ಅಥಣಿ

ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಶಾಸಕ ಪಾಟೀಲರಿಗೆ ಸಲ್ಲುತ್ತದೆ: ಚವ್ಹಾಣ

ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಶಾಸಕ ಪಾಟೀಲರಿಗೆ ಸಲ್ಲುತ್ತದೆ: ಚವ್ಹಾಣ

ವೆಂಕಟೇಶ ದೇಶಪಾಂಡೆ 

ಅಥಣಿ: ನೀರಾವರಿ, ಲೋಕೋಪಯೋಗಿ, ಜಿಲ್ಲಾ ಪಂಚಾಯತ, ಶಿಕ್ಷಣ, ಜಲಜೀವನ್ ಮಿಶನ್ ಸೇರಿದಂತೆ ವಿವಿಧ ಇಲಾಖೆಗಳಿಂದ ಅಂದಾಜು 2000 ಕೋಟಿ ಅನುದಾನವನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಇದೇ ಮೊದಲ ಬಾರಿಗೆ ಕಾಗವಾಡ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಗುಂಡೇವಾಡಿ ಗ್ರಾಮ ಪಂಚಾಯತ ಸದಸ್ಯ ಹಾಗೂ ಶ್ರೀಮಂತ ಪಾಟೀಲ ಅಭಿಮಾನಿ ಆಬಾಸಾಹೇಬ ಚವ್ಹಾಣ ಹೇಳಿದರು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 

           ಇಡೀ ಇತಿಹಾಸದಲ್ಲಿಯೇ ಗ್ರಾಮೀಣ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಶಾಸಕ ಶ್ರೀಮಂತ ಪಾಟೀಲರಿಗೆ ಸಲ್ಲುತ್ತದೆ. ಈ ಮೊದಲು ಇದ್ದ ಗ್ರಾಮೀಣ ರಸ್ತೆಯನ್ನು 23 ಕೋಟಿ ರೂಗಳ ಅನುದಾನದಲ್ಲಿ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿದೆ ಎಂದರು. 

          ಕಾಗವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಇವರ ಅಧಿಕಾರಾವಧಿಯಲ್ಲಿ 74 ಹೊಸ ಅಂಗಡಿಗಳು ಮಂಜೂರಾಗಿದೆ ಜೊತೆಗೆ 250 ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಕೂಡ ಇವರ ಅವಧಿಯಲ್ಲಿ ನಡೆದಿದೆ ಎಂದರು. ಗ್ರಾಮೀಣ ಮುಖ್ಯ ರಸ್ತೆ. ಸಂಪರ್ಕ, ತೋಟದ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ 200 ಕೋಟಿ ಅನುದಾನ ಶ್ರೀಮಂತ ಪಾಟೀಲ ತಂದಿದ್ದಾರೆ ಎಂದರು. 

                ಇವರ ಅಧಿಕಾರಾವಧಿಯಲ್ಲಿ 3 ನೇ ಸಂಯುಕ್ತ ಗ್ರಾಮೀಣ ಕುಡಿಯುವ ನೀರು ಯೋಜನೆಗೆ 58 ಕೋಟಿ ಮಂಜೂರಾಗಿದೆ ಹಾಗೂ ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಪ್ರತಿ ಮನೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜಲಜೀವನ್ ಮಿಶನ್ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು. 

             ಶಾಸಕ ಶ್ರೀಮಂತ ಪಾಟೀಲ ಸತತ ಪ್ರಯತ್ನದ ಪರಿಣಾಮ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿಯೇ ಈ ಯೋಜನೆ ಕೂಡ ಉದ್ಘಾಟನೆಯಾಗಲಿದೆ ಎಂದ ಅವರು 223 ಕೋಟಿ ರೂ. ಗಳ ಕೆರೆ ತುಂಬುವ ಯೋಜನೆಗೆ ಕೂಡ ಮಂಜೂರಾತಿ ದೊರಕಿದ್ದು ಚುನಾವಣಾ ಪೂರ್ವದಲ್ಲಿಯೇ ಈ ಯೋಜನೆಗೆ ಚಾಲನೆ ಸಿಗಲಿದೆ ಎಂದರು. 

        ಶಾಸಕ ಶ್ರೀಮಂತ ಪಾಟೀಲ ಕಾಗವಾಡ ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ ಎನ್ನದೆ ಎಲ್ಲರೊಂದಿಗೆ ಸೌಹಾರ್ದದಿಂದ ಒಂದಾಗಿ ತಮ್ಮ ಫೌಂಡೇಶನ್ ಮೂಲಕ ಸಹಾಯ, ಸಹಕಾರ ನೀಡುತ್ತಲೇ ಬಂದಿದ್ದಾರೆ ಎಂದರು. 



ಸುದ್ದಿ ಓದಿ