ಬೈಲಹೊಂಗಲ

ಪಜಾಪಪಂ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಕೌಜಲಗಿ, ಅಧಿಕಾರಿಗಳು ಭೇಟಿ

ಪಜಾಪಪಂ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಕೌಜಲಗಿ, ಅಧಿಕಾರಿಗಳು ಭೇಟಿ

ಬೈಲಹೊಂಗಲ 23: ಪಟ್ಟಣದ ಧಾರವಾಡ ರಸ್ತೆಯ ಎಂ.ಜಿ.ಹೌಸಿಂಗ ಕಾಲೋನಿಯಲ್ಲಿರುವ ಸರಕಾರಿ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿನ ಅವ್ಯವಸ್ಥೆಯ ಕುರಿತಾಗಿ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ರವಿವಾರ ಮತಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ, ತಹಶೀಲ್ದಾರ ಸಚ್ಚಿದಾನಂದ ಕೆ, ತಾ.ಪಂ.ಇಓ ಸುಭಾಷ ಸಂಪಗಾವಿ ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಅಧೀಕ್ಷಕಿ ಕೆ.ಸಿ.ದೇಶನೂರು ಬೇಟಿ ನೀಡಿ ಪರೀಶೀಲಿಸಿದರು. 

   ಈ ವಸತಿ ನಿಲಯದಲ್ಲಿ ಮೂಲ ಸೌಲಭ್ಯಗಳ ಕೊರತೆ ಸೇರಿದಂತೆ ಊಟ, ಉಪಹಾರದಲ್ಲಿ ಕಲ್ಲು, ಹುಳುಗಳು ಬರುತ್ತಿದ್ದು ವ್ಯವಸ್ಥೆ ಸರಿಯಿಲ್ಲ ಊಟ ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿ ಶಾಸಕರ ಕಛೇರಿ, ತಹಶೀಲ್ದಾರ ಕಛೇರಿ, ಇಲಾಖೆಯ ತಾಲೂಕಾ ಮಟ್ಟದ ಕಛೇರಿಗೆ ಖುದ್ದಾಗಿ ಬೇಟಿ ನೀಡಿದ ಇಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.  

    ಈ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ತಹಶೀಲ್ದಾರರು, ಇಲಾಖೆಯ ಕಛೇರಿ ಅಧೀಕ್ಷಕ್ಷರು ತಕ್ಷಣವೇ ಹಾಸ್ಟೇಲಿಗೆ ಬೇಟಿ ಕೊಟ್ಟು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಭವಿಷ್ಯದಲ್ಲಿ ಈ ರೀತಿ ಆಗದ ಹಾಗೆ ನಿಗಾ ವಹಿಸುತ್ತೇವೆ ಎಂದು ಭರವಸೆ ಕೊಟ್ಟರು. ಮುಂಬರುವ ದಿನಗಳಲ್ಲಿ ಯಾವದೇ ರೀತಿ ಇಂಥಹ ಅವ್ಯವಸ್ಥೆ ಉಂಟಾಗದಂತೆ ನಿಲಯ ಪಾಲಕ ಎಲ್.ಆರ್.ಸದಲಗಿ ಅವರಿಗೆ ಸೂಕ್ತ ಸಲಹೆ-ಸೂಚನೆ ನೀಡಿದರು.  

   ತಾ.ಪಂ ಮಾಜಿ ಉಪಾಧ್ಯಕ್ಷ ಮಹಾಂತೇಶ ಕಳ್ಳಿಬಡ್ಡಿ ಸೇರಿದಂತೆ ಇತರರಿದ್ದರು 

ಸುದ್ದಿ ಓದಿ