ಬೈಲಹೊಂಗಲ

ಬೀದಿ ದೀಪಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ

ಬೀದಿ ದೀಪಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ

ಲೋಕದರ್ಶನ ವರದಿ 


ಬೈಲಹೊಂಗಲ 03: ಪಟ್ಟಣದ ಸರ್ವತೋಮುಖ ಅಭಿವದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. 

   ಅವರು ಶನಿವಾರ  ಸಂಜೆ ಪಟ್ಟಣದ ಮುರಗೋಡ ರಸ್ತೆಯಲ್ಲಿ   ಸುಮಾರು 43 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಬೀದಿ ದೀಪಗಳನ್ನು ಬಟನ್ ಹೊಡೆಯುವದರ ಮೂಲಕ ಚಾಲನೆ ನೀಡಿ ಮಾತನಾಡಿದರು. 

    ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಬಡ್ಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜನಾ ಬೊಂಗಾಳೆ ದೀಪಗಳಿಗೆ ಚಾಲನೆ ನೀಡಿದರು. 

   ಮುಖ್ಯಾಧಿಕಾರಿ ಕವಿರಾಜ ನಾಗನೂರ,  ಪುರಸಭೆ ಮಾಜಿ ಅಧ್ಯಕ್ಷ,  ಸದಸ್ಯ ಬಾಬು ಕುಡಸೋಮನ್ನವರ, ಹೇಮಲತಾ ಹಿರೇಮಠ,  ಮಲ್ಲೇಶ ಹೊಸಮನಿ,   ಶಿಂತ್ರಿ, ಬಿ.ಐ.ಗುಡಿಮನಿ, ಡಿ.ಎಂ.ಖಲೀಪ, ಹೆಗಡೆ,  ಸಂತೋಷ ಖೋದಾನಪುರ ಸೇರಿದಂತೆ ಪುರಸಭೆ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಇದ್ದರು. 


ಸುದ್ದಿ ಓದಿ