ಇಂಡಿ

ಮನಗೂಳಿ ಗೆಲುವು ಶತಸಿದ್ಧ: ಶಾಸಕ ಯಶವಂತ್ರಾಯಗೌಡ

ಮನಗೂಳಿ ಗೆಲುವು ಶತಸಿದ್ಧ: ಶಾಸಕ ಯಶವಂತ್ರಾಯಗೌಡ

ಇಂಡಿ19:  ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ದಿ. ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರ ಗೆಲುವು ಶತಸಿಧ್ಧವಾಗಿದೆ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು. 

ಅವರು ಮಂಗಳವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. 

ಈಗಾಗಲೆ ಸಿಂದಗಿ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಸಂಚರಿಸಿದ್ದೇನೆ. ನಮ್ಮ ಅಭ್ಯರ್ಥಿ ಪರ ಸಾಕಷ್ಟು ಅನುಕಂಪ ಮತ್ತು ಅಭಿಮಾನವಿದೆ. ಸಿಂದಗಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯ ಗೆಲುವು ಹತ್ತಾರು ಸಾವಿರ ಮತಗಳ ಅಂತರದಲ್ಲಿ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕಾಂಗ್ರೇಸ್ ಪಕ್ಷ ತನ್ನದೇಯಾದ ಇತಿಹಾಸ ಹೊಂದಿದೆ. ಬಡವರ-ದೀನದಲಿತರ, ಹಿಂದುಳಿದವರ ಪರವಾಗಿ ಕಾಂಗ್ರೇಸ್ ಪಕ್ಷ ಯಾವಾಗಲೂ ಇದೆ. ಅಲ್ಪಸಂಖ್ಯಾತರು ನಮ್ಮ ಪಕ್ಷವನ್ನು ಎಂದೂ ಕೈ ಬಿಡುವುದಿಲ್ಲ. ಕೆಲವರು ಕಾಂಗ್ರೇಸ್ ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಆದರೆ ಅವರ ತಂತ್ರ ತಿರುಳು-ಮರುಳಾಗಲಿದೆ ಎಂದರು. 

ಕಾಂಗ್ರೇಸ್ ಪಕ್ಷ ಬಸವ ತತ್ವ ಅನುಸರಿಸಿಕೊಂಡು ಬರುತ್ತಿದೆ. ದೀನ-ದಲಿತ, ಹಿಂದುಳಿದವರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕಾರ್ಯ ಮಾಡುತ್ತಿದೆ. ಇಂಡಿ ಕ್ಷೇತ್ರದ ರಾಜಕೀಯದಲ್ಲಿ ಬಸವ ತತ್ವ ಅನುಸರಿಸುವುದನ್ನು ನೋಡಿ. ಹೀಗೆ ರಾಜ್ಯಾದ್ಯಂತ ಎಲ್ಲ ಕ್ಷೇತ್ರದಲ್ಲೂ ಕಾಂಗ್ರೇಸ್ ಬಡವರ ಪರವಾಗಿ ನಿಂತಿದೆ ಎಂದರು. 

ಕ್ಷೇತ್ರದಲ್ಲಿ ಜನ ಜಾತಿ-ಜನಾಂಗವನ್ನು ಹೊರಗಿಟ್ಟು ಅಭಿವೃಧ್ದಿಗಾಗಿ ಅಶೋಕ ಮನಗೂಳಿ ಅವರನ್ನು ಬೆಂಬಲಿಸಿ, ತಂದೆ ಕಳೆದುಕೊಂಡ ಮಗನನ್ನು ಸಿಂದಗಿ ಕ್ಷೇತ್ರದ ಜನರ ಉಡಿಗೆ ಹಾಕಿದ್ದೇವೆ. ನೀವೆಲ್ಲ ಅವನನ್ನು ನಿಮ್ಮ ಮಗನಂತೆ ಆಶೀರ್ವದಿಸಿ ಎಂದರು. 

ಅವಿನಾಶ ಬಗಲಿ, ಅಣ್ಣಪ್ಪ ಬಿದರಕೋಟಿ, ಜೀತಪ್ಪ ಕಲ್ಯಾಣಿ  ಸೇರಿದಂತೆ ಮತ್ತಿತರರು ಇದ್ದರು. 

ಸುದ್ದಿ ಓದಿ