ಇಂಡಿ

ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ ಎಮ್ ಆರ್ ತೇಲಿ ಆಯ್ಕೆ

ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ  ಎಮ್ ಆರ್ ತೇಲಿ ಆಯ್ಕೆ

ಇಂಡಿ 17: ತಾಲ್ಲೂಕಿನ ಹೋರ್ತಿ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ  ಮಲಕ್ಕಪ್ಪ ರಾಮಗೊಂಡ ತೇಲಿ ಇವರಿಗೆ ಕರ್ನಾಟಕ ಹಿಂದಿ ಸಭಾ ಮಂಡ್ಯ ಇವರಿಂದ ಮಂಡ್ಯದಲ್ಲಿ ನಡೆದ ಹಿಂದಿ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಉತ್ತಮ ಹಿಂದಿ ಭಾಷೆ ಪ್ರಚಾರಕ ಹಾಗೂ 2023-24 ನೇ ಸಾಲಿನ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮಲಕ್ಕಪ ರಾಮಗೊಂಡ ತೇಲಿ ಅವರು 40 ವರ್ಷಗಳಿಂದ ಹಿಂದಿ ಭಾಷೆ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕರ್ನಾಟಕ ಹಿಂದಿ ಪ್ರಚಾರ ಸಮಿತಿ ಬೆಂಗಳೂರು ಇಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ 2022-23 ನೇ ಸಾಲಿನಲ್ಲಿ ಅನುದಾನಿತ ಪ್ರಾಥಮಿಕ ಶಾಲೆಯಗಳ ಚಡಚಣ ವಲಯದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಕರ್ನಾಟಕ ಹಿಂದಿ ಸಭಾ ಸಮಿತಿ ಮಂಡ್ಯ ಅಧ್ಯಕ್ಷ ಎಂ ಕೆ ಶಂಕರನಾರಾಯಣ ಭಟ್ ಹಾಗೂ ಸಂಸ್ಥಾಪಕ ಕಾರ್ಯದರ್ಶಿ ಎಸ್ ವಿನಯಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆದರ್ಶ  ಶಿಕ್ಷಕ ಪ್ರಶಸ್ತಿ ಆಯ್ಕೆ ಆಗಿದ್ದೇಕೆ  ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಅನೀತಾ ಬೋಸಗಿ ಹಾಗೂ ಮುಖ್ಯ ಗುರುಗಳಾದ ಬಿ ಬಿ ಗಡ್ಡದ ಹಾಗೂ ಆಡಳಿತ ಮಂಡಳಿ, ಶಿಕ್ಷಕ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ