ಗದಗ

ಹಿರೇಹಂದಿಗೋಳ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಕುಷ್ಠರೋಗದ ಬಗ್ಗೆ ಜಾಗೃತಿ

ಹಿರೇಹಂದಿಗೋಳ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಕುಷ್ಠರೋಗದ ಬಗ್ಗೆ ಜಾಗೃತಿ


            ಗದಗ 07 : ಕುಷ್ಠ ರೋಗಿಗಳು ಶಾಪಗ್ರಸ್ತರಲ್ಲ ಮತ್ತು ಕಳಂಕಿತರಲ್ಲ ಕುಷ್ಠ ರೋಗಿಗಳನ್ನ ಸಮಾಜದಲ್ಲಿ ಯಾವುದೇ ತಾರತಮ್ಯ ಮಾಡದೆ ಗೌರಯುತವಾಗಿ ಕಾಣಬೇಕೆಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.   ಗದಗ ತಾಲೂಕಿನ ಹಿರೇಹಂದಿಗೋಳಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಐ ಇ ಸಿ ವಿಭಾಗ ಹಾಗೂ ಆಯುಷ್ಮಾನ್ ಆರೋಗ್ಯ ಕೇಂದ್ರ ಹುಲಕೋಟಿ ಇವರ ವತಿಯಿಂದ ಆಯೋಜಿಸಿದ್ದ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

           ಕುಷ್ಠ ರೋಗವು ಮುಖ್ಯವಾಗಿ ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುನಿಂದ ಬರುತ್ತದೆ ಇದು ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆಯಾಗಿದೆ ವ್ಯಕ್ತಿಯ ದೇಹದ ಮೇಲೆ ತುರಿಕೆ ಇಲ್ಲದ ತಿಳಿ,ಬಿಳಿ ತಾಮ್ರ ವರ್ಣದ ಸ್ಪರ್ಶ್‌ ಜ್ಞಾನವಿಲ್ಲದ ಮಚ್ಚೆ,ದಪ್ಪವಾದ ಅಥವಾ ಹೊಳೆಯುವ ಎಣ್ಣೆಯುಕ್ತ ಚರ್ಮ,ಕಿವಿಯಾಲೆಗಳಲ್ಲಿ ಗಂಟು,ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥತೆ, ಕೈಕಾಲುಗಳಲ್ಲಿ ವಾಸಿಯಾಗದ ಹುಣ್ಣು, ನಡೆಯುವಾಗ ಕಾಲು ಎಳೆಯುವದು,ಕಾಲುಗಳಲ್ಲಿ ಜುಮ್ಮೆನುಸುವಿಕೆ, ಕೈಗಳಲ್ಲಿ ವಸ್ತುಗಳನ್ನು ಹಿಡಿಯಲು ಅಥವಾ ಕಾಲಲ್ಲಿ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಇವುಗಳು ಕುಷ್ಟರೋಗದ ಮುಖ್ಯ ಲಕ್ಷಣಗಳಾಗಿವೆ.

           ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಕುಷ್ಠರೋಗ ಇದ್ದಲ್ಲಿ ಉಚಿತವಾಗಿ ಬಹು ಓಷಧಿ ಚಿಕಿತ್ಸೆ ಪಡೆದುಕೊಂಡು ಕುಷ್ಟರೋಗವನ್ನು ತೊಲಗಿಸಬೇಕೆಂದು ಹಾಗೂ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ರೋಗ ಲಕ್ಷಣಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಕುಷ್ಠ ರೋಗದಿಂದ ಉಂಟಾಗುವ ಅಂಗವಿಕಲತೆ ಬಗ್ಗೆ ನೆರೆಹೊರೆಯ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಪ್ರೇರೇಪಿಸುವುದು ಈ ಜಾಗೃತಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

              ನಂತರ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್ ಬಿ ದೇವರವರ ಮಾತನಾಡಿ ನಾವೆಲ್ಲರೂ ಸೇರಿ ಒಟ್ಟಾಗಿ ಭಾರತವನ್ನು ಕುಷ್ಠರೋಗ ಮುಕ್ತವಾಗಿಸೋಣ, ಗಾಂಧೀಜಿಯವರ ಕನಸನ್ನು ನನಸಾಗಿಸೋಣ ಎಂದರು. ಇದೇ ಸಂದರ್ಭದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿಯರಾದ ಎಸ್ ಎ ತಡೋಲ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್ ಬಿ ದೇವರವರ,ಸಹ ಶಿಕ್ಷಕರಾದ ವ್ಹಿ ಹೆಚ್ ಗುಡ್ಲಾನೂರ, ವ್ಹಿ ಎಲ್ ಪೂಜಾರ, ಎಸ್ ಎಸ್ ಪಾಟೀಲ, ಆರ್ ಡಿ ಜೋಶಿ, ಕೆ ವ್ಹಿ ಚೂರಿ,ಶ್ರೀಮತಿ ಯು.ವಿ ಮಟ್ಟಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ