ಇಂಡಿ

ಇಂಡಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಇಂಡಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಇಂಡಿ 17: ತಾಲೂಕಿನ ಮಿನಿ ವಿಧಾನಸೌಧ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಇಂಡಿ ತಾಲೂಕು ದಂಡಾಧಿಕಾರಿ ಎಸ್ ಬಿ ಕಡಕಬಾವಿ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 

ನಂತರ ಮಾತನಾಡಿದ ತಹಶೀಲ್ದಾರ ಎಸ್ ಬಿ ಕಡಕಬಾವಿ ಅವರು ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾಗಿರುವ ಮಹಾಕಾವ್ಯ ರಾಮಾಯಣದ ಕರ್ತೃ, ರಸಕವಿ ಋಷಿಕವಿ ಮಹರ್ಷಿ ವಾಲ್ಮೀಕಿಯ ಜಯಂತಿಯನ್ನು ಈ ಬಾರಿಯು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಅಶ್ವಿನ ಮಾಸದ ಹುಣ್ಣಿಮೆಯಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ವಾಲ್ಮೀಕಿಯಾಗುವ ಮೊದಲು ಈತ ಬೇಡನಾಗಿದ್ದ. ಕಾಡಿಗೆ ಬರುವ ಜನರನ್ನು ಲೂಟಿ ಮಾಡುವ ಮೂಲಕ ತನ್ನನ್ನು ಮತ್ತು ತನ್ನ ಕುಟುಂಬವನ್ನು ಪೋಷಿಸುತ್ತಿದ್ದನು. ನಂತರ ಮಹರ್ಷಿ ವಾಲ್ಮೀಕಿ ಬ್ರಹ್ಮನನ್ನು ಮೆಚ್ಚಿಸಲು ಮತ್ತು ತನ್ನ ಪಾಪಗಳ ಕ್ಷಮೆಯನ್ನು ಕೇಳಲು ಕಠಿಣ ತಪಸ್ಸು ಮಾಡಿದರು. ವಾಲ್ಮೀಕಿ ತನ್ನಲ್ಲಿ ಎಷ್ಟು ಮಗ್ನನಾಗಿದ್ದನೆಂದರೆ ತನ್ನ ಸುತ್ತಲೂ ಗೆದ್ದಲು ಹುಳುಗಳು ಹುತ್ತ ಕಟ್ಟಿದರೂ ವಾಲ್ಮೀಕಿಗೆ ಗೊತ್ತಿರುವುದಿಲ್ಲ. ಇದನ್ನು ನೋಡಿದ ಬ್ರಹ್ಮನು ಇವರನ್ನ ರತ್ನಾಕರ ವಾಲ್ಮೀಕಿ ಎಂದು ಕರೆಯುತ್ತಾನೆ ಎಂದು ಪುರಾಣಗಳು ಹೇಳುತ್ತವೆ ಎಂದು ಹೇಳಿದರು.ಇಂಡಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ ಲಮಾಣಿ, ಇಂಡಿ ಗ್ರೇಡ್ 2 ತಹಶೀಲ್ದಾರ ಧನಪಾಲಶೇಟ್ಟಿ ದೇವೂರ, ಶೀರಶದಾರ ಬಸವರಾಜ ರಾವೂರ, ಎಸ್ ಎಚ್ ಮುಜಗೊಂಡ, ಬಳ್ಳೊಳ್ಳಿ ಕಂದಾಯ ನೀರೀಕ್ಷಕರಾದ ಎಚ್ ಎಚ್ ಗುನ್ನಾಪೂರ, ಇಂಡಿ ತಾಲೂಕು ಪಂಚಾಯಿತಿ ಅಧಿಕಾರಿ ಮುರುಗೇಶ್ ನಾರಾಯಪೂರ, ಎಮ್ ಕೆ ಕೊಡತೆ,ಪ್ರಕಾಶ್ ಚವಡಿಹಾಳ, ಸಿದ್ದು ಪೂಜಾರಿ, ಸೇರಿದಂತೆ ಅನೇಕ ಇಲಾಖೆಯಗಳ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ