ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಾಮನಿ ಚಾಲನೆ
ಯರಗಟ್ಟಿ 05: ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಸಮುಧಾಯ ಭವನ 12 ಲಕ್ಷ, ಕರಿಸಿದ್ದೇಶ್ವರ ಸಮುದಾಯ ಭವನ, ಮಹಾಲಿಂಗೇಶ್ವರ ದೇವಸ್ಥಾನದ ಜಿರ್ಣೊದ್ಧಾರ ಎನ್ ಕೆ. ಆರ್. ಐ. ಡಿ. ಎಲ್. ಅಡಿಯಲ್ಲಿ ತಲಾ 5 ಲಕ್ಷ ವೆಚ್ಚದ ಕಾಮಗಾರಿಗೆ ವಿಧಾನ ಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಿಸಬೇಕು. ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗಬೇಕು ಎಂದು ಸೂಚಿಸಿದರು.
ಪ್ರತಿ ಗ್ರಾಮ ಪಂಚಾಯತಿಗಳಿಗೆ ತ್ಯಾಜ್ಯ ಸಂಗ್ರಣಾ ವಾಹನ ನೀಡಲಾಗಿದೆ ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿರಿ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ಸ್ವ ಉಧ್ಯೋಗ ಮಾಡಲು ಭೀಜಧನ ಚೆಕ್ ವಿತರಿಸಲಾಗಿ ಮತ್ತು ಸವದತ್ತಿ, ಮುನವಳ್ಳಿ ಪುರಸಭೆಗಳಿ ತಾಲ 4 ಕೋಟಿ, ಯರಗಟ್ಟಿ ಪಟ್ಟಣ ಪಂಚಾಯತಿ 2 ಕೋಟಿ ರೂ. ನಗರೋತ್ಥಾದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಂದು ಹೇಳಿದರು.
ಅಲ್ಲದೆ ಕರ್ನಾಟಕ ಸರಕಾರದ ನೂತನ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಅವರಿಗೆ ಅಭಿನಂದಿಸಿ ಸವದತ್ತಿ ಪಟ್ಟಣಕ್ಕೆ ದಿನದ 24 ತಾಸು ಕುಡಿಯವ ನೀರಿನ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು ಅದನ್ನು ಸಂಪುಟದಲ್ಲಿ ಪ್ರಸ್ತಾಪಿಲು ಕೋರಲಾಗಿದೆ ಹಾಗೂ ಶೀಘ್ರದಲ್ಲಿ ನೂತನ ಯರಗಟ್ಟಿ ತಾಲೂಕಿಗೆ ಪ್ರವಾಸಿ ಮಂದಿರದಲ್ಲಿ ನ್ಯಾಯಾಲ ಪ್ರಾರಂಭಿಸಲಾಗುವುದು. ಇನ್ನೂಳಿದ ಇಲಾಖೆಗಳನ್ನು ಹಂತಹಂತವಾಗಿ ಪ್ರಾರಂಭಿಸಲಾಗುವುದು ಎಂದರು.
ಮಾಜಿ ತಾ. ಪಂ. ಅಧ್ಯಕ್ಷರು ಪರ್ವತಗೌಡ ಪಾಟೀಲ, ಯುವ ಧುರಿಣರಾದ ಅಜಯರಾವ ದೇಸಾಯಿ, ಸತ್ತಿಗೇರಿ ಗ್ರಾ. ಪಂ. ಅಧ್ಯಕ್ಷರಾದ ಗೌಡಪ್ಪ ಸವದತ್ತಿ, ಸದಸ್ಯರಾದ ರವಿಕುಮಾರ, ಪಾಟೀಲ, ಕಿರಣ ಹುಣಶ್ಯಾಳ, ಗುರು ವಾಲಿ, ಸ್ಥಳಿಯರಾದ ಹೇಮಂತ ಹೊಂಗಲ, ಮಹಾಂತೇಶ ಕೊಡ್ಲಿವಾಡ, ಈರಣ್ಣಾ ಅಂಗಡಿ, ಸಂತೋಷ ಮಾಳ್ಮಮನಿ, ಪ್ರವೀಣ ಗಲಗಲಿ, ಶೇಖಪ್ಪ ಕಾದ್ರೋಳಿ, ಕಾರ್ಯಕರ್ತರು ಇತತರು ಉಪಸ್ಥಿತರಿದ್ದರು.