ಅಥಣಿ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಭೂಮಿ ಪೂಜೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಭೂಮಿ ಪೂಜೆ

ವೆಂಕಟೇಶ ದೇಶಪಾಂಡೆ 

ಅಥಣಿ02: ಕಾಗವಾಡ ಮತಕ್ಷೇತ್ರದ ಗ್ರಾಮೀಣ ಭಾಗದ ತಾಯಂದಿರು ಹಾಗೂ ಸಹೋದರಿಯರ ಅನಕೂಲಕ್ಕಾಗಿ ಮನೆ ಮನೆಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸುವ ಮಹಾತ್ವಾಕಾಂಕ್ಷಿ ಜಲಜೀವನ್ ಮೀಶನ್ ಪ್ರತಿ ಗ್ರಾಮದಲ್ಲಿಯೂ ಅನುಷ್ಠಾನಗೊಳಿಸುತ್ತಿರುವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಅವರು ಕಾಗವಾಡ ಮತಕ್ಷೇತ್ರದ ಜಕಾರಟ್ಟಿ ಗ್ರಾಮದಲ್ಲಿ 2.4 ಕೋಟಿ, ನಾಗನೂರ ಪಿ.ಎ ಗ್ರಾಮದಲ್ಲಿ 1 ಕೋಟಿ ಅನುದಾನದ ಜಲಜೀವನ್ ಮೀಶನ್ ಹಾಗೂ 1.3 ಕೋಟಿ ಅನುದಾನದ ಬಳ್ಳಿಗೇರಿ-ಬೆವನೂರ ಹಾಗೂ ಹುಚಗೌಡರ ತೋಟದ ಸಂಪರ್ಕ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.  

    ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮಹಿಳೆಯರಿಗೆ ಕುಡಿಯುವ ನೀರಿನ ತೊಂದರೆ ನೀಗಿಸುವ ಉದ್ದೇಶದಿಂದ ಇಡೀ ದೇಶದಲ್ಲಿ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ತಲುಪಿಸುವ ಈ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದ ಅವರು ಗ್ರಾಮೀಣ ಪ್ರದೇಶದ ಮಹಿಳೆಯರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.  

    ಆಲಜೀವನ್ ಮೀಶನ್ ಯೋಜನೆ ಮೂಲಕ ಗ್ರಾಮಗಳಲ್ಲಿ ಓವ್ಹರ ಹೆಡ್ಡ ಟ್ಯಾಂಕುಗಳನ್ನು ನಿರ್ಮಿಸಿ ಆ ಮೂಲಕ ಮನೆ ಮನೆಗಳಿಗೆ ಪೈಪ ಲೈನ್ ಅಳವಡಿಸಿ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದ ಅವರು ಗುತ್ತಿಗೆದಾರರು ಜಲಜೀವನ್ ಮಿಶನ್ ಯೋಜನೆಯ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.  

    ಕಾಗವಾಡ ಮತಕ್ಷೇತ್ರದಲ್ಲಿ 60 ಕ್ಕೂ ಹೆಚ್ಚು ಹೊಸ ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿಸಿಕೊಂಡು ಈಗಾಗಲೇ ಚಾಲನೆ ನೀಡಿದ್ದೇನೆ ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಎಂದ ಅವರು ಅಂಗನವಾಡಿ ಕೇಂದ್ರದ ಜೊತೆಗೆ ಸರಕಾರಿ ಶಾಲೆಗಳಲ್ಲಿ ಕೊರತೆ ಇರುವ ಕೊಠಡಿಗಳ ನಿರ್ಮಾಣ ಯೋಜನೆಗೂ ಕೂಡ ಈಗಾಗಲೇ ಚಾಲನೆ ನೀಡಿರುವೆ ಎಂದರು.  

ಧುರೀಣ ಮಹಾದೇವ ಮೇತ್ರಿ, ಆರ್‌.ಎಮ್‌.ಪಾಟೀಲ, ಈಶ್ವರ ಕುಂಬಾರೆ, ಬಸಗೌಡ ಪಾಟೀಲ, ಶಿದ್ದು ಖೋತ, ರಾವಸಾಹೇಬ ಘೋರಪಡೆ, ರಾವಸಾಹೇಬ ಮಗದುಮ್, ರೇಷ್ಮಾ ಕಾಂಬಳೆ, ಶಂಕರ ಮದಣ್ಣವರ, ರಮೇಶ ನೀವಲಗಿ, ರಾಜು ಪಾಟೀಲ, ಶಿವಾಜಿ ಸಾತಪುತೆ, ಮಹೇಶ ಕಾಂಬಳೆ, ಗಣೇಶ ಕಾಂಬಳೆ, ಶಿವು  ಶಂಕರಹಟ್ಟಿ, ಸೋಮನಿಂಗ ಶಂಖರಹಟ್ಟಿ, ಶಿವಾನಂದ ಗೊಲಭಾವಿ, ಕೃಷ್ಣಾ ಒಟ್ನಾಳ, ಈರಣ್ಣ ವಾಲಿ, ಎಸ್‌.ಎ.ಸಾಂಬಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.


ಸುದ್ದಿ ಓದಿ