ಧಾರವಾಡ - ಹುಬ್ಬಳ್ಳಿ

ವಿಧ್ಯಾಭ್ಯಾಸದ ಕಡೆ ಶ್ರಮ ವಹಿಸಿ ನಿಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರುವಂತೆ ಮಾಡಿ: ಶಶಿಕುಮಾರ

ವಿಧ್ಯಾಭ್ಯಾಸದ ಕಡೆ ಶ್ರಮ ವಹಿಸಿ ನಿಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರುವಂತೆ ಮಾಡಿ: ಶಶಿಕುಮಾರ

ಹುಬ್ಬಳ್ಳಿ,25:  ಕಷ್ಟಪಟ್ಟು ಓದಿ ಶಿಕ್ಷಣ, ವಿಧ್ಯಾಭ್ಯಾಸದ ಕಡೆ ಶ್ರಮ ವಹಿಸಿ ನಿಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರುವಂತೆ ಮಾಡಿ. ನಿಮಗೆ ಅಗತ್ಯವಿರುವ ಮಾರ್ಗದರ್ಶನ ನಾನು ಮಾಡುತ್ತೇನೆ ಎಂದು ಹುಬ್ಬಳ್ಳಿ ಧಾರವಾಡ ಪೋಲೀಸ ಆಯುಕ್ತ ಶಶಿಕುಮಾರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಸಪ್ತಾಪುರದಲ್ಲಿ ಜನ ಸಂಪರ್ಕದ ಅಂಗವಾಗಿ ಪಾದಯಾತ್ರೆಯ ಕೈಗೊಂಡಾಗ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತನಾಡಿದರು.  

ಪಾದಯಾತ್ರೆ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಲಿಂಗಾಯತ ಭವನಕ್ಕೆ ಆಕಸ್ಮಿಕ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿ, ಈ ಭವನ ಸಮಾಜದ ಜನರಿಗೆ ಅನುಕೂಲವಾಗಲಿ ಅಲ್ಲದೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದು ಅವರಿಗಾಗಿ ಈ ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗವಾಗುವಂತ ಕಾರ್ಯಕ್ರಮಗಳನ್ನು ಹಾಕಿಕೊಂಡರೆ ನಾನು ಭಾಗವಹಿಸಿ ಮಾರ್ಗದರ್ಶನ ಮಾಡಲು ಪ್ರಯತ್ನಿಸುತ್ತೇನೆ ಎಂದರು. 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಕೋಶಾಧ್ಯಕ್ಷ ಬಸವರಾಜ ಗೋಲಪ್ಪನವರ, ಪರಿಸರವಾದಿ ಹಾಗೂ ನಿರ್ದೇಶಕ ಶಂಕರ ಕುಂಬಿ ಶಾಲು ಹೊದಿಸಿ ಶಶಿಕುಮಾರ ಅವರನ್ನು ಸನ್ಮಾನಿಸಿ, ಗೌರವಿಸಿದರು.   

ಉಪ ಪೋಲೀಸ ಆಯುಕ್ತರಾದ ಮಹಾನಂದ ನಂದಗಾಂವ, ಸಹಾಯಕ ಪೋಲೀಸ ಆಯುಕ್ತರಾದ ಪ್ರಶಾಂತ ಸಿದ್ದನಗೌಡರ, ಉಪನಗರ ಪೊಲೀಸ ಇನ್ಸ್‌ಫೆಕ್ಟರ್ ದಯಾನಂದ ಶೇಗೂಣಸಿ, ಕಚೇರಿ ಸಿಬ್ಬಂದಿ ಶ್ರೀಶೈಲನಾಥ ಹಾಗೂ ಉದ್ಯಮಿ ಮುತ್ತು ಮರಳಪ್ಪನವರ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ