ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ :4,70 ಲಕ್ಷ ನಗ, ನಾಣ್ಯ ಬಂಗಾರ ಆಸ್ತಿ ಪತ್ತೆ

ರಾಣೇಬೆನ್ನೂರಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ :4,70 ಲಕ್ಷ ನಗ, ನಾಣ್ಯ ಬಂಗಾರ ಆಸ್ತಿ ಪತ್ತೆ

ರಾಣೆಬೇನ್ನೂರ:ಜೂ 2 ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯ ಹಾವೇರಿ ನಿರ್ಮಿತಿ ಕೇಂದ್ರದ ಇಂಜನೀಯರ ವಾಗೀಶ ಶೆಟ್ಟರ್ ಅವರ ಮನೆಯಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ ಇಂದಾ  ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ.ಬುಧವಾರ ಬೆಳ್ಳಂಬೆಳಿಗ್ಗೆ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ  ಅಧಿಕಾರಿಗಳು ದಾಖಲೆ ಪರಿಶೀಲನೆ ಸಮಯದಲ್ಲಿ ಅರ್ಧ ಕೆಜಿ ಬಂಗಾರ, ಎರಡು ಕೆಜಿ ಬೆಳ್ಳಿ, 18.30 ಲಕ್ಷ ಸೇರಿದಂತೆ ಹಣ ಎಣಿಸುವ ಮೆಷಿನ್ ಪತ್ತೆಯಾಗಿದೆ.ಇದರ ಜತೆಯಾಗಿ ಮೂರು ಕಾರು, ಎರಡು ಟ್ರಾಕ್ಟರ್, ಎರಡು ಬೈಕ್, ಎಂಟು ಮನೆ, ರಾಜ್ಯದ ವಿವಿಧ ಭಾಗದಲ್ಲಿ16 ಸೈಟ್ ಸೇರಿದಂತೆ 65 ಎಕರೆ ಜಮೀನು ಹೊಂದಿರುವ ದಾಖಲೆ ಪತ್ತೆಯಾಗಿದೆ. ಇದೆ ಸಮಯದಲ್ಲಿ 10 ಇಂಚಿನ ಜಿಂಕೆ ಕೊಂಬು ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾಗೀಶ ಶೆಟ್ಟರ್ ಕಳೆದ ಹತ್ತು ವರ್ಷಗಳಿಂದ ಇಂಜನೀಯರಾಗಿ ಸೇವೆ ಸಲ್ಲಿಸುತ್ತಿದ್ದು ಅಪಾರ ಆಸ್ತಿಯನ್ನು ಹೊಂದಿದ್ದು ದಾಳಿ ಸಮಯದಲ್ಲಿ ಒಟ್ಟು 4.75 ರೂಪಾಯಿಯ ಆಸ್ತಿ ಪತ್ತೆಯಾಗಿದೆ. ದಾಳಿ ಮುಂಚೇಣಿಯಲ್ಲಿ ಇನ್ಸ್ಪೆಕ್ಟರ್ ಮಧುಸೂದನ್ ಮಸ್ತಾಕ್ ಅಹಮ್ಮದ್ ಮಂಜುನಾಥ ನಡುವಿನಮನಿ, ರಫೀಕ್, ಬಸವರಾಜ ಸಂಕಣ್ಣನವರ್, ಮತ್ತಿತರರು ಇದ್ದರು. ದಾವಣಗೆರೆ ಲೋಕಾಯುಕ್ತ ಎಸ್ ಪಿ ಎಂ ಎಸ್ ಕಮಲಾಪುರೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಸುದ್ದಿ ಓದಿ