ಬರದ ಜಿಲ್ಲೆಯಲ್ಲಿ ಭರ್ಜರಿ ಬೆಳೆ ಬೆಳೆದ ರೈತ ಮಾದೇವಪ್ಪ ಉಪ್ಪಿನಮಳ್ಳಿ
ಸಚೀನ ಇಂಡಿ
ಇಂಡಿ 21: ಸದಾ ಬರಗಾಲದಿಂದ ತತ್ತರಿಸಿರುವ ಜಿಲ್ಲೆ ಅಂದರೆ ವಿಜಯಪೂರ ಜಿಲ್ಲೆ, ಸದಾ ಮೆಕ್ಕೆಜೋಳ, ಹತ್ತಿ, ತೋಗರಿ ಬೆಳೆದು ನಷ್ಟಕ್ಕೊಳಗಾಗುವ ರೈತರು ಅಂದರೆ ವಿಜಯಪೂರ ಜಿಲ್ಲೆಯ ರೈತರು ಎಂದರೂ ತಪ್ಪಾಗಲಾರದು. ಆದರೆ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಮಾದೇವಪ್ಪ ಉಪ್ಪಿನಮಳ್ಳಿ ಎಂಬ ರೈತ ತನ್ನ ಮೂರು ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಹೊಸ ಪ್ರಯೋಗವೊಂದನ್ನು ಕೈಗೊಂಡು ಯಶಸ್ವಿಯಾಗಿದ್ದಾರೆ.
ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ರೈತ ಮಾದೇವಪ್ಪ ಉಪ್ಪಿನಮಳ್ಳಿ ಅವರು ತಮ್ಮ ಮೂರು ಎಕರೆ ಮಡ್ಡಿ ಜಮೀನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುವದರ ಮೂಲಕ ಸುತ್ತ ಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ಡ್ರ್ಯಾಗನ್ ಫ್ರೂಟ್ ಬೆಳೆಯಲು ಜಮೀನು ಹದ ಮಾಡಬೇಕು. ನಂತರ ಬದುಗಳನ್ನು ನಿರ್ಮಿಸಿ,ಆ ಬದುಗಳ ಮೇಲೆ ಕಲ್ಲುಕಂಬ ಅಳವಡಿಸಬೇಕು. ಕಲ್ಲುಕಂಬದ ಮೇಲೆ ಕಬ್ಬಿಣದ ಪಟ್ಟಿಗಳನ್ನು ಅಳವಡಿಸಿ ಜೊತೆ ತಂತಿಗಳನ್ನು ಜೋಡಿಸಬೇಕು.ಒಂದು ಕಂಬದಿಂದ ಎಂಟು ಅಡಿ ಅಂತರದಲ್ಲಿ ಮತ್ತೊಂದು ಕಂಬ ನೆಡಬೇಕು, ಒಂದು ಎಕರೆ ಸುಮಾರು 500 ಕಂಬಗಳು ಬೇಕಾಗುತ್ತವೆ. ಹಾಗೂ ಸಸಿಗಳಿಗೆ ಹನಿ ನೀರಾವರಿ ಮೂಲಕ ಸರಿಯಾಗಿ ನೀರು ಉಣಿಸಬೇಕು, ಹಾಗೂ ಗೊಬ್ಬರ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.ಸಸಿಗಳು ನಿದಾನವಾಗಿ ಬೆಳೆಯುತ್ತವೆ, ಅವಧಿ ಸುಮಾರು 15 ತಿಂಗಳಿಂದ 18 ತಿಂಗಳ ಒಳಗೆ ಡ್ರ್ಯಾಗನ್ ಫ್ರೂಟ್ ಹಣ್ಣು ಕೈಗೆ ಸಿಗುತ್ತದೆ. ನಾನು ಈ ಸಸಿಗಳನ್ನು ಗುಜರಾತ್ ರಾಜ್ಯಕ್ಕೆ ಹೋಗಿ ಜಂಬೂ ಡ್ರ್ಯಾಗನ್ ಫ್ರೂಟ್ ತಿಳಿ ಸಸಿಗಳನ್ನು ತಂದ್ದಿದ್ದು. ಈ ತಳಿ ಬೆಲೆ ಸುಮಾರು 150 ರೂಪಾಯಿ, ಈ ಹಣ್ಣು ಬಹಳಷ್ಟು ಸಿಹಿ ಮಿಶ್ರಿತ ಹಣ್ಣು ಇದು ಆಗಿದೆ. ಆದರೆ ಪ್ರಥಮ ಬಾರಿಗೆ ಪ್ರತಿ ಎಕರೆಗೆ ಎರಡೂವರಿ ಲಕ್ಷದಿಂದ ಮೂರು ಲಕ್ಷದವರೆಗೆ ಖರ್ಚು ಬರುತ್ತದೆ. ನಂತರ ಕಡಿಮೆ ಖರ್ಚು ಬರುತ್ತದೆ. ಪ್ರತಿ ಎಕರೆಗೆ ಮೊದಲು 2.5 ಟನ್ ದಿಂದ 3 ಟನ್ ವರಿಗೆ ಹಣ್ಣು ಬೆಳೆಯಬಹುದು. ನಂತರ ಹೆಚ್ಚು ಇಳುವರಿ ಬರಬಹುದು. ಈಗ ಪ್ರತಿ ಕೆಜಿಗೆ 65 ರಿಂದ 100 ರೂಪಾಯಿವರಿಗೆ ಮಾರಾಟ ಆಗುತ್ತದೆ. ಈ ಬೆಳೆಗೆ ನೀರು ಕಡಿಮೆ ಬೇಕಾಗುತ್ತದೆ ಹಾಗೂ ವಿವಿಧ ಜಿಲ್ಲೆಗಳಿಂದ ಸಾಕಷ್ಟು ಜನರು ಬಂದು ನಮ್ಮ ಡ್ರ್ಯಾಗನ್ ಫ್ರೂಟ್ ಹಣ್ಣುಗಳನ್ನು ಖರಿದಿ ಮಾಡುತ್ತಾರೆ. ಹಾಗೂ ಹಣ್ಣು ಬೆಳೆಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಇದು ಎಲ್ಲಾ ರೋಗಕ್ಕೂ ರಾಮಬಾಣ ಎಂದು ರೈತ ಮಾದೇವಪ್ಪ ಉಪ್ಪಿನಮಳ್ಳಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಡ್ರ್ಯಾಗನ್ ಫ್ರೂಟ್ನಲ್ಲಿ ಓಷಧಿ ಗುಣಗಳಿವೆ. ಕ್ಯಾಲಸಿಂ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದು ಹೆಚ್ಚು ನೀರಿನಾಂಶ, ಪ್ರೋಟೀನ್ ಒಮೆಗಾ 3.6 ಹಾಗೂ ಕೊಬ್ಬಿನ ಆಮ್ಲಗಳಿಂದ ಕೂಡಿದೆ. ಸಕ್ಕರೆ ಕಾಯಿಲೆ, ಬಿ ಪಿ, ಹೃದಯಸಂಬಂಧಿ, ಗ್ಯಾಸ್ಟ್ರಿಕ್, ಕೊಲೆಸ್ಟ್ರಾಲ್ ಕಡಿಮೆಗೊಳಿಸುವಲ್ಲಿ, ಬಿಳಿರಕ್ತ ಕಣಗಳನ್ನು ಹೆಚ್ಚಿಸುತ್ತದೆ ಮತ್ತು ಡೆಂಗಿ ಜ್ವರಕ್ಕೆ, ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗಳಿಗೆ ಈ ಹಣ್ಣು ರಾಮಬಾಣ.
ಡಾ. ಎಮ್ ಕೆ ಹದರಿ ಖ್ಯಾತ್ ವೈದ್ಯರು ಅಥರ್ಗಾ
ನಮ್ಮ ಭಾಗದ ಭೂಮಿ, ಎಲ್ಲಾ ತರಹದ ಹಣ್ಣುಗಳನ್ನು ಬೆಳೆಯಲು ಅತ್ಯಂತ ಫಲವತ್ತಾದ ಮಡ್ಡಿ ಜಮೀನು ನಮ್ಮದು, ಕಡಿಮೆ ನೀರು ಬಳೆಕೆ ಮಾಡಿ ಹಿಂತಾ ಲಾಭದಾಯಕ ಡ್ರ್ಯಾಗನ್ ಫ್ರೂಟ್ ಹಣ್ಣುಗಳನ್ನು ಬೆಳೆದು, ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗಿದೆ.ಎನ್ ಬಿ ಹಿಟ್ನಳಿ
ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಬಳ್ಳೊಳ್ಳಿ