ಬೈಲಹೊಂಗಲ

ಶಕ್ತಿ ಯೋಜನೆಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ

ಶಕ್ತಿ ಯೋಜನೆಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ

ಬೈಲಹೊಂಗಲ 11:  ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ “ಶಕ್ತಿ” ಯೋಜನೆಗೆ ರವಿವಾರದಂದು ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಶಾಸಕ ಮಹಾಂತೇಶ ಕೌಜಲಗಿ ನೀಡಿದರು. 

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಇರುವಂತ ಎಲ್ಲ ಮಹಿಳೆಯರು ಇವತ್ತಿನಿಂದ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಉಚಿತವಾಗಿ, ರಾಜ್ಯದ ಯಾವುದೇ ಬಾಗಕ್ಕೆ ಪ್ರಯಾಣವನ್ನು ಮಾಡಲು ಸರಕಾರ ಅನುಕೂಲ ಮಾಡುಕೊಟ್ಟಿದೆ. ಸರಕಾರ ಒಂದು ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತಂದಿದೆ. ಬೈಲಹೊಂಗಲ ನಗರಕ್ಕೆ ಸಾವಿರಾರು ಬಡ ವಿದ್ಯಾರ್ಥಿನೀಯರು ವ್ಯಾಸಂಗಕ್ಕಾಗಿ ಗ್ರಾಮೀಣ ಪ್ರದೇಶದಿಂದ ಬರುತ್ತಾರೆ. ಅನೇಕ ವಿದ್ಯಾರ್ಥಿನೀಯರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಅಂತಹ ಎಲ್ಲ ವಿದ್ಯಾರ್ಥಿನೀಯರಿಗೆ ಈ ಒಂದು “ಶಕ್ತಿ” ಯೋಜನೆ ಬಹಳ ಅನುಕೂಲ ಆಗುತ್ತದೆ. ಕಾರಣ ಎಲ್ಲ ಮಹಿಳೆಯರು ಈ ಯೋಜನೆಯನ್ನು ಒಂದು ಒಳ್ಳೆ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಹಾಗೂ ಪುರುಷರಿಗಾಗಿ ಶೆಕಡಾ 50 ರಷ್ಟು ಆಸನ ಕಾಯ್ದಿರುಸುವಂತ ವ್ಯವಸ್ತೆ ಸರಕಾರ ಮಾಡಿದೆ ಎಂದರು ಹಾಗೂ ಈ ಯೋಜನೆ ಲಾಭ ಪಡೆಯುತ್ತಿರುವ ಎಲ್ಲ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದರು. 

ಇದೊಂದು ಕರ್ನಾಟಕ ಸರಕಾರದ ಹೊಸ ಯೋಜನೆಯಾಗಿದೆ. ಮಹಿಳೆಯರು ಇನ್ನಷ್ಟು ಪ್ರಬಲವಾಗಲಿ, ಜೀವನದಲ್ಲಿ ಮುಂದೆ ಬರಲಿ, ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ರಂಗದಲ್ಲೂ ಮುಂದೆ ಬರಲಿ ಎಂಬ ಒಳ್ಳೆ ಉದ್ದೇಶದಿಂದ ಸರಕಾರ ಈ ಶಕ್ತಿ ಯೋಜನೆಗೆ ಚಾಲನೆ ಕೊಟ್ಟಿದೆ ಕಾರಣ ಎಲ್ಲಾ ಮಹಿಳೆಯರು ಈ ಶಕ್ತಿ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಉಪವಿಭಾಗಾಧಿಕಾರಿ ಎಪ್ ಪ್ರಭಾವತಿ ಹೇಳಿದರು. 

ನಂತರ ಹೂ ಮಾಲೆಗಳಿಂದ ಅಲಂಕೃತಗೊಂಡ ಬೈಲಹೊಂಗಲದಿಂದ ಬೆಳಗಾವಿಗೆ ಸಂಚರಿಸುವ ಬಸ್‌ನಲ್ಲಿ ಮಹಿಳೆಯರಿಗೆ ಹೂವು ಮತ್ತು ಸಿಹಿ ಹಂಚಿ ಉಚಿತ ಟಿಕೆಟ ನೀಡಿ ಯೋಜನೆಗೆ ಚಾಲನೆ ನೀಡಿ ಪ್ರಯಾಣಿಕರನ್ನು ಬೀಳ್ಕೊಡಲಾಯಿತು. 

ವ್ಯವಸ್ಥಾಪಕ ಶಿವಮೂರ್ತಿ ತಳವಾರ, ಸಿಪಿಐ ಪಂಚಾಕ್ಷರಿ ಸಾಲೀಮಠ, ಕಾರ್ಮಿಕ ಮುಖಂಡ ಸುರೇಶ ಯರಡ್ಡಿ, ಅಬ್ಬಾಸ ದೇವಲಾಪುರ, ಸಾರಿಗೆ ನಿಯಂತ್ರಕರು ಪೀರಸಾಬ ನದಾಫ್, ಸದಾಶಿವ ಕಲಾಲ ಹಾಗೂ ಪ್ರಯಾಣಿಕರು ಇದ್ದರು. 


ಸುದ್ದಿ ಓದಿ