ಅಥಣಿ

ಜಲಜೀವನ್ ಮಿಶನ್ ಕಾಮಗಾರಿಗೆ ಶಾಸಕ ಕುಮಠಳ್ಳಿ ಚಾಲನೆ

ಜಲಜೀವನ್ ಮಿಶನ್ ಕಾಮಗಾರಿಗೆ ಶಾಸಕ ಕುಮಠಳ್ಳಿ ಚಾಲನೆ

ಲೋಕದರ್ಶನ ವರದಿ 


ಅಥಣಿ 18: ನನ್ನ ಮತಕ್ಷೇತ್ರದ ಪ್ರತಿಯೊಂದು ಗ್ರಾಮದ ಪ್ರತಿಯೋರ್ವರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಪ್ರತಿಯೊಂದು ಗ್ರಾಮದಲ್ಲಿ ಜಲಜೀವನ್ ಮಿಶನ್ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಅವರು ಅವರಖೋಡ, ದರೂರ, ಖವಟಕೊಪ್ಪ ಗ್ರಾಮಗಳಲ್ಲಿ ಸುಮಾರು 341 ಲಕ್ಷ ರೂ.ಗಳ ವೆಚ್ಚದ ಜಲಜೀವನ್ ಮಿಶನ್ ಕುಡಿಯುವ ನೀರಿನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. 

       ಸಾರ್ವಜನಿಕರು ಸರಕಾರದಿಂದ ದೊರೆಯುತ್ತಿರುವ ಈ ಎಲ್ಲ ಯೋಜನೆಗಳನ್ನು ಸಮರ​‍್ಪಕವಾಗಿ ಬಳಸಿಕೊಳ್ಳಬೇಕು ಹಾಗೂ ಅವುಗಳ ಸದುಪಯೋಗ ಮಾಡಿಕೊಳ್ಳುವದರೊಂದಿಗೆ ಮೂಲಭೂತ ಕೊರತೆಗಳನ್ನು ಹೋಗಲಾಡಿಸುವಲ್ಲಿ ಸರಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಕೈ ಜೋಡಿಸಬೇಕು ಎಂದ ಅವರು ಗ್ರಾಮೀಣ ಪ್ರದೇಶದ ನಾಗರಿಕರಿಗೂ ಸಹ ಎಲ್ಲ ಯೋಜನೆಗಳು ತಲುಪುವಂತೆ ಮಾಡುವಂತಹ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದರು. 

       ಗುತ್ತಿಗೆದಾರ ಶ್ರೀಮಂತ ಸಲಗರ, ವಿಲಾಸ ಕುಲಕರ್ಣಿ, ಮಲ್ಲಿಕಾರ್ಜುನ ಕೆಂಪಿ, ಸುರೇಶ ಮಾಯಣ್ಣವರ, ಅಣ್ಣಪ್ಪಾ ದೇವರವರು, ಮುರುಗೇಶ ಪಾಟೀಲ, ನಿಂಗಪ್ಪ ನಂದೇಶ್ವರ,  ಮಲ್ಲಿಕಾರ್ಜುನ ಅಂದಾನಿ, ಪ್ರಜ್ವಲ ಢವಳೇಶ್ವರ, ದಶರಥ ಅಂಬಿ, ಈರನಗೌಡ ಪಾಟೀಲ, ಶಂಕರ ನಾಯಿಕ, ಮಲ್ಲಪ್ಪ ಲಡಗಿ, ಜಾಫರ ಸನದಿ, ಮಲ್ಲು ಹಂಚಿನಾಳ, ಶ್ರೀಕಾಂತ ಅಸ್ಕಿ, ಬಸವರಾಜ ಪಾಟೀಲ, ಕಿರಣ ಮಾಳಿ, ಆನಂದ ಕುಲಕರ್ಣಿ, ಡಾ. ವಸಂತ ಬಿಸ್ವಾಗಾರ, ಮಹಾದೇವ ಬೆಳ್ಳಂಕಿ, ರಮೇಶ ಪಾಟೀಲ, ಸಂಗಮೇಶ ಪಾಟೀಲ, ಶಿವಾನಂದ ಬಿಸ್ವಾಗಾರ ಸೇರಿದಂತೆ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ