ಯರಗಟ್ಟಿ

ಮನೆಯೊಂದರಲ್ಲಿ ವ್ಯಕ್ತಿಯ ಆಸ್ತಿ ಪಂಜರ ಪತ್ತೆ

ಮನೆಯೊಂದರಲ್ಲಿ ವ್ಯಕ್ತಿಯ ಆಸ್ತಿ ಪಂಜರ ಪತ್ತೆ

ಯರಗಟ್ಟಿ 02: ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಶಿವಾಪೂರ ಗ್ರಾಮದ ಮನೆಯೊಂದರಲ್ಲಿ ವ್ಯಕ್ತಿಯ ಆಸ್ತಿ ಪಂಜರ ಪತ್ತೆಯಾಗಿದೆ. ಮನೆಯಲ್ಲಿ ಪತ್ತೆಯಾಗಿರುವ ಶವ 8/9 ತಿಂಗಳ ಹಿಂದೆ ಸಾವಾಗಿದೆ ಎಂದು ಅಂದಾಜಿಸಲಾಗಿದೆ ಮತ್ತು 8/9 ತಿಂಗಳು ಕಳೆದರೂ ಯಾರು ನೋಡದ ಪರಿಣಾಮ ಆಸ್ತಿ ಪಂಜರದ ರೀತಿಯಲ್ಲಿ ಕಾಣುತ್ತಿದೆ. ಈ ಶವ ಸ್ಥಳೀಯ ನಿವಾಸಿ ಪ್ರಕಾಶ ತವನಪ್ಪ ಮುರಗುಂಡಿ ಎಂಬಾತನದ್ದಾಗಿದೆ. ಅಲ್ಲದೆ ಈತ ಬುದ್ಧಿಮಾಂದ್ಯನಾಗಿದ್ದು ಮನೆಯಲ್ಲಿ ತಾನೊಬ್ಬನೆ ಇರುತ್ತಿದ್ದ ಎನ್ನುವುದು ಸ್ಥಳೀಯ ಮಾಹಿತಿಯಿಂದ ತಿಳಿದು ಬಂದಿದೆ. ಸ್ಥಳಕ್ಕೆ ಮುರಗೋಡ ಠಾಣೆಯ ಸಿಪಿಐ ಮೌನೇಶ್ವರ ಮಾಲಿಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. 


ಸುದ್ದಿ ಓದಿ