ಇಂಡಿ

ಮಾನವೀಯತೆ ಮರೆದ ಶಿಕ್ಷಕಿ ಮಲ್ಲಮ್ಮ ಗಿರಣಿವಡ್ಡರ

ಮಾನವೀಯತೆ ಮರೆದ ಶಿಕ್ಷಕಿ ಮಲ್ಲಮ್ಮ ಗಿರಣಿವಡ್ಡರ


ಇಂಡಿ25: ಹಿರೇ ರೂಗಿ- ಹಿರೇಮಸಳಿ ರಸ್ತೆಯ ಮೇಲೆ ದ್ವಿಚಕ್ರ ವಾಹನ ಮೇಲೆ ಹೊರಟ ಪಾದಚಾರಿಯೊಬ್ಬರು ಆಕಸ್ಮಿಕ ದ್ವಿಚಕ್ರ ವಾಹನ ಜಾರಿ ಅಪಘಾತವಾಯಿತು. 

ಅನೇಕ ಜನ ನೋಡುತ್ತ ಹೋಗುತ್ತಿದ್ದರು. ಹೊರತಾಗಿ ಯಾರೂ ಸಹಕಾರ ನೀಡಲಿಲ್ಲ. ಆಗ ಮಲ್ಲಮ್ಮ ಗಿರಣಿವಡ್ಡರ ಎಂಬ ಶಿಕ್ಷಕಿ ಶಾಲೆ ಮುಗಿಸಿ ಸ್ಕೂಟಿಯ ಮೇಲೆ ಇಂಡಿಯ ಕಡೆಗೆ ಹೊರಟಿದ್ದರು. ಅವರು ನೋಡಿ ಸಹಾಯ ಮಾಡಲು ಮುಂದಾದರು. ಮುಖ ರಕ್ತದಿಂದ ಸೋರುತ್ತಿತ್ತು. ತುಟಿ ಒಡೆದು ಮೈ ಮೇಲೆ ಅಲ್ಲಲ್ಲಿ ಸಾಕಷ್ಟು ಕಡೆ ಗಾಯವಾಗಿದ್ದವು. ಶಿಕ್ಷಕಿ ಅವರಿಗೆ ನೀರು ಕುಡಿಸಿ ಎದ್ದು ಕೂರಿಸಲು ಸಹಕರಿಸಿದರು. 

ಅಷ್ಟರಲ್ಲಿ ಹಿರೇಮಸಳಿ ಸರಕಾರಿ ಶಾಲೆಯ ಮುಖ್ಯ ಗುರುಗಳು ಅಂಬಣ್ಣ ಸುಣಗಾರ ದ್ವಿಚಕ್ರ ವಾಹನ ಮೇಲೆ ಹೊರಟಿದ್ದರು. ಅವರು ನೋಡಿ ಮಾನವೀಯ ದೃಷ್ಠಿಯಿಂದ ತಮ್ಮ ದ್ವಿಚಕ್ರ ವಾಹನದ ಮೇಲೆ ಹಿರೇರೂಗಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಾವೇ ಸ್ವತಃ ಹಣ ಖರ್ಚು ಮಾಡಿ ಪ್ರಥಮ ಉಪಚಾರ ಮಾಡಿಸಿ ಹೆಚ್ಚಿನ ಚಿಕಿತ್ಸೆಗೆ ಇಂಡಿಗೆ ಕರೆದುಕೊಂಡು ಹೋಗಿ ಅಲ್ಲಿ ಎಕ್ಸರೆ ತೆಗೆಸಿ ನಂತರ ಹಿರೇಮಸಳಿಗೆ ಅವರ ಮನೆಗೆ ಹೋಗಿ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ. ಸ್ವಾರ್ಥ ಮುಖಿಯಾಗದೆ ಸಮಾಜಮುಖಿಯಾಗಿ ನಡೆದುಕೊಂಡಿದ್ದಾರೆ. 

ಶಿಕ್ಷಕಿ ಮತ್ತು ಅಂಬಣ್ಣ ಸುಣಗಾರರವರ ಕಾರ್ಯ ಮೆಚ್ಚಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯ ಆಧಿಕಾರಿಗಳು ಮಲ್ಲಮ್ಮ ಗಿರಣಿವಡ್ಡರ ಮತ್ತು ಅಂಬಣ್ಣ ಸುಣಗಾರರ ಕಾರ್ಯ ಪ್ರಶಂಸಿದ್ದಾರೆ. 


ಸುದ್ದಿ ಓದಿ