ಮಾ. 25ರೊಳಗೆ ಬಸವೇಶ್ವರ ನೀರಾವರಿ ಯೋಜನೆಗೆ ಬೊಮ್ಮಾಯಿ ಚಾಲನೆ
ಹೊನವಾಡ, ಬೀರ್ಪ ಭಾನಿಶೆ, ಸಿದರಾಮ ಬಿರಾದಾರ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.
ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಜಲಜೀವನ್ ಮಿಶನ್, ಹುಲಿಕೊಡಿ ರಸ್ತೆಗೆ ಭೂಮಿ ಪೂಜೆ
ವೆಂಕಟೇಶ ದೇಶಪಾಂಡೆ
ಅಥಣಿ 01: ಕಾಗವಾಡ ಮತಕ್ಷೇತ್ರದಲ್ಲಿ ಬಿಜೆಪಿ ಅಲೆ ವ್ಯಾಪಕವಾಗಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳಿಂದ ಕಾರ್ಯಕರ್ತರು, ಪದಾಧಿಕಾರಿಗಳು ಬಿಜೆಪಿಗೆ ಸೇರೆ್ಡಯಾಗುತ್ತಿದ್ದಾರೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಚಮಕೇರಿ ಗ್ರಾಮದಲ್ಲಿ 2.75 ಕೋಟಿ ಅನುದಾನದ ಜಲಜೀವನ್ ಮಿಶನ್ ಹಾಗೂ 1 ಕೋಟಿ ವೆಚ್ಚದ ಹುಲಿಕೊಡಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಕಾಗವಾಡ ಮತಕ್ಷೇತ್ರದಲ್ಲಿ 5 ವರ್ಷಗಳ ನನ್ನ ಶಾಸಕ ಸ್ಥಾನದ ಅಧಿಕಾರವಧಿಯಲ್ಲಿ ಶಿಕ್ಷಣ, ನೀರಾವರಿ, ಕುಡಿಯುವ ನೀರು, ವಿದ್ಯತ್, ರಸ್ತೆ ಸೇರಿದಂತೆ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ 3 ಸಾವಿರ ಕೋಟಿಗೂ ಅಧಿಕ ಅನುದಾನ ಬಳಸಿಕೊಂಡಿರುವೆ. ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ 25 ರ ಒಳಗಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಂದ ಚಾಲನೆ ನೀಡಲಾಗುವುದು ಎಂದ ಅವರು ಕಾಗವಾಡ ಮತಕ್ಷೇತ್ರದ ಬರಗಾಲ ಪೀಡೀತ ಗುಂಡೇವಾಡಿ, ಚಮಕೇರಿ, ಬ್ಯಾಡರಟ್ಟಿ, ಅನಂತಪೂರ ಸೇರಿದಂತೆ ಅನೇಕ ಗ್ರಾಮಗಳಿಗೆ ಖಿಳೇಗಾಂವ ಬಸವೇಶ್ವರ ಯೋಜನೆ ನೀರು ತಲುಪುವುದಿಲ್ಲ ಹೀಗಾಗಿ ಈ ಎಲ್ಲ ಗ್ರಾಮಗಳ ಕರೆ ತುಂಬುವ ಯೋಜನೆಗೂ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಕೆರೆ ತುಂಬುವ ಯೋಜನೆ ಅನುಷ್ಠಾನಗೊಂಡ ಅನೇಕ ಕ್ಷೇತ್ರಗಳಲ್ಲಿ ವಿಫಲವಾಗಿವೆ ಹೀಗಾಗಿ ನಮ್ಮ ಕ್ಷೇತ್ರದಲ್ಲಿ ಈ ಯೋಜನೆ ಯಶಸ್ವಿಯಾಗಬೇಕು ಈ ಹಿನ್ನೆಲೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ತಾಂತ್ರಿಕವಾಗಿ ಸಿದ್ಧಪಡಿಸಿರುವ ಈ ಯೋಜನೆಗೆ ಇನ್ನೇರಡು ದಿನಗಳಲ್ಲಿಯೇ ಟೆಂಡರ್ ಕರೆಯಲಾಗುವುದು ಈ ಸಂಬಂಧ ಇಂದು ನಾನು ಬೆಂಗಳೂರಿಗೆ ತೆರಳುತ್ತಿರುವೆ ಎಂದ ಅವರು ಕಾಗವಾಡ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ತಮ್ಮದಾಗಿದೆ ಎಂದರು.
ಚಮಕೇರಿ ಗ್ರಾಮ ಪಂಚಾಯತ ಸದಸ್ಯ ಮಲ್ಲಪ್ಪ ಮಂಗಳೂರ ಮಾತನಾಡಿ, ಶಾಸಕ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಕಾಗವಾಡ ಮತಕ್ಷೇತ್ರದಲ್ಲಿ ಜನಪರ, ಅಭಿವೃದ್ಧಿ ಪರ ಯೋಜನೆಗಳು ಸಾಕಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಂಡಿದ್ದು, ಚಮಕೇರಿ ಗ್ರಾಮದಲ್ಲಿಯೂ ಸಹ ಅನೇಕ ವರ್ಷಗಳಿಂದ ನನೆಗುದಿಗೆಗೆ ಬಿದ್ದಿದ್ದ ರಸ್ತೆ ಕಾಮಗಾರಿಗಳು, ಕುಡಿಯುವ ನೀರು, ಕರೆ ತುಂಬುವ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದ ಅವರು ಮೊದಲಿನ ಶಾಸಕರು ನಮ್ಮ ಗ್ರಾಮದಲ್ಲಿ ಯಾವುದೋ ಒಂದು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿಲ್ಲ ಆದರೆ ನಮ್ಮ ಶ್ರೀಮಂತ ಪಾಟೀಲರು ಮಾತ್ರ ಗ್ರಾಮಸ್ಥರೊಂದಿಗೆ ಚರ್ಚಿಸಿ ಎಲ್ಲರಿಗೂ ಅನಕೂಲವಾಗುವಂತೆ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.
ಬಿಜೆಪಿ ಮುಖಂಡ ಬಸವರಾಜ ಪಾಟೀಲ ಮಾತನಾಡಿ, ಕಾಗವಾಡ ಮತಕ್ಷೃತ್ರದಲ್ಲಿ ಶಾಸಕ ಶ್ರೀಮಂತ ಪಾಟೀಲರ ಜನಪ್ರಿಯತೆ ದಿನದಂದು ದಿನಕ್ಕೆ ಹೆಚ್ಚುತ್ತಿದ್ದು, ನಮ್ಮ ಗ್ರಾಮದಲ್ಲಿಯೂ ಸಹ ಶೇ.90 ರಷ್ಟು ಜನ ಶ್ರೀಮಂತ ಪಾಟೀಲರ ಪರವಾಗಿಯೇ ಇದ್ದಾರೆ ಹೀಗಾಗಿಯೇ ಇಂದು ನೂರಾರು ಸಂಖ್ಯೆಯಲ್ಲಿ ಬೇರೆ ಬೇರೆ ಪಕ್ಷಗಳನ್ನು ತೊರೆದು ಬಿಜೆಪಿ ಸೇರೆ್ಡಗೊಂಡಿದ್ದಾರೆ ಎಂದರು.
ಚಮಕೇರಿ ಗ್ರಾಮದ ನೂರಾರು ಗ್ರಾಮಸ್ಥರು ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಸೇರೆ್ಡಗೊಂಡರು. ಜ್ಯೋತಿಬಾ ಸೂರ್ಯವಶಿ, ರಮೇಶ ಮಂಗಳೂರ, ಕಾಶಿನಾಥ ಬಿರಾದಾರ, ಮಲ್ಲಪ್ಪ ಪಡೋಲಕರ, ಭಗವಂತ ಸೂರ್ಯವಂಶಿ, ತಾತೋಬಾ ಸೂರ್ಯವಂಶಿ, ರಾಮಗೊಂಡ ಹುಳ್ಳೊಳ್ಳಿ, ಮಾರೂತಿ ಸಾವಂತ, ಮಹಾದೇವ ಹೊನವಾಡ, ಬೀರ್ಪ ಭಾನಿಶೆ, ಸಿದರಾಮ ಬಿರಾದಾರ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.