಿವಾಸ ಮತ್ತೂರ ವಂದಿಸಿದರು