ಗದಗ

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ 76ನೇ ಸಂಸ್ಥಾಪನಾ ದಿನ ಮತ್ತು ಧ್ವಜ ದಿನ ಆಚರಣೆ

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ 76ನೇ ಸಂಸ್ಥಾಪನಾ ದಿನ ಮತ್ತು ಧ್ವಜ ದಿನ ಆಚರಣೆ



            ಹುಲಕೋಟಿ 7: ಇಲ್ಲಿನ  ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕದ ವತಿಯಿಂದ ಶನಿವಾರ ಕಾಲೇಜು ಆವರಣದಲ್ಲಿ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್ನ 76ನೇ ಸಂಸ್ಥಾಪನಾ ದಿನ ಮತ್ತು ಧ್ವಜ ದಿನೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಪ್ಪಣ್ಣ ಎನ್‌. ಹಂಜೆ ವಹಿಸಿದ್ದರು. ಸಹ ಸಂಚಾಲಕರಾದ ಡಾ. ಮಂಜುನಾಥ ತ್ಯಾಲಗಡಿ, ರೋವರ್ಸ್‌ ಸಂಚಾಲಕರಾದ ಬುಳ್ಳಪ್ಪ ಹಾಗೂ ರೇಂಜರ್ಸ್‌ ಸಂಚಾಲಕಿ ಕು. ಸಾವಿತ್ರಿ ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲಕ್ಷ್ಮಣ ಮುಳಗುಂದ ಮತ್ತು ಇತರ ಉಪನ್ಯಾಸಕರೂ ಪಾಲ್ಗೊಂಡಿದ್ದರು.

        ವಿದ್ಯಾರ್ಥಿನಿ ಕು. ದಾನೇಶ್ವರಿ ಪ್ರಾರ್ಥನಾ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋವರ್ಸ್‌ ಮೇಟ್ ಪ್ರವೀಣ ಬಾಬಣ್ಣನವರ ಎಲ್ಲರನ್ನೂ ಸ್ವಾಗತಿಸಿದರು. ಬುಳ್ಳಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್ನ ಇತಿಹಾಸ ಹಾಗೂ ಸಂಸ್ಥಾಪನಾ ದಿನದ ಮಹತ್ವವನ್ನು ವಿವರಿಸಿದರು. ರೇಂಜರ್ಸ್‌ ಸಂಚಾಲಕಿ ಕು. ಸಾವಿತ್ರಿ ಟಿ. ಅವರು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಾದ ಮಹೇಬೂಬ್, ರೇಂಜರ್ಸ್‌ ಮೇಟ್ ಲಕ್ಷ್ಮೀ ಜಕರಡ್ಡಿ ಹಾಗೂ ದಾನೇಶ್ವರಿ ಅವರು ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಟುವಟಿಕೆಗಳಲ್ಲಿ ಭಾಗವಹಿಸಿ ತಾವು ಪಡೆದ ಅನುಭವಗಳನ್ನು ಅನಿಸಿಕೆಗಳ ರೂಪದಲ್ಲಿ ಹಂಚಿಕೊಂಡರು.

           ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲರಾದ ಡಾ. ಅಪ್ಪಣ್ಣ ಎನ್‌. ಹಂಜೆ ಅವರು, ವಿದ್ಯಾರ್ಥಿಗಳು ಶಿಸ್ತು ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ಜವಾಬ್ದಾರಿಯ ಭಾವನೆಯನ್ನು ಮೂಡಿಸುತ್ತವೆ ಎಂದರು.ಕಾರ್ಯಕ್ರಮವನ್ನು ವಿಶಾಲ ರಮೇಶ ರಾಹುತ್ ನಿರೂಪಿಸಿದರು. ಸೀನಿಯರ್ ರೋವರ್ಸ್‌ ಮೇಟ್ ಶಿವಾನಂದ ಭದ್ರಣ್ಣನವರ್ ವಂದನಾರೆ​‍್ಣ ಮಾಡಿದರು. ರೋವರ್ಸ್‌ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಉತ್ಸಾಹದಿಂದ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿತು. 


ಸುದ್ದಿ ಓದಿ